ಹತ್ತಲ್ಲ, ಇಪ್ಪತ್ತಲ್ಲ ಐವತ್ತು ಲಕ್ಷ ರೂ. ಬೆಲೆಬಾಳುವ ಔಷಧಿ ದಾನ ಮಾಡಿದ ಅಪರಿಚಿತ..!

ಹಾವೇರಿ(ರಾಣೆಬೆನ್ನೂರು):ಕೊರೊನಾ ಸಂದರ್ಭದಲ್ಲಿ ರೋಗಿಗಳಿಂದ ಹಿಡಿದು ಬಡವ, ಶಮ್ರಿಕ ಸೇರಿ ಇತರೆ ವರ್ಗದವರಿಗೆ ದಾನಿಗಳು ಮುಂದೆ ಬಂದು ದಾನ ಮಾಡುವುದನ್ನು ನೋಡಿದ್ದೇವೆ.ಆದರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತ್ರ ಅನಾಮಧೇಯ ವ್ಯಕ್ತಿಯೊಬ್ಬರು ಸುಮಾರು ೫೦ ಲಕ್ಷ ರೂಪಾಯಿ ಬೆಲಬಾಳುವ ಔಷಧಿಗಳ ದಾನ ಮಾಡಿ ತೆರೆಮರೆಗೆ ಉಳಿದಿದ್ದಾರೆ. ಅಂದ ಹಾಗೇ ಕೋವಿಡ್‌ಗೆ ಸಂಬAಧಿಸಿದAತೆ ಸುಮಾರು ೫೦ ಲಕ್ಷ ರೂಪಾಯಿ ಮೌಲ್ಯದ ಔಷಧಿಗಳು, ಮಾಸ್ಕ್, ಫೇಸ್ ಶೀಲ್ಡ್, ಮತ್ತು ಇಂಜೆಕ್ಷನ್‌ಗಳನ್ನು ಹೆಸರು ಹೇಳಲು ಇಚ್ಛಿಸದ ದಾನಿಯೊಬ್ಬರು ಹಾವೇರಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ… ಸದ್ಯ ಹಾವೇರಿ ಜಿಲ್ಲಾಡಳಿತವು ಶೀಘ್ರದಲ್ಲೇ ಇದನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಲಿದ್ದು,ಹಾವೇರಿ ಜಿಲ್ಲಾಧಿಕಾರಿ ಆ ಅಪರಿಚಿತ ದಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.   ಬಸವನಗೌಡ ಎಕ್ಸ್ ಪ್ರೆಸ್ ಟಿವಿ (ರಾಣೆಬೆನ್ನೂರು) ಹಾವೇರಿ

Read More

ಯಾರೋ ಮಾಡಿದ ತಪ್ಪಿಗೆ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ: ಬಿ.ಸಿ.ಪಾಟೀಲ್..!

ಹಾವೇರಿ: ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ.ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್,ಆ್ಯಪ್ ಬೆಳೆ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ.2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೀಗ ಆ್ಯಪ್ ಬೆಳೆಸಮೀಕ್ಷೆಯಲ್ಲಿ ಸೆ.11 ರ ಸಂಜೆವರೆಗೆ 76ಲಕ್ಷ ತಾಕುಗಳು ಸಮೀಕ್ಷೆಯಾಗಿರುವುದು ಹಮ್ಮೆಯ ವಿಚಾರ.ರೈತರು ಬಹಳ ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆ್ಯಪ್ ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕ ಎಂದರು. ಕೆಲವೇಡೆ ನೆಟ್ ಪ್ರಾಬ್ಲಂನಿಂದಾಗಿ ತಡವಾಗಿದೆ. ಈಗ ಖಾಸಗಿ ನಿವಾಸಿಗಳ ಮೂಲಕವೂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ನಟರಾಗಲೀ, ನಟಿಯರಾಗಲೀ ಯಾರೂ ತಪ್ಪುಮಾಡಿದರೂ ಅದು ತಪ್ಪೇ. ಡ್ರಗ್ಸ್ ದಂಧೆ ತನಿಖೆ…

Read More

ಇಂದ್ರಜಿತ್ ಲಂಕೇಶ್ ಅಕ್ಕ ಕೂಡ ಡ್ರಗ್ ಅಡಿಕ್ಟ್ : ಪ್ರಮೋದ್ ಮುತಾಲಿಕ್..!

ಹಾವೇರಿ : ಸ್ಯಾಂಡಲ್ವುಡ್ ನಟ, ನಟಿಯರು ಡ್ರಗ್ಸ್ ಜಾಲದಾಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಇಂದ್ರಜಿತ್ ಲಂಕೇಶ್ ದೊಡ್ಡ ಪ್ರಮಾಣದಲ್ಲಿ ಹಿರೋ ಆಗಲು ಹೊರಟಿದ್ದಾರೆ. ನಿಮ್ಮ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ಸ್ ಅಡಿಕ್ಟ್ ಆಗಿದ್ದರು, ಆಗ ನಿವೇಲ್ಲಿ ಹೋಗಿದ್ರಿ ? ಆಗ ನೀವು ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ, ಅವರನ್ನ ಯಾಕೆ ಡ್ರಗ್ಸ್ ಜಾಲಕ್ಕೆ ಲಿಂಕ್ ಮಾಡ್ತಿರಾ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಪೊಲೀಸರು ನಮ್ಮ ಕಡೆಯಿಂದ ಆಗಲ್ಲ ಎಂದು ಹೇಳಲಿ ನಾನು ಮಾಡಿ ತೋರಿಸುತ್ತೇನೆ ಎಂದು ಪೊಲೀಸ್ ಇಲಾಖೆಯಿಂದ ಸವಾಲ್ ಹಾಕಿದ್ದಾರೆ. ಗೃಹ ಸಚಿವರು ಹಾಗು ಸಿಟಿ ರವಿ ಡ್ರಗ್ಸ್ ಜಾಲವನ್ನ ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು…

Read More

ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿಯಿರಬೇಕು: ಬಿ.ಸಿ.ಪಾಟೀಲ್..!

ಹಾವೇರಿ: “ನಾನು ಸಾಧಿಸಿಯೇ ಸಾಧಿಸುತ್ತೇನೆ. ಗುರಿಯನ್ನು ಮುಟ್ಟಿಯೇ ಮುಟ್ಟುತ್ತೇನೆ” ಎನ್ನುವ ಮನೋಭಾವ ಮಕ್ಕಳಲ್ಲಿ ವಿದ್ಯಾರ್ಥಿ ದಿನಗಳಿಂದಲೇ ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮುಂದಿನ ಗುರಿ ಸ್ಪಷ್ಟವಾಗಿರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು. ಹಿರೆಕೆರೂರು ತಾಲೂಕಿನ ಬಾಳೆಂಬೆಡ,ಕೌರವ ಶಿಕ್ಷಣ ಸಂಸ್ಥೆಯಲ್ಲಿ ಹಿರೆಕೆರೂರು, ರಟ್ಟಿಹಳ್ಳಿ ತಾಲೂಕುಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ 17 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು. ಮಕ್ಕಳ ಮುಂದಿನ ಭವಿಷ್ಯ ವಿದ್ಯಾರ್ಥಿ ಬದುಕಿನಲ್ಲಿಯೇ ಅಡಗಿದ್ದು,ಸಾಧಿಸುವ ಛಲದೆಡೆಗೆ ಮಕ್ಕಳ ಗುರಿಯಿರಬೇಕು. ದೃಢ ನಿರ್ಧಾರದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.ಮೊಬೈಲ್, ಕಂಪ್ಯೂಟರ್ ಸೇರಿದಂತೆ ಮಕ್ಕಳು ತಮ್ಮ ಶಿಕ್ಷಣಕ್ಕೆ ಬೇಕಾದ ಮಾಹಿತಿಗಳನ್ನು ಪಠ್ಯಕ್ಕೆ ಪೂರಕವಾಗುವಂತೆ ತಂತ್ರಜ್ಞಾನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾಧಿಸಲು ಪ್ರಸಕ್ತ ದಿನಗಳಲ್ಲಿ ಹಲವಾರು ಮಾರ್ಗಗಳಿವೆ. ವಿದ್ಯಾರ್ಥಿಗಳಿಂದ ಸಾಧ್ಯವಿಲ್ಲ ಎನ್ನುವುದೂ ಏನೂ ಇಲ್ಲ. ಗುರಿ ಸಾಧಿಸುವ ಕಡೆಗೆ ಗಮನ, ಕಷ್ಟನಷ್ಟಗಳನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವೇ ವಿದ್ಯಾರ್ಥಿಗಳಿಗೆ…

Read More

ಮಹಿಳಾ ಶಕ್ತಿಯೇ ಸಮಾಜದ ಶಕ್ತಿ: ಬಿ.ಸಿ.ಪಾಟೀಲ್..!

ಹಾವೇರಿ:31: ‘ಸ್ತ್ರೀ’ ಎನ್ನುವುದೊಂದು ಧೀಶಕ್ತಿಯಾಗಿದ್ದು,ಮಹಿಳೆಯರು ಹೆಚ್ಚೆಚ್ಚು ಸಂಘಟಿತರಾಗುವ ಮೂಲಕ ಸಮಾಜದಲ್ಲಿ ತಮ್ಮ ಐಕ್ಯತಾಬಲ ಪ್ರದರ್ಶಿಸಬೇಕೆಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು. ಮಹಿಳೆಯರ ಸಂಘಟನಾ ಶಕ್ತಿಯೇ ಸಮಾಜದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾಸೂರು ಗ್ರಾಮದ ಧರ್ಮರಾಯನ ದೇವಸ್ಥಾನದ ನೂತನ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು -ತಿಪ್ಪಾಯಿಕೊಪ್ಪ ಗ್ರಾಮದ ಕೇಸರಿ ಮಹಿಳಾ ಘಟಕ ಉದ್ಘಾಟಿಸಿ, ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಹಿಳೆಯರು ರಾಜಕೀಯವಾಗಿ ಸಶಕ್ತರಾಗಲು ಕೇಸರಿಪಡೆ ಸಹಕರಿಸುತ್ತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ರಟ್ಟಿಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಮಹಿಳೆಯರು ಸಹ ಸಾಕಷ್ಟು ಶ್ರಮವಹಿಸಿದ್ದು, ತಮ್ಮ ಗೆಲುವಿಗೆ ಕಾರಣರಾಗಿರುವ ಮಹಿಳೆಯರಿಗೆ ಧನ್ಯವಾದ ಸಲ್ಲಿಸಿದರು. ಮಹಿಳೆಯರು ಸಂಘಟಿತರಾದರೆ ಏನು ಬೇಕಾದರೂ ಸಾಧಿಸಬಹುದು. ಸಾಮಾಜಿಕ,ಆರ್ಥಿಕವಾಗಿ ಸಬಲರಾಗುವ ಜೊತೆಗೆ ಸ್ತ್ರೀಶಕ್ತಿ ರಾಜಕೀಯವಾಗಿಯೂ ಸಬಲರಾಗಬೇಕಿದೆ. ಜಗತ್ತು ಮುಂದುವರೆಯುತ್ತಿದ್ದರೂ ಎಲ್ಲೋ…

Read More

ಜಮೀನುಗಳಲ್ಲಿ ರೈತರ ಬೆಳೆ ಆ್ಯಪ್ ಸಮೀಕ್ಷೆ.. ಮಾದರಿಯಾದ ಕೃಷಿ ಸಚಿವರು.!

ಹಾವೇರಿ: ಕೃಷಿ ಸಚಿವ ಹಾಗೂ ಕೊಪ್ಪಳ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ರವರು ಇಂದು ಸೊರಬ ತಾಲೂಕಿನ ಯಲವಾಳ ಗ್ರಾಮ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕಕೊಣತಿ ಗ್ರಾಮದ ಜಮೀನುಗಳಲ್ಲಿ 2020-21ನೇ ಸಾಲಿನ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು. ಜಮೀನಿನಲ್ಲಿ ನಿಂತು ಬೆಳೆವಿವರ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ತಮ್ಮ ಭಾವಚಿತ್ರವನ್ನು ಆ್ಯಪ್ ಪ್ರಾತ್ಯಕ್ಷಿಕೆ ಮಾಡಿ ರೈತರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್ ರವರು ರೈತನ ಬೆಳೆ ರೈತನ ಹಕ್ಕಾಗಿದೆ. ಇದೇ ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣ ಪತ್ರ ನೀಡುವಂತಹ ಮಹತ್ವದ ಆ್ಯಪ್ ಇದಾಗಿದ್ದು, ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ. ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ…

Read More

ಮಸೀದಿಗೆ ತೆರಳಿದ್ದವರಿಗೆ ಬಿತ್ತು ಲಾಠಿ ಏಟು..!

ಹಾವೇರಿ : ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಗೆ ತಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾರೂ ಮಸೀದಿ ಹಾಗೂ ಮಂದಿರಗಳಿಗೆ ಹೋಗುವುದು ಬೇಡ ಎಂದು ಹೇಳಲಾಗಿದೆ. ಅಲ್ಲದೇ, ಈಗಾಗಲೇ ಎಲ್ಲ ಧರ್ಮದ ಮಸೀದಿ ಹಾಗೂ ಮಂದಿರಗಳ ಬಾಗಿಲುಗಳನ್ನು ಲಾಕ್ ಕೂಡ ಮಾಡಲಾಗಿದೆ. ಮುಸ್ಲಿಂ ಬಾಂಧವರಿಗೆ ಮಸೀದಿಗೆ ತೆರಳಿ ನಮಾಜ್ ಮಾಡದೆ, ಮನೆಯಲ್ಲಿಯೇ ನಮಾಜ್ ಮಾಡಿ ಎಂದು ಸೂಚಿಸಲಾಗಿತ್ತು. ಅಲ್ಲದೇ, ರಂಜಾನ್ ಹಬ್ಬದ ಸಂದರ್ಭದಲ್ಲಿಯೂ ಮಸೀದಿಗಳಿಗೆ ತೆರಳದೆ, ಮನೆಯಲ್ಲಿಯೇ ನಮಾಜ್ ಮಾಡಿ ಹಬ್ಬ ಆಚರಿಸಿ ಎಂದು ಪದೇ ಪದೇ ಹೇಳಲಾಗಿದೆ. ಆದರೆ, ಇದಕ್ಕೆ ಗೌರವ ನೀಡದ ಹಲವರು ಮಸೀದಿಗೆ ಹೋಗಿ ನಮಾಜ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಸರ್ಕಾರ ನಿಯಮ ಉಲ್ಲಂಘಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ಹಾಗೂ ಅಧಿಕಾರಿಗಳು ಲಾಠಿ ರುಚಿ ತೋರಿಸಿದ್ದಾರೆ. ಪಟ್ಟಣದ ಎರಡು…

Read More