ಬಳ್ಳಾರಿ

ವರದಕ್ಷಿಣೆ ಕಿರುಕುಳ ನೀಡುವ ಪೊಲೀಸಪ್ಪನ ಕಹಾನಿ!

Published

on

ಕಾನೂನು ರಕ್ಷಣೆ ಮಾಡುವ ಪೊಲೀಸಪ್ಪನಿಂದಲೇ ವರಕ್ಷಿಣೆ ಕಿರುಕುಳ
ಕಾನೂನು ರಕ್ಷಣೆ ಮಾಡುವ ಪೊಲೀಸಪ್ಪನಿಂದಲೇ ವರಕ್ಷಿಣೆ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಯಾಗಿದೆ. ದೂರು ದಾಖಲಿಸಿದ ಮಹಿಳೆ ನಾಲಗಡ್ಡ ನಿವಾಸಿ ನಸೀಮಾ ಬೇಗಂ. ಇವರು ಕಳೆದ ಒಂದೂವರೆ ವರ್ಷದ ಹಿಂದೆ ಮೆಹಬೂಬ ಪಾಷಾ ಎನ್ನುವವರ ಜೊತೆ ಮದುವೆಯಾಗಿದ್ದರು. ಟಿ.ಬಿ.ಡ್ಯಾಮ್‌ನ ಠಾಣೆಯಲ್ಲಿ ಪೊಲೀಸ್ ಹುದ್ದೆಯಲ್ಲಿರುವ ತನ್ನ ಪತಿಯೊಂದಿಗೆ ಮದುವೆಯಾಗಿ ಕೇವಲ ಎರಡು ತಿಂಗಳು ಮಾತ್ರ ಕೌಟುಂಬಿಕವಾಗಿ ಚನ್ನಾಗಿದ್ದರು. ಬಳಿಕ ಗಂಡ ಮತ್ತು ಗಂಡನ ಮನೆಯವರ ಕಿರುಕುಳದಿಂದ ನೊಂದು ಹೋಗಿದ್ದೇನೆ, ತನ್ನ ಪತಿ ಮೆಹಬೂಬ್ ಪಾಷಾ ಕುವೆಂಪು ನಗರದಲ್ಲಿ ವಾಸವಿದ್ದರು, ಇವರೊಂದಿಗೆ ೨೦೧೭ ಜುಲೈ ೧೬ ರಂದು ಮದುವೆಯಾಗಿತ್ತು, ಮದುವೆ ಮುಂಚೆ ಹಣ, ಆಭರಣ ನೀಡಿ, ಮದುವೆ ಖರ್ಚನ್ನು ಕೂಡ ನೋಡಿಕೊಳ್ಳಲಾಗಿತ್ತು. ಆದರೂ ಕೂಡ ಮತ್ತೆ ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ ತನ್ನ ಪತಿಯಿಂದಾಗಿ ನನ್ನ ತಂದೆ ಇದೇ ಚಿಂತೆಯಲ್ಲೇ ಅಸುನೀಗಿದ್ದಾರೆ. ತಮ್ಮ ವೈವಾಹಿಕ ಜೀವನ ಸುಧಾರಣೆಗೆ ಸಮಾಜದ ಹಿರಿಯರು ಅನೇಕ ಬಾರಿ ರಾಜೀ ಸಂಧಾನ ಮಾಡಿದರೂ, ತನ್ನ ಪತಿ ಯಾರಿಗೂ ಜಗ್ಗದೇ ತಮಗೆ ಹಿಂಸೆ ನೀಡಿದ್ದಾರೆ. ನನ್ನ ಪತಿಯ ತಾಯಿ ಮತ್ತು ಕುಟುಂಬ ಸದಸ್ಯರೂ ಸಹ ಇದೇ ರೀತಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಸೀಮಾ ಇದೀಗ ಗರ್ಭಿಣಿಯಾಗಿದ್ದರಿಂದ ತಮ್ಮ ತವರು ಮನೆಯವರು ಸೀಮಂತಕ್ಕಾಗಿ ಕರೆದುಕೊಂಡು ಬಂದಿದ್ದಾರೆ, ಇದಕ್ಕೂ ಮುನ್ನ ನನ್ನ ತಾಯಿಗೂ ಸಹ ತನ್ನ ಪತಿ ಹಾಗೂ ಪತಿಯ ತಾಯಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ನನ್ನ ಪತಿ ನನ್ನ ಕೆನ್ನೆಗೆ ಜೋರಾಗಿ ಹೊಡೆದಿದ್ದರಿಂದ ನನ್ನ ಒಳಕಿವಿಯೂ ಕೂಡ ಹಾನಿಯಾಗಿದೆ, ಸೊಂಟ ಮತ್ತು ಕೈ ಮೂಳೆಗೂ ತೀವ್ರವಾದ ಗಾಯಗಳಾಗಿವೆ, ಹಿರಿಯರ ಸಮ್ಮುಖದಲ್ಲಿ ನನ್ನ ಮತ್ತು ಕುಟುಂಬದವರನ್ನು ಚನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ, ಇದೀಗ ಹಲ್ಲೆ ನಡೆಸಿದ್ದಾರೆ ಈ ಕುರಿತು ಕಳೆದ ಎರಡೂವರೆ ತಿಂಗಳ ಹಿಂದೆ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ನನಗಾದ ತೊಂದರೆ ಹೇಳಿಕೊಂಡೆ, ಆಗ ನನ್ನ ಪತಿ ಮತ್ತು ಅವರ ಕುಟುಂಬದವರೊಂದಿಗೆ ರಾಜಿ ಸಂಧಾನ ಮಾಡಿ, ಕಳುಹಿಸಿದರೂ ಮತ್ತು ನನ್ನ ಗಂಡನಿಂದ ಕಿರುಕುಳ ಆರಂಭವಾಗಿದೆ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿದ್ದು, ಅನಿವಾರ್ಯವಾಗಿ ಮತ್ತೆ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಂಪಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸುಭಾನ್ ಹಾಗೂ ಇತರ ಆರು ಜನರ ವಿರುದ್ಧ ಅನಿವಾರ್ಯವಾಗಿ ಪ್ರಕರಣ ದಾಖಲಿಸಬೇಕಾಯಿತೆಂದು ನಸೀಮಾ ಅವರ ತಾಯಿ ಜರೀನಾ ಬೇಗಂ ತಿಳಿಸಿದ್ದಾರೆ.

Click to comment

Trending

Exit mobile version