ಆರೋಗ್ಯ / HEALTH

ಹುಬ್ಬಳ್ಳಿಯೇ ಡೇಂಜರ್ ಝೋನ್..

Published

on

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕೊರೊನಾ ಪ್ರಕರಣ ದೃಢವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢವಾಗಿದ್ದರಿಂದ ವಾಣಿಜ್ಯ ನಗರಿಯಲ್ಲಿ ಆತಂಕ ಆವರಿಸಿದೆ.
ಲಾಕ್ ಡೌನ್ ಇದ್ದರೂ ಸಾಮಾನ್ಯವಾಗಿ ಹುಬ್ಬಳ್ಳಿ ಮಂದಿ ಓಡಾಡಿಕೊಂಡಿದ್ದರು.ನಮ್ಮಲ್ಲಿ ಸೋಕಿತರು ಇಲ್ಲ ಎಂದು ಬೀಗುತ್ತಿದ್ದರು. ಪೊಲೀಸರು, ಜಿಲ್ಲಾಡಳಿತ ಎಷ್ಟು ಹೇಳಿದರೂಕರೋನಾ ಭಯವಿಲ್ಲದೇ ರಸ್ತೆಗಿಳಿಯುತ್ತಿದ್ದರು.
ಲಾಕ್ ಡೌನ್ ಪಾಲಿಸದವರಿಗೆ ಈಗಬ ಬರಸಿಡಿಲು ಬಡಿದಂತಾಗಿದೆ. ಜಿಲ್ಲೆಯ ೨ನೇ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶೇ.೮೦ರಷ್ಟು ಹುಬ್ಬಳ್ಳಿಯೇ ಡೇಂಜರ್ ಝೋನ್ ಆಗಿದೆ.
೨ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು.೩ ದಿನಗಳ ಹಿಂದೆಯಷ್ಟೇ ಆತ ಗುಣಮುಖರಾಗಿದ್ದರಿಂದ ಧಾರವಾಡ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ ಯಾಗಿರುವದು
ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಸೋಕಿತನಿಗೆ ದೆಹಲಿ ನಂಟು ಇದ್ದು, ಆತನ ಜತೆ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ ೧೬ಜನರಿಗೆ ಕ್ವಾರಂಟೈನ್ ಕಳುಹಿಸಲಾಗಿದೆ. ಇನ್ನೂ ಸೋಂಕಿತನ ಸಹೋದರನ ವರದಿ ಬರಬೇಕಿದೆ. ಈತ ಹಾಗೂ ಈತನ ಸಹೋದರ ದೆಹಲಿ, ಆಗ್ರಾ, ಮುಂಬೈ ಸುತ್ತಾಡಿದ್ದಾರೆ. ಫುಟ್ ವೇರ್ ಬಿಸಿನೆಸ್ ಟೂರ್ ಮೇಲೆ ಹಲವುಕಡೆ ಸುತ್ತಾಡಿರುವದು ಸಾಕಷ್ಟು ಆತಂಕವನ್ನುAಟು ಮಾಡಿದೆ.
ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ ೩ಕಿ.ಮೀ. ಸುತ್ತಳತೆಯ ಪ್ರದೇಶಗಳು ಕಂಟೈನ್ಮೆAಟ್ ನಿರ್ಮಾಣ ಮಾಡಲಾಗಿದೆ. ಇದು ಹುಬ್ಬಳ್ಳಿ ಶೇ. ೮೦ ರಷ್ಟು ಹನಗರವನ್ನು ಒಳಗೊಂಡಿದೆ.ಸುಮಾರು ೧,೦೧,೭೬೯ ಮನೆಗಳು ಹಾಗೂ ೫,೭೧,೧೫೩ ಜನಸಂಖ್ಯೆ ಕಂಟೈನ್ಮೆAಟ್ ಒಳಪಡುತ್ತವೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆಯ ೭ ವಲಯ ಕಚೇರಿಗಳು ಹಾಗೂ ೩೬ ವಾರ್ಡ್ ಸೇರಿ ೫೦೦ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಹೈ ಅಲರ್ಟ್ ವ್ಯಾಪ್ತಿಗೆ ಬರುತ್ತವೆ.
ಸದ್ಯ ಮುಲ್ಲಾ ಓಣಿಯ ಪ್ರದೇಶದಲ್ಲಿ ಪಾಲಿಕೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದೆ.
ಕಂಟೈನ್ನೆAಟ್ ವಲಯದಲ್ಲಿ ಮುಂದಿನ ಆದೇಶದವರೆಗೆ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯ ಮುಂದುವರೆದಿದೆ. ಮೊದಲು ೧ ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಪಾಲಿಕೆ ಆದ್ಯತೆ ನೀಡಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜನರ ಓಡಾಟ ಸ್ತಬ್ಧವಾಗಿದೆ.
ಕರ್ತವ್ಯ ನಿರತ ಹಾಗೂ ಸರಕು ಸಾಗಣಿಕೆ ವಾಹಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಹನ ಸಂಚಾರಕ್ಕೆ ನಿರ್ಭಂಧ ಹೇರಲಾಗಿದೆ. ೩ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೇ ವಸ್ತುಗಳನ್ನು ವಿತರಿಸುವಂತಿಲ್ಲ. ಹೀಗಾಗಿ ಇಂದಿನಿAದ ವಾಣಿಜ್ಯ ನಗರಿಯಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣವಾಗಿದೆ.

ರಾಜು ಮುದ್ಗಾಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version