ಆರೋಗ್ಯ / HEALTH

ತುಮಕೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

Published

on

ತುಮಕೂರು:ಮಹಾಮಾರಿ ಕರೋನಾ ಸೋಂಕಿಗೆ ತುಮಕೂರಿನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಧಿಕೃತವಾಗಿ ತಿಳಿಸಿದ್ದಾರೆ.
ಜಿಲ್ಲೆಯ ಕೊರೊನಾ ವೈರಸ್‌ನ ನಾಲ್ಕನೇ ಪ್ರಕರಣದ ಪೇಷಂಟ್ ಪಿ-೫೩೫ ಕೆಎಚ್‌ಪಿ ಕಾಲೋನಿಯ ನಿವಾಸಿಯಾಗಿದ್ದು, ಏಪ್ರಿಲ್ ೨೫ ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರು ಅಸ್ತಮಾ ಮತ್ತು ನೋನ್ಸ್ ಯುಪಿಡಿ ಸಮಸ್ಯೆಯಿಂದ ಬಳಲುತ್ತಿದ್ದರು.
ಏಪ್ರಿಲ್ ೨೫ರಂದು ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು, ೨೬ ರಂದು ಬೆಳಗ್ಗೆ ಅವರು ಸಾವನ್ನಪ್ಪಿದ್ದರು. ಇಂದು ಅವರ ವರದಿ ಬಂದಿದ್ದು ಕರೋನಾ ಸೋಂಕು ಇರುವುದು ದೃಡಪಟ್ಟಿದೆ ಎಂದು ಡಿಸಿ ತಿಳಿಸಿದರು.
ಈ ವ್ಯಕ್ತಿ ಯಾವುದೇ ಹೊರಜಿಲ್ಲೆ, ಹೊರರಾಜ್ಯ ಅಥವಾ ವಿದೇಶಕ್ಕೆ ಪ್ರಯಾಣ ಮಾಡಿರುವುದಿಲ್ಲ. ಇವರಿದ್ದ ಪ್ರದೇಶದಲ್ಲಿ ಕಂಟೋನ್ಮೆAಟ್, ಬಫರ್ ಜೋನ್ ಮಾಡುವುದಕ್ಕೆ ಸರ್ಕಾರದಿಂದ ಆದೇಶ ಬಂದಿದೆ.
ಕೆಎಚ್ ಪಿ ಕಾಲೋನಿಯ ೧೦೦ ಮೀಟರ್ ವ್ಯಾಪ್ತಿಯಲ್ಲಿ ಈ ಕಂಟೋನ್ಮೆAಟ್ ಜೋನ್ ಮಾಡಲಾಗಿದೆ ಎಂದರು.
ಇವರ ಮಾದರಿಗಳನ್ನು ಪರೀಕ್ಷೆಗೆ ಕಳಿಸಿದಾಗಲೇ ಅನುಮಾನವಿದ್ದ ಕಾರಣದಿಂದ ಸೂಕ್ತ ಕ್ರಮಗಳ ತಯಾರಿಯನ್ನು ಮಾಡಿಕೊಂಡಿದ್ದೆವು ಅದನ್ನೀಗ ಜಾರಿಗೊಳಿಸುತ್ತೇವೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜಿಲ್ಲಾಸ್ಪತ್ರೆಯಲ್ಲಿ ಇಸೋಲೆಟ್ ಮಾಡಲಾಗಿದೆ ಹಾಗೂ ೫೧ ಇತರೆ ಸಂಪರ್ಕಿತ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಆ ಪ್ರದೇಶದಲ್ಲಿ ಸಿಲ್ ಡೌನ್ ಮಾಡಲಾಗಿದ್ದು ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು.
ತುಮಕೂರಿನ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ ದಯವಿಟ್ಟು ಲಾಕ್ ಡೌನ್ ಮುಗಿಯುವವರೆಗೂ ಯಾರೂ ಮನೆಯಿಂದ ಹೊರಗೆ ಬರಬೇಡಿ, ಆವಶ್ಯಕ ಮೆಡಿಕಲ್ ಎಮರ್ಜನ್ಸ್ ಇದ್ದರೆ ಮಾತ್ರ ಹೊರಗೆ ಬನ್ನಿ ಜಿಲ್ಲಾಡಳಿತದ ಜೊತೆ ಸಹಕರಿಸಿ ಎಂದು ಜಿಲ್ಲಾಧಿಕಾರಿಯ ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Click to comment

Trending

Exit mobile version