ಆರೋಗ್ಯ / HEALTH

ಶಿರಾದ ಬೇಗಂ ಮೊಹಲ್ಲಾ ಸೀಲ್‌ಡೌನ್ ಸ್ಥಳಕ್ಕೆ ಜಿಲ್ಲಾಡಳಿತ ಭೇಟಿ,ಪರಿಶೀಲನೆ..

Published

on

ಶಿರಾ(ತುಮಕೂರು):ಶಿರಾ ನಗರದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ ೧೦೦ ಮೀಟರ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಸೀಲ್‌ಡೌನ್ ಮಾಡಲಾಗಿದ್ದ ಪ್ರದೇಶಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂದ ಹಾಗೇ ಕಳೆದ ಮಾರ್ಚ್ ೨೭ ರಂದು ಕೊರೊನಾದಿಂದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರು ವಾಸವಾಗಿದ್ದ ಮನೆಯ ಸುತ್ತಮುತ್ತಲಿನ ೩ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೆಡ್‌ಜೋನ್ ಎಂದು ಹಾಗೂ ೭ ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಲಾಗಿತ್ತು. ಅಲ್ಲದೆ, ರೆಡ್‌ಜೋನ್ ಪ್ರದೇಶದಿಂದ ಯಾರೂ ಹೊರಗೆ ಹೋಗದಂತೆ ಮತ್ತು ಬೇರೆಯವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.ಜೊತೆಗೆ ಸೀಲ್‌ಡೌನ್ ಆದನಂತರವೂ ತಾಲ್ಲೂಕು ಅಡಳಿತ ಆ ಪ್ರದೇಶದಲ್ಲಿ ನಿಗಾ ವಹಿಸಿತ್ತು
ಇನ್ನು ಇದರ ಬಗ್ಗೆ ಪರಿಶೀನೆ ನಡೆಸಲು ಇಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬೇಗಂ ಮೊಹಲ್ಲಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ತಾಲೂಕು ಅಡಳಿತದ ಅಧಿಕಾರಿ ವರ್ಗದವರು ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಮಂತ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version