ಆರೋಗ್ಯ / HEALTH

ಬೆಣ್ಣೆ ನಗರಿ ದಾವಣಗೆರೆ ಜನರಿಗೆ ಲಾಕ್ ಡೌನ್ ಯಾವಾ ಲೆಕ್ಕಾ ಹೇಳಿ..?

Published

on

ದಾವಣಗೆರೆ: ಅದ್ಯಾಕೋ ಮೊದಲ ಹಂತ ಅಲ್ಲ,ಎರಡನೇ ಹಂತದ ಲಾಕ್ ಡೌನ್‌ಗೂ ಬೆಣ್ಣೆ ನಗರಿ ದಾವಣಗೆರೆ ಜನರು ಕ್ಯಾರೆ ಎನ್ನುತ್ತಿಲ್ಲ.
ಜೊತೆಗೆ ಇಲ್ಲಿನ ಹಲವು ಕಡೆ ವಾಹನ ಸಂಚಾರ ಜೋರಾಗಿದ್ದು,ಹಿಂದೆ ಬರುವ ಆ್ಯಂಬುಲೆನ್ಸ್ಗೂ ದಾರಿ ಬಿಡದಷ್ಟು ಓಡಾಟ ಆರಂಭಸಿವೆ.
ಸದ್ಯ ದಾವಣಗೆರೆ ನಗರದ ಗಾಂಧಿ ವೃತ್ತದ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ಆ್ಯಂಬುಲೆನ್ಸ್ಗೂ ದಾರಿ ಬಿಡದೆ ವಾಹನಗಳು ಸಾಲುಗಟ್ಟಿ ನಿಂತಿವೆ.ಪರಿಣಾಮ ಇಲ್ಲಿ ಲಾಕ್ ಡೌನ್ ಇದೆಯೋ ಇಲ್ವೋ ಎನ್ನುವ ಸಂಶಯ ಸ್ವತಃ ಪೊಲೀಸರನ್ನೇ ಕಾಡಲಾರಂಭಿಸಿದೆಯAತೆ..
ಇನ್ನು ಮೇ ೩ ರವರೆಗೆ ಲಾಕ್ ಡೌನ್ ವಿಸ್ತರಣೆ ಮುಂದುವರಿಕೆ ಮಾಡಲಾಗಿದ್ದರೂ,ಜನರು ಮಾತ್ರ ಇದಕ್ಕೆ ಸ್ಪಂದಿಸದೇ ತಮ್ಮ ವಾಹನಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಓಡಾಟ ಆರಂಭಿಸಿದ್ದಾರೆ.ಪರಿಣಾಮ ನಗರದ ಹಲವು ಕಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿರುವ ಘಟನೆಗಳು ಕೂಡ ಬೆಳಕಿಗೆ ಬಂದಿವೆ.
ಒಟ್ಟಾರೆ ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ನೆಗೆಟಿವ್ ಬಂದ ಬಳಿಕವೂ ಜನರು ಹಾಗೂ ವಾಹನಗಳ ಓಡಾಟ ಹೆಚ್ಚಾಗಿರುವ ಬಗ್ಗೆ ಇಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೇ ದಾವಣಗೆರೆ ಕೊರೊನಾ ಹಾಟ್‌ಸ್ಪಾಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ..

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Click to comment

Trending

Exit mobile version