ಆರೋಗ್ಯ / HEALTH

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆ

Published

on

ಲಿಂಗಸೂಗೂರು(ರಾಯಚೂರು):ಕರೋನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ.
ಲಾಕ್‌ಡೌನ್‌ನಿಂದಾಗಿ ಬಡವರು,ನಿರ್ಗತಿಕರು,ಕೂಲಿ ಕಾರ್ಮಿಕರು ಕೆಲಸ ವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು,ಅಂತವರ ನೆರವಿಗೆ ಸಂಘ-ಸAಸ್ಥೆಗಳು ಸಹಾಯ ಮಾಡುತ್ತಿವೆ.
ಅಂದ ಹಾಗೇ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ೧೫ ಜನ ಮಹಿಳೆಯರಿಗೆ ೨ ಕೆ.ಜಿ.ಬೇಳೆ,೫ ಕೆ.ಜಿ.ಅಕ್ಕಿ,೨ ಕೆ.ಜಿ.ಸಕ್ಕರೆ,೨ ಕೆ.ಜಿ ಅಡುಗೆ ಎಣ್ಣೆ,೧ ಕೆ.ಜಿ ರವಾ,೨ ಕೆ.ಜಿ ಗೋಧಿ ಹಿಟ್ಟು,೨ ಕೆ.ಜಿ.ಬೆಲ್ಲ,೧ ಕೆ.ಜಿ.ರಾಗಿ,೫೦೦ ಗ್ರಾಂ.ಬೆಳ್ಳುಳ್ಳಿ ಮತ್ತು ೧೦೦ ಗ್ರಾಂ.ಚಹಪುಡಿಯನ್ನು ೧೦ ದಿನಗಳವರೆಗೆ ಆಗುವಷ್ಟು ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.ತಾಲೂಕಿನ ಬೇರೆ ಬೇರೆ ಭಾಗಗಳ ೧೮೦ಕುಟುಂಬಗಳಿಗೆ ೨ಲಕ್ಷ ೧೨ ಸಾವಿರ ರೂ.ಗಳ ಆಹಾರ ಧಾನ್ಯ ಕೊಡಲಾಗುವುದು ಎಂದು ಟ್ರಸ್ಟ್ನ ಯೋಜನಾಧಿಕಾರಿ ಹನಮಂತ ಹೇಳಿದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಮೇಲ್ವಿಚಾರಕರಾದ ಹರೀಶ್,ಬಸಪ್ಪ ಮೇಟಿ,ನಿಂಗನಗೌಡ ಪಾಟೀಲ್,ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದವರು ಭಾಗಿಯಾಗಿದ್ದರು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Click to comment

Trending

Exit mobile version