ಆರೋಗ್ಯ / HEALTH

ಹುಬ್ಬಳ್ಳಿಯಲ್ಲಿ ಬಡವರಿಗೆ ಕೊಡುವ ಆಹಾರದಲ್ಲೂ ತಾರತಮ್ಯನಾ..?

Published

on

ಹುಬ್ಬಳ್ಳಿ:ಲಾಕ್‌ಡೌನ್ ಹಿನ್ನಲೆಯಲ್ಲಿ ಬಡಜನರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯದ ಆರೋಪ ಕೇಳಿಬಂದಿದೆ.
ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಈ ವೇಳೆಯಲ್ಲಿ ಬಡಜನರು ಕೈಯಲ್ಲಿ ಕೆಲಸವಿಲ್ಲದೇ ಪರದಾಡುವಂತಾಗಿದ್ದು, ಈ ದಿಸೆಯಲ್ಲಿ ಇಂತವರ ಸಹಾಯಕ್ಕೆ ಜಿಲ್ಲಾಡಳಿತ ಸಹಾಯವಾಣಿ ಮಾಡಿದ್ದು, ಅದರಿಂದ ಸಂಘ ಸಂಸ್ಥೆಗಳು ಒದಗಿಸಿದ ಆಹಾರ ಧಾನ್ಯಗಳ ಕಿಟ್ ಗಳನ್ನು ಕಷ್ಟದಲ್ಲಿರುವ ಜನರಿಗೆ ಒದಗಿಸುವ ಕೆಲಸ ಮಾಡುತ್ತಿದೆ.
ಆದರೆ ಇಂತಹ ಬಡಜನರಿಗೆ ಕೊಡಬೇಕಾಗಿದ್ದ ಆಹಾರ ಕಿಟ್ ಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನೂ ನಾವು ಬಡವರು ನಮಗೂ ಆಹಾರ ಕಿಟ್ ಒದಗಿಸಿ, ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಬರುತ್ತಿದ್ದ ರಾಜಕೀಯ ಮುಖಂಡರು
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಯಾಕೆ ಬರುತ್ತಿಲ್ಲ. ಪರಿಣಾಮ ನಿತ್ಯದ ಜೀವನ ನಡೆಸುವುದು ಕಷ್ಟವಾಗಿದ್ದು ಇನ್ನಾದರೂ ಸಂಬAಧಪಟ್ಟವರು ತಾರತಮ್ಯ ಮಾಡದೇ ಬಡಜನರಿಗೆ ಆಹಾರ ಕಿಟ್ ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ…

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version