ಸಚಿವ ಭೈರತಿ ಬಸವರಾಜ್ ಕಾರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು..

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾರಿಗೆ ಮುತ್ತಿಗೆ ಹಾಕಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ, ಸಚಿವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು,ಕೇಂದ್ರದ ವಿರುದ್ಧ ಘೋಷಣೆ ಕೂಗಿ ಸಚಿವರಿಗೆ ಬಿಸಿ ಮುಟ್ಟಿಸಿದರು. ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ,ಕೋವಿಡ್ ೧೯ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರವು ಹೊಸ ವಿದ್ಯುತ್ ಮಸೂದೆ ಜಾರಿಗೆ ತರುತ್ತಿದೆ.ದೇಶವೇ ಸಂಕಷ್ಟದಲ್ಲಿರುವಾಗ ಆಡಳಿತದಿಂದ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಅಲ್ಲದೆ,ಯಾವುದೇ ಕಾರಣಕ್ಕೂ ಹೊಸ ವಿದ್ಯುತ್ ಕಾಯ್ದೆ ಜಾರಿಗೆ ತರಬಾರದು.ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ…

Read More

ಶಿರಾದಿಂದ ಬಸ್ ಸಂಚಾರ ಆರಂಭ..

ಶಿರಾ(ತುಮಕೂರು):ರಾಜ್ಯದಲ್ಲಿ ಇಂದಿನಿAದ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಪ್ರತಿಯೊಬ್ಬ ಪ್ರಯಾಣಿಕರನ್ನು ಗೇಟ್‌ನಲ್ಲಿಯೇ ತಡೆದು ಅವರ ಹೆಸರು, ಎಲ್ಲಿಂದ-ಎಲ್ಲಿಗೆ, ಮೊಬೈಲ್ ನಂಬರ್ ಪಡೆದು ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಬಸ್‌ನಿಲ್ದಾಣದ ಒಳಗೆ ಬಿಡಲಾಯಿತು. ಅಲ್ಲದೆ, ಥರ್ಮಲ್ ಮೀಟರ್‌ನಲ್ಲಿ ೯೯ ಡಿಗ್ರಿಗಿಂತ ಅಧಿಕ ಉಷ್ಣಾಂಶ ಕಂಡು ಬಂದವರನ್ನು, ೬೦ ವರ್ಷ ಮೇಲ್ಪಟ್ಟವರನ್ನು, ಮಕ್ಕಳನ್ನು, ಗರ್ಭಿಣಿಯರನ್ನು ವಾಪಸ್ ಕಳಿಸಲಾಯಿತು.ಉಳಿದಂತೆ ದೂರದ ಬೆಂಗಳೂರು,ಮತ್ತು ತುಮಕೂರು ನಗರಗಳಿಗೆ ಮಾತ್ರ ಬಸ್‌ಗಳನ್ನು ಬಿಡಲಾಯಿತು.ಒಂದು ಬಸ್‌ನಲ್ಲಿ ಕೇವಲ ೩೦ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಯಿತು. ಇದಲ್ಲದೆ, ದೂರದ ಊರುಗಳಿಗೆ ತೆರಳುವವರು ಶಿರಾ ನಗರದ ಮುಖ್ಯ ಬಸ್‌ನಿಲ್ದಾಣಕ್ಕೆ ಬಂದೇ ಪ್ರಯಾಣಿಸಬೇಕಿದೆ. ಜೊತೆಗೆ ರಸ್ತೆ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಕೇವಲ ಇಳಿಯುವವರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಎಂದು ತಿಳಿದು ಬಂದಿದೆ. ಇನ್ನು ಪ್ರಥಮ ದಿನವಾದ ಇಂದು ಸುಮಾರು…

Read More

ದಾವಣಗೆರೆ ಜಿಲ್ಲಾಡಳಿತಕ್ಕೆ 6 ಸಾವಿರ ಮೆಡಿಸನ್ ಕಿಟ್ ಹಸ್ತಾಂತರಿಸಿದ ನಮ್ಮ ಹೋಮಿಯೋಪತಿ

ದಾವಣಗೆರೆ : ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ,ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಪಾಲಿಕೆ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ವೈದ್ಯ ಶಾಲಾ ಪ್ರೆöÊ.ಲಿ.,ನ ನಮ್ಮ ಹೋಮಿಯೋಪತಿ ಸಂಸ್ಥೆವತಿಯಿ0ದ ಮೆಡಿಸನ್ ಕಿಟ್‌ಗಳನ್ನು ವಿತರಿಸಲಾಗಿದೆ. ಅಂದ ಹಾಗೇ ದಾವಣಗೆರೆಯಲ್ಲಿ ನಮ್ಮ ಹೋಮಿಯೋಪತಿ ಸಂಸ್ಥೆ ಸುಮಾರು ೬ ಸಾವಿರ ಮೆಡಿಸನ್ ಕಿಟ್‌ಗಳನ್ನು ಜಿಲ್ಲಾಧಿಕಾರಿ ಡಿಸಿ ಮಹಾಂತೇಶ್ ಆರ್. ಬೀಳಗಿ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ,ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್ ಗೌಡ, ನಮ್ಮ ವೈದ್ಯ ಶಾಲಾ ಪ್ರೆöÊ.ಲಿ.,ನ ನಿರ್ದೇಶಕ ಡಾ.ಮಂಜುನಾಥ್ ಸೇರಿದಂತೆ ನಮ್ಮ ಹೋಮಿಯೋಪತಿ ಸಂಸ್ಥೆ ಸಿಬ್ಬಂದಿ ಹಾಜರಿದ್ದರು. ಇದೇ ವೇಳೆ ದಾವಣಗೆರೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ,ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪಾಲಿಕೆ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಈ ಕಿಟ್ ಹೆಚ್ಚಿನ…

Read More

ತುಮಕೂರು ನಗರದ ಮೇಲೆ ನಿಗಾ, ರಸ್ತೆ ಮಾರ್ಗ ಬದಲಾವಣೆ

ತುಮಕೂರು:ಕೋವಿಡ್–೧೯ ಕೊರೊನಾ ವೃಸ್ ಹರಡದಂತೆ ತಡೆಗಟ್ಟುವ ಸಂಬAಧ ಮುನ್ನಚರಿಕೆ ಕ್ರಮವಾಗಿ ತುಮಕೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ತುಮಕೂರು ನಗರಕ್ಕೆ ಬರುವ ಕೆಲವೊಂದು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು ಮತ್ತು ತುಮಕೂರು ನಗರದ ಒಳಗಡೆ ಬರುವ ವಾಹನಗಳಿಗಾಗಿ ಮಾರ್ಗಗಳನ್ನು ಬದಲಾಯಿಸಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ. ತುಮಕೂರು ನಗರಕ್ಕೆ ಬರುವವರು ಹೀಗೆ ಬನ್ನಿ.. ೧.ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ಯ ಜಾಸ್ ಟೋಲ್ ಗೇಟ್ ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸಬೇಕು. ೨.ಕ್ಯಾತ್ಸಂದ್ರ ಸಿ.ಎಂ.ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ.ಎಲ್.ಎ ರಾಜಣ್ಣ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ…

Read More

ದಾವಣಗೆರೆಯಲ್ಲಿ ಕೊರೊನಾ ಸಭೆ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಬಿಜೆಪಿ ಸಂಸದ, ಶಾಸಕ

ದಾವಣಗೆರೆ: ಏಕವಚನದಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದಿದೆ. ಕೊವಿಡ್ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಏ ಏನೋ ಮಾತಾಡ್ತೀಯಾ ನೀನು ಎಂದ ಸಂಸದ,ಏ ಕೂತುಕೊಳ್ಳೊ ನೀನು, ನಿಂದೇನೋ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ಜಗಳ ಮಾಡಿಕೊಂಡಿದ್ದಾರೆ. ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ್ ಆಕ್ಷೇಪಣೆ ಮಾಡುತ್ತಿದ್ದಂತೆ ಏಕವಚನದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತಾಡಿದ್ದಾರೆ. ಮಾಡಾಳು ವಿರುಪಾಕ್ಷಪ್ಪ ಮಾತಿಗೆ ಕುರ್ಚಿಯಿಂದ ಎದ್ದು ಮಾಡಾಳು ಬಳಿ ಬಂದು ಏನೋ ನಿಂದು ಅಂತ ಹೇಳುತ್ತಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿ ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಎಸ್ ಪಿ ಹನುಮಂತರಾಯ…

Read More

ಹಾರೆ ಹಿಡಿದು ಬೆವರು ಸುರಿಸಿ ದುಡಿದ ಸಿಎಂ ರಾಜಕೀಯ ಕಾರ್ಯದರ್ಶಿ

ದಾವಣಗೆರೆ: ಹಿಂದೆಲ್ಲಾ ತೆಪ್ಪ ಚಲಾಯಿಸಿ,ಸರ್ಕಾರಿ ಬಸ್ ಓಡಿಸಿ ಸುದ್ದಿಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇವತ್ತು ಸ್ವತಃ ಹಾರೆ ಹಿಡಿದು ಕೂಲಿ ಕಾರ್ಮಿಕರ ಜೊತೆ ಬೆವರು ಸುರಿಸಿ ದುಡಿದಿದ್ದಾರೆ..! ಹೌದು, ಲಾಕ್‌ಡೌನ್ ಮೇ ೩ರವರೆಗೆ ವಿಸ್ತರಣೆ ಮಾಡಲಾಗಿದ್ದು, ಕೂಲಿ – ಕಾರ್ಮಿಕರು ಕೆಲಸ ಇಲ್ಲದೇ ಕಂಗಾಲಾಗಿದ್ದರು.ಹೀಗಾಗಿ ಇವರ ನೆರವಿಗೆ ಬಂದಿರೋ ಎಂ.ಪಿ.ರೇಣುಕಾಚಾರ್ಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಅಲ್ಲದೆ, ಸ್ವತಃ ಹಾರೆ ಹಿಡಿದು ಕಾರ್ಮಿಕರ ಜೊತೆ ಸ್ವಲ್ಪ ಸಮಯ ಕೆಲಸ ಮಾಡಿದರು. ಅಲ್ಲಿನ ಕೆರೆ ಕಾಮಗಾರಿ ಸಹ ವೀಕ್ಷಿಸಿದರು. ಇನ್ನು ಕಾರ್ಮಿಕರು ಕೆಲಸದ ವೇಳೆ ಅಂತರ ಕಾಯ್ದುಕೊಳ್ಳಬೇಕು,ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸಿ ಎಂದು ಎಂ.ಪಿ.ರೇಣುಕಾಚಾರ್ಯ ಕಾರ್ಮಿಕರಿಗೆ ಸಲಹೆ ನೀಡಿದರು. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Read More

ಬೆಣ್ಣೆ ನಗರಿ ದಾವಣಗೆರೆ ಜನರಿಗೆ ಲಾಕ್ ಡೌನ್ ಯಾವಾ ಲೆಕ್ಕಾ ಹೇಳಿ..?

ದಾವಣಗೆರೆ: ಅದ್ಯಾಕೋ ಮೊದಲ ಹಂತ ಅಲ್ಲ,ಎರಡನೇ ಹಂತದ ಲಾಕ್ ಡೌನ್‌ಗೂ ಬೆಣ್ಣೆ ನಗರಿ ದಾವಣಗೆರೆ ಜನರು ಕ್ಯಾರೆ ಎನ್ನುತ್ತಿಲ್ಲ. ಜೊತೆಗೆ ಇಲ್ಲಿನ ಹಲವು ಕಡೆ ವಾಹನ ಸಂಚಾರ ಜೋರಾಗಿದ್ದು,ಹಿಂದೆ ಬರುವ ಆ್ಯಂಬುಲೆನ್ಸ್ಗೂ ದಾರಿ ಬಿಡದಷ್ಟು ಓಡಾಟ ಆರಂಭಸಿವೆ. ಸದ್ಯ ದಾವಣಗೆರೆ ನಗರದ ಗಾಂಧಿ ವೃತ್ತದ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ಆ್ಯಂಬುಲೆನ್ಸ್ಗೂ ದಾರಿ ಬಿಡದೆ ವಾಹನಗಳು ಸಾಲುಗಟ್ಟಿ ನಿಂತಿವೆ.ಪರಿಣಾಮ ಇಲ್ಲಿ ಲಾಕ್ ಡೌನ್ ಇದೆಯೋ ಇಲ್ವೋ ಎನ್ನುವ ಸಂಶಯ ಸ್ವತಃ ಪೊಲೀಸರನ್ನೇ ಕಾಡಲಾರಂಭಿಸಿದೆಯAತೆ.. ಇನ್ನು ಮೇ ೩ ರವರೆಗೆ ಲಾಕ್ ಡೌನ್ ವಿಸ್ತರಣೆ ಮುಂದುವರಿಕೆ ಮಾಡಲಾಗಿದ್ದರೂ,ಜನರು ಮಾತ್ರ ಇದಕ್ಕೆ ಸ್ಪಂದಿಸದೇ ತಮ್ಮ ವಾಹನಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಓಡಾಟ ಆರಂಭಿಸಿದ್ದಾರೆ.ಪರಿಣಾಮ ನಗರದ ಹಲವು ಕಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿರುವ ಘಟನೆಗಳು ಕೂಡ ಬೆಳಕಿಗೆ ಬಂದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ನೆಗೆಟಿವ್ ಬಂದ ಬಳಿಕವೂ…

Read More

ಅಂಗನವಾಡಿ ಕಾರ್ಯಕರ್ತೆ ಮೇಲೆ ಯುವಕರಿಂದ ಹಲ್ಲೆ..

ದಾವಣಗೆರೆ : ಅಂಗನವಾಡಿ ಕಾರ್ಯಕರ್ತೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಿದರಳ್ಳಿ ತಾಂಡಾದಲ್ಲಿ ನಡೆದಿದೆ. ಶಶಿಕಲಾ ಬಾಯಿ ಹಲ್ಲೆಗೊಳಗಾದ ಅಂಗನವಾಡಿ ಕಾರ್ಯಕರ್ತೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದ ವೇಳೆ ಗ್ರಾಮಕ್ಕೆ ಬೆಂಗಳೂರಿನಿAದ ಬಂದಿದ್ದ ೮ ಜನ ಯುವಕರು ಲಾಕ್ ಡೌನ್ ಇದ್ದರೂ ಅನಾವಶ್ಯಕವಾಗಿ ಓಡಾಡುತ್ತಿದ್ರು. ಈ ವೇಳೆ ಶಶಿಕಲಾ ಯುವಕರಿಗೆ ಬುದ್ದಿವಾದ ಹೇಳಿದ್ದರು.ಮನೆಯಲ್ಲಿ ಇರುವಂತೆ ಮನವಿ ಮಾಡಿದ್ದರು. ಇದರಿಂದ ಕುಪಿತಗೊಂಡ ಯುವಕರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಗೊಂಡ ಇವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತೆರಳಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಕಾರ್ಯಕರ್ತೆಯನ್ನು ಭೇಟಿ ಮಾಡಿ ನಿಮ್ಮ ಜೊತೆ ಸರ್ಕಾರ ಇದೆ, ಹೆದರಬೇಡಿ ಎಂದು ಸಾಂತ್ವನ ಹೇಳಿದ್ದಾರೆ. ನ್ಯೂಸ್ ಬ್ಯೂರೋ ಎಕ್ಸ್…

Read More

ಕೊರೊನಾ ಅಬ್ಬರ ನಡುವೆ ಮೇಯರ್-ಡಿಸಿ `ಪಾಸ್ ಗುದ್ದಾಟ’..

ದಾವಣಗೆರೆ: ಒಂದು ಕಡೆ ಕೊರೊನಾ ಅಬ್ಬರಿಸಿ ಜೀವಗಳನ್ನ ಬಲಿ ಪಡೆಯುತ್ತಿದ್ರೆ,ಇನ್ನೊಂದು ಕಡೆ ದಾವಣಗೆರೆ ಮೇಯರ್ ಹಾಗೂ ಜಿಲ್ಲಾಧಿಕಾರಿ ನಡುವೆ ಪಾಸ್ ವಿಷಯದಲ್ಲಿ ಗುದ್ದಾಟ ಆರಂಭಗೊAಡಿದೆ. ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಪಾಸ್ ವಿತರಣೆ ಮಾಡಿದ್ದರು. ಮೇಯರ್ ಕೂಡ ಪಾಲಿಕೆ ವತಿಯಿಂದ ವ್ಯಾಪಾರಸ್ಥರಿಗೆ ಸಾವಿರಾರು ಪಾಸ್ ವಿತರಿಸಿದ್ದರು. ಆದರೆ ಮೇಯರ್ ನೀಡಿದ ಪಾಸ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಮೇಯರ್ ನೀಡಿದ್ದ ಪಾಸ್‌ಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಸಿಂಧುಗೊಳಿಸಿದ್ದರು. ಇನ್ನು ಇದೇ ವಿಷಯವಾಗಿಯೇ ಮೇಯರ್ ಬಿ.ಜಿ.ಅಜಯ್ ಕುಮಾರ್ ಮತ್ತು ಡಿಸಿ ಮಹಾಂತೇಶ್ ಬೀಳಗಿ ನಡುವೆ ಜಗಳ ನಡೆದಿದೆ. ಅಂದ ಹಾಗೇ ಇಂದು ಸುದ್ದಿಗೋಷ್ಟಿ ಮಾತನಾಡಿದ ನಾನು ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ. ಕಳೆದ ೧೫ ದಿನಗಳಿಂದ ಪಾಸ್‌ಗಾಗಿ ಪಾಲಿಕೆ ಪರದಾಡಿದೆ. ಆದರೆ ಜಿಲ್ಲಾಡಳಿತ ಪಾಸ್ ಕೊಡಲಿಲ್ಲ. ನಾನು ವ್ಯಾಪಾರಿಗಳ ಕಷ್ಟ ನೋಡಲಾಗದೆ ಪಾಸ್ ನೀಡಿರುವೆ. ಆದರೆ…

Read More

ಗುಂಡಿಟ್ಟು ಕೊಲ್ಲಿ,ಯಾರನ್ನ ಗೊತ್ತಾ..?

ದಾವಣಗೆರೆ : ವೈರಸ್ ಹರಡುತ್ತಿರುವುದು ಒಂದು ರೀತಿಯ ಭಯೋತ್ಪಾದನೆ ಇದ್ದಂತೆ, ಅವರೆಲ್ಲ ದೇಶದ್ರೋಹಿಗಳು.ಹೀಗಾಗಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಚಿಕಿತ್ಸೆ ಪಡೆಯವದವರನ್ನು ಗುಂಡಿಟ್ಟು ಕೊಲ್ಲಬೇಕು ಅಂತ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು,ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು ಆಸ್ಪತ್ರೆಗೆ ಬನ್ನಿ ಎಂದು ಪ್ರಧಾನಿ, ಸಿಎಂ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡಿದ್ದಾರೆ ಅಂತ ಕಿಡಿಕಾರಿದರು. ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದವರು ಚಿಕಿತ್ಸೆ ಪಡೆಯದೇ ಎಸ್ಕೇಪ್ ಆಗುತ್ತಿದ್ದರೋ ಅವರನ್ನು ಯಾರೂ ರಕ್ಷಣೆ ಮಾಡಬಾರದು. ಅವರನ್ನು ಗುಂಡಿಟ್ಟು ಕೊಲೆ ಮಾಡಿದರೂ ತಪ್ಪಿಲ್ಲ. ಎಲ್ಲಾ ಅಲ್ಪಸಂಖ್ಯಾತರು ಭಯೋತ್ಪಾದಕರಲ್ಲ, ದೇಶದ್ರೋಹಿಗಳು ಅಲ್ಲ ಅಂತ ಹೇಳಿದರು. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Read More