ದೇಶ - ವಿದೇಶ

ದೇವದುರ್ಗ ತಾಲೂಕಿನಲ್ಲಿ ಆಲಿಕಲ್ಲು ಮಳೆ ಗಾಳಿಗೆ ಭತ್ತ ನಾಶ

Published

on

ದೇವದುರ್ಗ (ರಾಯಚೂರು): ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಹೇರುಂಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ ರಾತ್ರಿ ಸುರಿದ ಆಲಿಕಲ್ಲು ಮಳೆ ಹಾಗೂ ರಭಸವಾದ ಗಾಳಿಗೆ ಭತ್ತ ನೆಲದ ಪಾಲಾಗಿ ನಾಶವಾಗಿರುವುದು ವರದಿಯಾಗಿದೆ.
ಅಂದ ಹಾಗೇ ಸುಮಾರು ನಾಲ್ಕು ತಿಂಗಳಿAದ ರೈತರು ಜೋಪಾನ ಮಾಡಿ ಬೆಳೆಸಿದ ಭತ್ತದ ಬೆಳೆ ಕೈಗೆ ಸೇರುವ ಮೊದಲೇ ಹಾಳಾಗಿದ್ದು,ಇದರಿಂದ ಅವರೆಲ್ಲಾ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇನ್ನು ಹೇರುಂಡಿ ಗ್ರಾಮದಲ್ಲಿ ತಡರಾತ್ರಿ ಸುರಿದ ಆಣೆಕಲ್ಲು ಮಳೆಯಿಂದ ೧೫೦ ಕ್ಕೂ ಹೆಚ್ಚು ಜಮೀನುಗಳ ಅಧಿಕ ಭತ್ತದ ಬೆಳೆ ನಾಶವಾಗಿದೆ.
ಪ್ರತಿ ಎಕರೆಗೆ ೨೫ ರಿಂದ ೩೦ ಸಾವಿರ ಭತ್ತ ಬೆಳೆಯಲು ರೈತರು ಖರ್ಚು ಮಾಡಿದ್ದು,ಆದರೆ ಆಲಿಕಲ್ಲು ಮಳೆಯಿಂದ ಪ್ರತಿಯೊಬ್ಬ ರೈತರಿಗೆ ತಲಾ ೬೦ ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ರೈತರು ಒಂದು ಕಡೆ ಲಾಕ್‌ಡೌನ್‌ನಿಂದ ಯಾವುದೇ ಕೆಲಸವಿಲ್ಲದೇ ಪರಿತಪಿಸುವಂತಾಗಿದ್ರೆ ಇನ್ನೊಂದು ಕಡೆ ಬೆಳೆದ ಭತ್ತದ ಬೆಳೆ ಕೂಡ ಈಗ ನಾಶವಾಗಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದೇ ವೇಳೆ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ ಇಲಾಖೆಯಾಗಲಿ,ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಭೇಟಿ ನೀಡಲಾರದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ ರೈತರು ಕಂಗಲಾಗಿದ್ದು, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಇಂತಹ ರೈತರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮೀಣ ಭಾಗದವರ ಒತ್ತಾಯವಾಗಿದೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ (ರಾಯಚೂರು)

Click to comment

Trending

Exit mobile version