ಆರೋಗ್ಯ / HEALTH

ಕೊರೊನಾ ಟೈಂನಲ್ಲಿ ಸ್ಮಶಾನಕ್ಕೆ ಭೇಟಿ, ಅಂಜುಮಾನ್ ಸಂಸ್ಥೆಗೆ ನೋಟಿಸ್

Published

on

ಹುಬ್ಬಳ್ಳಿ:ಲಾಕ್ ಡೌನ್ ನಡುವೆಯೂ ಅಂಜುಮನ್ ಸಂಸ್ಥೆ ಏಪ್ರಿಲ್ ೯ ರಂದು ಶಾಬ್-ಇ-ಬರಾತ್ ಆಚರಿಸಲು ಸ್ಮಶಾನಕ್ಕೆ ಭೇಟಿ ನೀಡಿದ ಬಗ್ಗೆ ಹುಬ್ಬಳ್ಳಿ ಅಂಜುಮಾನ್-ಇ-ಇಸ್ಲಾA ಸಂಸ್ಥೆಯ ಪದಾಧಿಕಾರಿಗಳಿಗೆ ಕರ್ನಾಟಕ ವಕ್ಫ್ ಬೋರ್ಡ್ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದೆ.
ಕೋವಿಡ್-೧೯ ಸಾಂಕ್ರಾಮಿಕ ಮತ್ತು ಸರ್ಕಾರವು ವಿಧಿಸಿರುವ ಲಾಕ್‌ಡೌನ್ ದೃಷ್ಟಿಯಿಂದ ಸಭೆಯ ಪ್ರಾರ್ಥನೆಯನ್ನು ಸ್ಥಗಿತಗೊಳಿಸುವ ಸೂಚನೆಗಳ ಹೊರತಾಗಿಯೂ ಅಂಜುಮಾನ್-ಇ-ಇಸ್ಲಾAನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಸ್ಮಶಾನಕ್ಕೆ ಭೇಟಿ ನೀಡಿದ್ದಾರೆ.
ಇದು ೧೯೯೫ರ ವಕ್ಫ್ ಕಾಯ್ದೆಯ ಸೆಕ್ಷನ್ ೬೫(೫)ರ ಅಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ತಪ್ಪಾದ ಕೃತ್ಯವಾಗಿದ್ದು,ಕೂಡಲೇ ಅಂಜುಮಾನ್-ಇ-ಇಸ್ಲಾAನ ಪದಾಧಿಕಾರಿಗಳು ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ರಾಜ್ಯ ವಕ್ಫ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿದ್ದಾರೆ.
ಈ ಶಬ್ ಇ ಬಾರತ್ ನಡೆಸಿದ್ದ ಸ್ಮಶಾನದ ಕಾವಲುಗಾರನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,ಆತನ ಸಂಪರ್ಕದಲ್ಲಿದ್ದ ಹಾಗೂ ಅಂದು ಸ್ಮಶಾನದ ಪೂಜೆಯಲ್ಲಿ ಪಾಲ್ಗೊಂಡಿದ್ದ ಅಂಜುಮನ್ ಸಮಿತಿಯ ಹಲವರು ಈಗಾಗಲೇ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version