ಆರೋಗ್ಯ / HEALTH

ಆಳಂದದಲ್ಲಿ 4 ಸಾವಿರ ಆಹಾರ ಧ್ಯಾನಗಳ ಕಿಟ್ ವಿತರಣೆ

Published

on

ಆಳಂದ(ಕಲಬುರಗಿ): ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿ ಜೈ ಭಾರತ ಮಾತಾ ಸಮಿತಿ ವತಿಯಿಂದ ಸರಸಂಬಾದ ಪ್ರಕಾಶ ಮುತ್ಯಾ ಹಾಗೂ ತಹಶೀಲ್ದಾರ್ ದಯಾನಂದ ಪಾಟೀಲ್ ನೇತೃತ್ವದಲ್ಲಿ ಬಡಜನರಿಗೆ ಮತ್ತು ನಿರ್ಗತಿಕರಿಗೆ ೪೦೦೦ ಆಹಾರ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಿಲಾಯಿತು.
ಈ ವೇಳೆ ಮಾತನಾಡಿದ ಸರಸಂಬಾದ ವೈಜುನಾಥ ಝಳಕಿ,ಜೈಭಾರತ ಮಾತಾ ಸಮಿತಿಯಿಂದ ಈ ಕಾರ್ಯವು ನಡೆಯುತ್ತಿದೆ.ನಮ್ಮ ತಾಲೂಕಿನಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು.ಹೀಗಾಗಿ ನಾವು ಮೇ.೩ವರೆಗೆ ದಿನಾಲು ಆಹಾರ ಸಾಮಾಗ್ರಿ ಕಿಟ್‌ನ್ನು ಮಲ್ಲಯ್ಯ ಮುತ್ಯಾ ಮತ್ತು ಪ್ರಕಾಶ ಮುತ್ಯಾ ನೇತೃತ್ವದಲ್ಲಿ ಹಂಚುತ್ತೇವೆAದು ತಿಳಿಸಿದರು.
ಇದಕ್ಕೆ ತಹಶೀಲ್ದಾರ್ ದಯಾನಂದ ಪಾಟೀಲ್ ಮಾತನಾಡಿ,ಇಂತಹ ಕಾರ್ಯಗಳು ನಮ್ಮ ತಾಲೂಕಿನ ಇನ್ನಷ್ಟು ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ವಿಜಯಕುಮಾರ ಪುಲಾರೆ, ಪುರಸಬೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ, ಡಿವೈಎಸ್ಪಿ ಮಲ್ಲಿಕಾರ್ಜುನ, ಸಿಪಿಐ ಶಿವಾನಂದ ಗಾಣಗೇರ, ಸೇರಿದಂತೆ ಕಂದಾಯ, ಪುರಸಭೆ, ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.

ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)

Click to comment

Trending

Exit mobile version