ಆರೋಗ್ಯ / HEALTH

ಬೆಂಗಳೂರಿನ ಮಹದೇವಪುರದಲ್ಲಿ 20 ಸಾವಿರ ಮಂದಿ ಆಹಾರ ಕಿಟ್

Published

on

ಕೆ.ಆರ್.ಪುರಂ: ಡಾ.ಬಿ.ಆರ್. ಅಂಬೇಡ್ಕರ್ ರವರ ೧೨೯ನೇ ಯ ಜಯಂತಿ ಅಂಗವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಸರಳವಾಗಿ ಆಚರಿಸಿದರು.
ನಂತರ ಮಾತನಾಡಿದ ಸಚಿವ ಬೈರತಿ ಬಸವರಾಜ್,ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ನುಡಿದರು.
ಈ ಬಾರಿ ಕರೋನ ಸೋಂಕು ಹರಡುವ ಹಿನ್ನಲೆಯಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದ್ದು,ಕೊರೊನಾ ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ.ಬಡವರಿಗೆ ಹಾಗೂ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಇನ್ನು ತಹಶೀಲ್ದಾರ್ ತೇಜಸ್ ಕುಮಾರ್ ಮಾತನಾಡಿ,ಮಹದೇವಪುರ ಕ್ಷೇತ್ರದ ೧೧ ಪಂಚಾಯತಿ ವ್ಯಾಪ್ತಿಯಲ್ಲಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳ ೨೦ ಸಾವಿರ ಮಂದಿ ಕಿಟ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ನುಡಿದರು.
ಮಾಸ್ಕ್, ಸ್ಯಾನಿಟೈಸರ್ ಹಾಗೂ ಸುರಕ್ಷತಾ ಸಲಕರಣೆಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿತರಿಸಲಾಗಿದೆ, ಕಣ್ಣೂರು, ಕಾಟ್ಮಂನಲ್ಲೂರು ಹಾಗೂ ಕೊಡತಿ ೪ ಸಾವಿರ ಆಹಾರಗ¼ ಪ್ಯಾಕೇಟ್‌ಗಳನ್ನು ವಿತರಿಸಲಾಗುತ್ತಿದೆ.ವಿದೇಶದಿಂದ ಬಂದವರಿಗೆ ೨೮ ದಿನಗಳ ಕ್ವಾರಟೈನ್ ಮಾಡಿದ್ದು, ಸೋಂಕು ಕಂಡು ಬಂದಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜು,ಮಾಜಿ ಪಾಲಿಕೆ ಸದಸ್ಯ ಆಂತೋನಿಸ್ವಾಮಿ, ಶಿವಪ್ಪ, ಪಟಾಕಿ ರವಿ, ದಲಿತ ಒಕ್ಕೂಟದ ಮುಖ್ಯಸ್ಥ ಎಂ.ಎನ್.ಶೇಖರ್ ಮುಂತಾದವರು ಹಾಜರಿದ್ದರು.

ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ (ಬೆಂಗಳೂರು)

Click to comment

Trending

Exit mobile version