ಬಳ್ಳಾರಿ

ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ

Published

on

ಬಳ್ಳಾರಿ, ಡಿ,20 : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲುಕಿನ ಆಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥತೆಯಾದರು,ಕೆಲವು ಮಕ್ಕಳು ಬೇದಿ ವಾಂತಿ ಕಂಡುಬಂದ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಗಾಗಿ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೋಯಿದು ಚಿಕಿತ್ಸಾ ಕೊಡಿಸಿ ನಂತರ 18 ಮಕ್ಕಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ಪಡೆಯುತ್ತಿದ್ದಾರೆ, ಅಡಿಗೆ ಮಾಡುವ ಸಂದರ್ಭದಲ್ಲಿ ಅದರೊಳಗೆ ಅಲ್ಲಿ( ಬಲ್ಲಿ) ಬಿದ್ದಿದ್ದು ನಂತರ ಎಲ್ಲಾ ವಿದ್ಯಾರ್ಥಿಗಳು ಅಂದರೆ 344 ಮಕ್ಕಳ ದಾಖಲಾತಿ ಇದ್ದು ಅದರಲ್ಲಿ 290 ಮಕ್ಕಳು ಹಾಜರಿದ್ದರು ಹಾಗೂ 
159 ವಿದ್ಯಾರ್ಥಿಗಳು ಈ ಊಟವನ್ನು ಸೇವಿಸುವ ಸಂದರ್ಭದಲ್ಲಿ ಜಯಸುದ ಎಂಬ ವಿದ್ಯಾರ್ಥಿಯ ತಟ್ಟೆಯಲ್ಲಿ ಅಲ್ಲಿ ಬಿದ್ದಿರುವುದು ಕಂಡು ಆ ವಿದ್ಯಾರ್ಥಿ 
ಎಲ್ಲರಿಗೆ ತಿಳಿಸುವಷ್ಟರಲ್ಲಿ ಎಲ್ಲಾ ವಿದ್ಯಾರ್ಥಿಗಳು ಊಟ ಸೇವಿಸಿದ್ದರು,ಅಲ್ಲಿನ ಶಾಲೆಯ ಮುಖ್ಯ ಗುರುಗಳು ಪ್ರಕಾಶ್ ಪೋನ್ ಮುಖಾಂತರ ತಿಳಿಸಿ ನಂತರ ಇದಕ್ಕೆ ಮೂಲ ಕಾರಣ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯತನವೇ ಇದಕ್ಕೆ ಕಾರಣ ಎಂಬುದು ಸಿರುಗುಪ್ಪ ಬಿಇಒ ಭಜಂತ್ರಿ ಮಾಹಿತಿ ನೀಡಿದರು, 
ತದನಂತರ ಡಿ ಡಿ ಪಿ ಐ ಶ್ರೀಧರನ್ ವಿಚಾರಿಸಿದಾಗ ಇದಕ್ಕೆ ತನಿಖೆ ಮಾಡಲು ಬಿಇಒಗೆ ಆದೇಶಿಸಿದ್ದೇನೆ, 
ತಪ್ಪಿತಸ್ಥರೆಂದು ಕಂಡವರನ್ನು ನಿರ್ದಾಕ್ಷಿಣ್ಯವಾಗಿ ಕ್ರಮ 
ಜರಿಗಿಸಲಾಗುವುದು,ಎಂದರು, 
ಊರಿನ ವಿದ್ಯಾರ್ಥಿಗಳ ಪೋಷಕರು ಆತಂಕದಿಂದ ಅನೇಕರು ಚಿಂತಗ್ರಸ್ಥರಾಗಿದ್ದಾರೆ,ಭಯದ ವಾತಾವರಣ ಮಡುಗಟ್ಟಿದೆ ಎಂದು ಕೆಲವರು ಹೇಳುತ್ತಾರೆ, 

ವಿಮ್ಸ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಮರಿರಾಜ್ ಅವರನ್ನು ವಿಚಾರಣೆ ಮಾಡಿದಾಗ ಆರು ತಾಸುಗಳ ಕಾಲ ಮಕ್ಕಳ ಕಂಡಿಷನ್ ಈಗ ಪರವಾಗಿಲ್ಲ ಆದರೆ,ನಾವು ಯಾವುದೇ ರೀತಿಯ ಮಾಹಿತಿ ಹೀಗೆ ಹೇಳಲು ಸಾದ್ಯವಿಲ್ಲ ಎಂದು ಹೇಳಿದರು, 

ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಹೆಸರು 
ಸಿದ್ದಾರ್ಥ, ಅಗಲೂರಪ್ಪ ,ಕ್ರಿಷ್ಣ ,ಪಲ್ಲವಿ,ಗಾದಿಲಿಂಗಪ್ಪ, 
ಮಲ್ಲಿಕಾರ್ಜುನ, ಲಾವಣ್ಯ,ವೆಂಕಟೇಶ, ಕರಿಬಸವ,ತಬ್ಸಮ್ ಅಲಿಯಾ,ಕಾರ್ತಿಕ್, ಹೇಮ ರೆಡ್ಡಿ,ಶ್ರೀನಿವಾಸ್, ಪಾಂಡುರಂಗ, ಸಿದ್ದಪ್ಪ,ಉಮೇಶ್, 

Click to comment

Trending

Exit mobile version