ಚಿಕ್ಕಬಳ್ಳಾಪುರ

ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕಾನಾಯ್ಡು

Published

on

ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕನಾಥನಾಯ್ಡು

ಗುಡಿಬಂಡೆ: ವಾಸ್ತುಶಿಲ್ಪ ಕಲೆ ಸೇರಿದಂತೆ ಅನೇಕ ಕಲೆಗಳಲ್ಲಿ ವಿಶ್ವ ವಿಖ್ಯಾತಿ ಪಡೆದಂತಹ ಭಾರತದಲ್ಲಿರುವ ಪುರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪ.ಪಂ. ಅಧ್ಯಕ್ಷ ಜಿ.ಎನ್.ದ್ವಾರಕನಾಥನಾಯ್ಡು ತಿಳಿಸಿದರು.

ಪಟ್ಟಣದ ಜೈನರ ಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥಸ್ವಾಮಿ, ಶ್ರೀ ಚಂದ್ರನಾಥಸ್ವಾಮಿ ಜೈನ ದೇವಾಲಯಗಳ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವಾರು ಪುರಾತನ ಕಟ್ಟಡಗಳಿವೆ. ಪಟ್ಟಣದ ಹೊರವಲಯದಲ್ಲಿ ಪಾಳೇಗಾರರು ನಿರ್ಮಿಸಿರುವ ಅಮಾನಿಬೈರಸಾಗರಕೆರೆ, ಏಳು ಸುತ್ತಿನ ಸುರಸದ್ಮಗಿರಿ ಬೆಟ್ಟ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ, ಮಂಡಿಕಲ್ಲು ಬಳಿಯ ಆವುಲಬೆಟ್ಟ ಸೇರಿದಂತೆ ಅನೇಕ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿದ್ದು, ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ದಿಪಡಿಸಬೇಕಿದೆ. ಅಮಾನಿಬೈರಸಾಗರ ದಡದಲ್ಲಿ ಜೈನ ಮುನಿಗಳು ತಪ್ಪಸ್ಸು ಮಾಡಿದ ಪಾದಬೆಟ್ಟದಲ್ಲಿ ಗೊಮ್ಮಟೇಶ್ವರ ಪ್ರತಿಮೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ನಂತರ ಜೈನ ದಿಗಂಬರ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಿ.ಬಿ.ಪುಟ್ಟಣ್ಣ ಮಾತನಾಡಿ ಗುಡಿಬಂಡೆಯಲ್ಲಿರುವ ಜೈನ ದೇಗುಲಗಳಿಗೆ ಸಾವಿರಾರು ವರುಷಗಳ ಇತಿಹಾಸವಿದೆ. ಅದರ ನೆನಪಿಗಾಗಿ ಜೈನ ದೇವಾಲಯಗಳು ನಿರ್ಮಾಣವಾಗಿದೆ. ಶೀಥಿಲಾವ್ಯವಸ್ಥೆಯಲ್ಲಿರುವ ದೇಗುಲಗಳನ್ನು ಜೀರ್ಣೋದ್ದಾರ ಮಾಡಲು ಸಮಿತಿಯನ್ನು ರಚಿಸಿಕೊಂಡು ಧರ್ಮಸ್ಥಳದ ಟ್ರಸ್ಟ್ ಹಾಗೂ ಜೈನ ಸುಮುದಾಯದ ದಾನಿಗಳಿಂದ ೨ ದೇವಾಲಯಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಪ್ರವಾಸಿಗರು ಹಾಗೂ ಜೈನ ಭಕ್ತರಿಗಾಗಿ ವಸತಿ ಗೃಹವನ್ನು ಸರ್ಕಾರ ಹಾಗೂ ಸಮಿತಿಯ ಸಹಕಾರದಿಂದ ನಿರ್ಮಾಣವಾಗಲಿದೆ. ಜೊತೆಗೆ ದೇವಾಲಯದಲ್ಲಿ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳು ನಡೆಯಬೇಕಿದ್ದು, ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸಬೇಕೆಂದರು.

ಈ ವೇಳೆ ಜೈನ ದಿಗಂಬರ ಸಮಿತಿ ಉಪಾಧ್ಯಕ್ಷ ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಜೀತ್‌ಪ್ರಸಾದ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗರಾಜ, ಸದಸ್ಯರಾದ ರಾಜಣ್ಣ, ರಮೇಶ, ಪ್ರವಾಸೋಧ್ಯಮ ಇಲಾಖೆಯ ಕಛೇರಿ ಮುಖ್ಯಸ್ಥ ನರೇಶ, ಕಟ್ಟಡದ ಗುತ್ತಿಗೆದಾರರಾದ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾಗಳಾದ ತ್ಯಾಗರಾಜ, ನವೀನ್ ಕುಮಾರ್, ವೀರಭದ್ರಯ್ಯ, ದೇವಾಲಯದ ಟ್ರಸ್ಟಿಗಳು ಸೇರಿದಂತೆ ಹಲವರು ಇದ್ದರು.
ದೇವರಾಜ.ಎನ್.ಆರ್.ಸುನಿಲ್.ವಿ. ಚಿಕ್ಕಬಳ್ಳಾಪುರ

ರಾತನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ: ದ್ವಾರಕನಾಥನಾಯ್ಡು

Click to comment

Trending

Exit mobile version