ನವದೆಹಲಿ : ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೇ.೩ರವರೆಗೆ ಲಾಕ್ ಡೌನ್ ಘೋಷಿಸಿದ್ದ ಕೇಂದ್ರ ಸರಕಾರ ಇದೀಗ ಕೆಲವು ವಿನಾಯಿತಿ ಘೋಷಿಸಿದೆ.
ಸದ್ಯ ಲಾಕ್‌ಡೌನ್ ವೇಳೆ ನೀಡಿರುವ ವಿನಾಯಿತಿ ಬಗ್ಗೆ ಇರುವ ಗೊಂದಲಗಳಿಗೂ ತೆರೆ ಎಳೆದಿರುವ ಕೇಂದ್ರ ಹೇರ್ ಕಟಿಂಗ್ ಸಲೂನ್ ಮತ್ತು ಎಲ್ಲ ರೆಸ್ಟೋರೆಂಟ್‌ಗಳು ಮೇ ೩ರವರೆಗೆ ಬಂದ್ ಆಗಿರುತ್ತದೆ ಎಂದು ಹೇಳಿದರು.
ಇನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳು ಹಾಗೂ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿರುವ ಕೆಲ ನಿರ್ದಿಷ್ಟ ವರ್ಗದ ಅಂಗಡಿಗಳನ್ನು ಮಾತ್ರ ತೆರೆಯಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅವಕಾಶ ಕಲ್ಪಿಸಿದೆ.
ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ