ಮೈಸೂರು

ಅರಮನೆ ನಗರಿ ಮೈಸೂರಿನಲ್ಲಿ ಇಂದು ಮತ್ತೆ 7 ಕೊರೊನಾ ಕೇಸ್

Published

on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, 7 ಪ್ರಕರಣಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಇದಲ್ಲದೆ ಓರ್ವ ಜುಬಿಲಿಯಂಟ್ ಕಾರ್ಖಾನೆಯ ವ್ಯಕ್ತಿ ಜೊತೆ ಪ್ರಯಾಣ ಬೆಳೆಸಿದವನಲ್ಲೂ ಸೋಂಕು ಕಂಡುಬ0ದಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಇನ್ನಿಬ್ಬರ ಪ್ರಯಾಣದ ಬಗ್ಗೆ ವರದಿಗಾಗಿ ಕಾಯಲಾಗುತ್ತಿದ್ದು, ಗುರುವಾರ 21 ಪ್ರಕರಣ ಪಾಸಿಟಿವ್ ಇತ್ತು.ಶುಕ್ರವಾರ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿರಲಿಲ್ಲ. ಇಂದು ಜಿಲ್ಲೆಯಲ್ಲಿ 7 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಒಟ್ಟು 28 ಪಾಸಿಟಿವ್ ಪ್ರಕರಣ ಇಲ್ಲಿಯವರೆಗೆ ವರದಿಯಾಗಿವೆ. ಸೋಂಕಿತರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Click to comment

Trending

Exit mobile version