ಚಿಕ್ಕಬಳ್ಳಾಪುರ

ಹೊಸ ವರ್ಷಕ್ಕೆ‌ ನಂದಿ ಬೆಟ್ಟ ನಿರ್ಬಂಧ

Published

on

ಹೊಸ ವರ್ಷದಂದು ನಂದಿ ಬೆಟ್ಟಕ್ಕೆ ಇಲ್ಲ ಪ್ರವೇಶ…

ಚಿಕ್ಕಬಳ್ಳಾಪುರ: ಹೊಸ ವರ್ಷವನ್ನು ತಲುಪಲು ಇನ್ನು ಎರಡೇ ದಿನ ಬಾಕಿ ಇದೆ. ಒಂದು ಕಡೆ ಯುವಕರು ನೂತನ ವರ್ಷವನ್ನು ವಿಶೇಷ ಜಾಗದಲ್ಲಿ ವಿಭಿನ್ನವಾಗಿ ಸೆಲೆಬ್ರೇಟ್​ ಮಾಡಲು ಸಜ್ಜಾಗುತ್ತಿದ್ರೆ, ಸದ್ದಿಲ್ಲದೆ ಅಂತವರಿಗೆಲ್ಲಾ ಪೊಲೀಸ್​ ಇಲಾಖೆ ಶಾಕ್​ ಕೊಟ್ಟಿದೆ.

ಹೊಸ ವರ್ಷ ಬಂತಂದರೆ ಸಾಕು ಎಲ್ಲರಿಗೂ ಒಂದು ತರಹದ ಸಂಭ್ರಮ, ಸಂತೋಷ ಬಂದು ಬಿಡುತ್ತದೆ. ಈ ನಿಟ್ಟಿನಲ್ಲಿ ಕೆಲವರು ದೇವಸ್ಥಾನಗಳಿಗೆ ಭೇಟಿ ನೀಡಿದರೆ ಇನ್ನೂ ಕೆಲವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮ ಪಡುತ್ತಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೊಸ ವರ್ಷ ಸಂದರ್ಭದಲ್ಲಿ ಫುಲ್​ ಡಿಮ್ಯಾಂಡ್​ ಇರುತ್ತದೆ. ಆದರೆ ಈ ಬಾರಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಪೊಲೀಸ್​ ಇಲಾಖೆ ಶಾಕ್​ ನೀಡಿದೆ.
ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾ ಪೊಲೀಸರು ನಿಷೇಧ ಹೇರಿದ್ದಾರೆ. ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ಹೋಗಲು ನೀವೇನಾದ್ರು ಪ್ಲಾನ್ ಮಾಡಿದ್ದರೆ ಒಮ್ಮೆ ಇತ್ತ ಗಮನ ಹರಿಸಿ.

ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆ ಪ್ರೇಮಿಗಳ ಫೇವರಿಟ್ ಸ್ಪಾಟ್, ಸ್ವರ್ಗದ ತಾಣ ಅಂತಲೇ ಕರೆಸಿಕೊಳ್ಳುವ ಸ್ಥಳ ನಂದಿ ಬೆಟ್ಟ. ಆದರೆ ಜಿಲ್ಲಾ ಪೊಲೀಸರು ಈ ಪ್ರದೇಶಕ್ಕೆ ಹೋಗಲು ನಿಷೇಧ ಹೇರಿದ್ದಾರೆ. ಅಷ್ಟೇ ಅಲ್ಲಾ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳ ಪ್ರವೇಶಕ್ಕೂ ಸಹ ಬ್ರೇಕ್ ಹಾಕಲಾಗಿದೆ. ನಂದಿ ಗಿರಿಧಾಮ ಸೇರಿದಂತೆ ಟ್ರಕ್ಕಿಂಗ್ ಸ್ಪಾಟ್​​​​​​​​​​​​​ಗಳಾದ ಅವಲಬೆಟ್ಟ, ಸ್ಕಂದಗಿರಿ ಬೆಟ್ಟಗಳಿಗೂ ಸಹ ಪ್ರವೇಶವನ್ನು ನಿಷೇಧ ಮಾಡಿದ್ದಾರೆ. ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ 1-1-2019 ರ ಬೆಳಿಗ್ಗೆ 8 ಗಂಟೆವರೆಗೆ ಈ ಪ್ರದೇಶಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಪ್ರವಾಸಿಗರು ತಮ್ಮ ಮೋಜು ಮಸ್ತಿಗೆ ಬೇರೆ ಪ್ರದೇಶಗಳನ್ನ ಆಯ್ಕೆ ಮಾಡಿಕೊಳ್ಳಬೇಕಾಗಿದೆ.

Click to comment

Trending

Exit mobile version