ನಿಮ್ಮ ಜಿಲ್ಲೆ

ನಿರಾಶ್ರಿತರಿಗೆ ಆಹಾರ,ಹಣ್ಣು ವಿತರಣೆ

Published

on

ಹುಬ್ಬಳ್ಳಿ:ಕೊರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಅನಿಲ್‌ಕುಮಾರ ಪಾಟೀಲ ಅವರು ನಿರಾಶ್ರಿತರಿಗೆ ಹಾಗೂ ಸಾರ್ವಜನಿಕರಿಗೆ ಆಹಾರ ಧಾನ್ಯ ಹಾಗೂ ಹಣ್ಣು ವಿತರಣೆ ಮಾಡಿದರು.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಸಾರ್ವಜನಿಕರು ದುಡಿಮೆ ಇಲ್ಲದೆ ಮನೆಯಲ್ಲಿರುವ ಕಾರಣ ಆರ್ಥಿಕ ಸಮಸ್ಯೆ ಜೊತೆಗೆ ಆಹಾರಕ್ಕಾಗಿ ಕೂಡ ಜನರು ಸಮಸ್ಯೆ ಎದುರಿಸುವಂತಾಗಿದ್ದು,ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಹಾಯ ಹಸ್ತ ಒದಗಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯ ಹಾಗೂ ಹಣ್ಣನ್ನು ಕಾಂಗ್ರೆಸ್ ಸಮಿತಿಯಿಂದ ಹಾಗೂ ವೈಯಕ್ತಿಕ ಖರ್ಚಿನಿಂದ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಕೋಪನ್ ವಿತರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಆಹಾರ ಧಾನ್ಯ ಕಿಟ್ ಹಾಗೂ ಹಣ್ಣು ವಿತರಣೆ ಮಾಡಿದರು.ಆಹಾರ ಧಾನ್ಯ ಪಡೆದುಕೊಳ್ಳಲು ಸಾರ್ವಜನಿಕರು ನುಕುನುಗ್ಗಲು ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿರುವುದು ಕಂಡು ಬಂದಿತು.
ಈ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಲು ಅನಿಲ್‌ಕುಮಾರ ಪಾಟೀಲ ಮನವಿ ಮಾಡಿದರು.

ರಾಜು ಮುದ್ಗಾಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version