ಖಾನಾಪೂರ: ಮೈಲಾರ ಮಲ್ಲಣ್ಣಾ ಪಲ್ಲಕ್ಕಿ ಉತ್ಸವ; ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಈಶ್ವರ್ ಖಂಡ್ರೆ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ಅವರು ಚಾಲನೆ ನೀಡಿದರು. ನಿನ್ನೆ ರಾತ್ರಿ 11.30ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಅವರು, ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ವರ್ಷ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಕೊರೊನಾ ಹಾವಳಿ ಇಲ್ಲದಿದ್ದರೆ ದೊಡ್ಡಮಟ್ಟದ ಜಾತ್ರೆ ಇಲ್ಲಿ ನಡೆಯುತ್ತಿತ್ತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೇವೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಪಂಡಿತ್ ರಾವ್ ಚಿದ್ರಿ,…

Read More

ಬೆಳೆ ಹಾನಿ: ಶಾಸಕ ಬಂಡೆಪ್ಪ ಖಾಶೆಂಪುರ್ ಭೇಟಿ, ಪರಿಶೀಲನೆ..

ಬೀದರ್: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತೊಗರಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾನಿಗಿಡಾಗಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜಮೀನುಗಳಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಬಾಪೂರ್, ಮಗದಾಳ, ಮರಕುಂದಾ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದ ಅವರು, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಮರಕುಂದಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮದ ಮಹಿಳೆಯರು ತಮ್ಮೂರಿನ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಶಾಸಕರು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ರೈತರ ಜಮೀನುಗಳಲ್ಲಿ ನೀರು ನುಗ್ಗಿದ್ದು, ಅನೇಕ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.…

Read More

ಮನೆ ಹಾನಿ: ಭೇಟಿ ನೀಡಿ ಪರಿಶೀಲಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್..!

ಬೀದರ್: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ಸಂಗೋಳಗಿ ಗ್ರಾಮದ ಬೊಮ್ಮಗೊಂಡೇಶ್ವರ ದೇವಸ್ಥಾನದ ಹತ್ತಿರವಿರುವ ಸರಸ್ವತಿ ಗಂಡ ಶಿವರಾಜ್ ರವರ ಮನೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಮನೆಗೆ ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್,ಮನೆ ಸಂಪೂರ್ಣವಾಗಿ ಹಾಳಾಗಿದ್ದು,ಆದಷ್ಟು ಬೇಗ ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ ಕುಟುಂಬದ ಸದಸ್ಯರು,ಬೀದರ್ ದಕ್ಷಿಣ ಜೆಡಿಎಸ್ ಅಧ್ಯಕ್ಷರು ಸಂಜುರೆಡ್ಡಿ ನಿರ್ಣಾ,ರಾಜಶೇಖರ ಬನ್ನಳ್ಳಿ, ರವಿ,ಅಶೋಕ್ ಪಾಟೀಲ್,ಅನಿಲ್ ಪಾಟೀಲ್,ಬಾಬು ಮಳಗಾರ,ಶ್ರೀನಿವಾಸ,ಮಾರುತಿ ಹತ್ತಿ,ಸ್ಯಾಮಸನ್,ಈಶ್ವರ್,ನಾಗಶೆಟ್ಟಿ ಪಾಟೀಲ್,ಮೆಹಬೂಬ್ ಸಾಬ,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು,ಸ್ಥಳೀಯ ಮುಖಂಡರು,ಕಾರ್ಯಕರ್ತರು,ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು,ಶಾಸಕ ಬಂಡೆಪ್ಪ ಖಾಶೆಂಪುರ್ ನೇತೃತ್ವದಲ್ಲಿ ವಿಶೇಷ ಪೂಜೆ..!

ಬೀದರ್ :ಜಿಲ್ಲೆಯಲ್ಲಿ ಮಳೆಯ ಅಭಾವ ಉಂಟಾದ ಪರಿಣಾಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಳ್ಳಿ ಗ್ರಾಮಸ್ಥರು ಮಳೆರಾಯನಿಗಾಗಿ ದೇವರ ಮೊರೆ ಹೋಗಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಗ್ರಾಮದ ಮೈಸಮ್ಮಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮನ್ನಳ್ಳಿ ಕೆರೆ ವೀಕ್ಷಿಸಿ,ಮೈಸಮ್ಮಾ ದೇವಿಗೆ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದೆ.ಮೈಸಮ್ಮಾ ದೇವಿ ಜಿಲ್ಲೆಗೆ ಉತ್ತಮ ಮಳೆ ತರಲಿ. ಜಿಲ್ಲೆಯ ಕೆರೆ – ಕಟ್ಟೆಗಳು ಭರ್ತಿಯಾಗಲಿ. ಮನ್ನಳ್ಳಿ ಗ್ರಾಮದ ಕೆರೆ ತುಂಬಿ ರೈತರಿಗೆ, ಗ್ರಾಮಸ್ಥರಿಗೆ ಅನುಕೂಲವಾಗಲಿ,ಮೈಸಮ್ಮಾ ದೇವಿ ಉತ್ತಮ ಮಳೆ ಬೆಳೆಗಳನ್ನು ನೀಡಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ರಾಜು ಮುಲ್ಗೆ, ದೀಪಕ್,ಶಂಕರ್ ಬಾಬು ಸೇನಾ, ರಮೇಶ್ ಜಮಾದಾರ,ವೀರಶೆಟ್ಟಿ, ಚಂದ್ರಕಾಂತ ಮಡಿಕಿ, ಮಲ್ಲಿಕಾರ್ಜುನ, ಅನಿಲ್…

Read More

ಮಸೀದಿ ಆಯ್ತು ಈಗ ಐಸೋಲೇಷನ್ ವಾರ್ಡ್ ನಲ್ಲೇ ನಮಾಜ್..

ಬೀದರ್: ಮಸೀದಿ ನಂತರ ಇದೀಗ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲೇ ಮುಸ್ಲಿಂ ಮುಖಂಡರು ನಮಾಜ್ ಆರಂಭಿಸಿದ್ದಾರೆ. ಹೌದು, ಇಂತಹದೊAದು ಘಟನೆ ನಡೆದಿರೋದು ಬೀದರ್ ಜಿಲ್ಲೆಯಲ್ಲಿ . ಅಂದ ಹಾಗೇ ಜಿಲ್ಲಾ ಉಸ್ತುವಾರಿ ಸಚಿವರು ಆಗಿರೋ ಪಶು ಸಂಗೋಪನೆ ಮಂತ್ರಿ ಪ್ರಭು ಚವ್ಹಾಣ್,ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಭೇಟಿ ನೀಡಿದರು. ಆದರೆ ಸಚಿವರ ಭೇಟಿ ಸಂದರ್ಭದಲ್ಲೇ ವಾರ್ಡ್ನಲ್ಲಿದ್ದ ಕೆಲ ಮುಸ್ಲಿಂ ಮಂದಿ ತಮ್ಮ ಬೆಡ್‌ಗಳಿಂದ ಕೆಳಗೆ ಕುಳಿತು ನಮಾಜ್ ಮಾಡುತ್ತಿರುವುದು ಗಮನಕ್ಕೆ ಬಂತು. ತಕ್ಷಣ ಕೆಂಡಮAಡಲರಾದ ಸಚಿವ ಪ್ರಭು ಚವ್ಹಾಣ್, ಒಟ್ಟಾಗಿ ಕುಳಿತುಕೊಳ್ಳಲು ಬೇಡ,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದವರೆಗೆ ಎಲ್ಲರೂ ಹೇಳುತ್ತಿದ್ದಾರೆ.ಆದರೆ ನೀವು ಇದೆಲ್ಲ ಮುಂದುವರಿಸಿದ್ದಿರಿ. ಹೀಗೆ ಮಾಡೋದು ಸರಿಯಲ್ಲ, ಏನೆ ಮಾಡೋದಿದ್ರು ಮನೆಯಲ್ಲಿ ಇದ್ದಾಗ ಮಾಡಬೇಕು. ಆಸ್ಪತ್ರೆಗೆ ಬಂದು ಹೀಗೆಲ್ಲ ಮಾಡುವುದು ಸರಿಯಲ್ಲ, ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ, ಸರ್ಕಾರದ ನಿಯಮಗಳಿಗೆ ಸಹಕರಿಸಬೇಕು…

Read More