ಆರೋಗ್ಯ / HEALTH

ಫಲಾನುಭವಿಗಳಿಗೆ ಪಿಂಚಣಿ ಹಣ ಕೊಡಿ,ಮುದಗಲ್ ಕರವೇ ಒತ್ತಾಯ

Published

on

ಲಿಂಗಸೂಗೂರು(ರಾಯಚೂರು):ಲಾಕ್‌ಡೌನ್‌ನಿAದಾಗಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಅಂಗವಿಕಲ ವೇತನ,ವಿಧವಾ ವೇತನ, ವೃದ್ಧಾಪ್ಯ ವೇತನ ಸಿಗದೇ ಸುಮಾರು ಮಂದಿ ಪರದಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಸದ್ಯ ಲಿಂಗಸೂಗೂರು ತಾಲೂಕಿನ ಮುದಗಲ್ ಹೋಬಳಿಯಾದ್ಯಂತ ೧೩೦೦೦ ಸಾವಿರ ಜನರು ಅಂಗವಿಕಲ ವೇತನ,ವಿಧವಾ ವೇತನ, ವೃದ್ಧಾಪ್ಯ ವೇತನ ಫಲಾನುಭವಿಗಳಿದ್ದಾರೆ.ಜೊತೆಗೆ ಮುದಗಲ್ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು ೩೦೦೦ ಸಾವಿರ ಜನರು ಫಲಾನುಭವಿಗಳಿದ್ದಾರೆ. ಸದ್ಯ ಇವರೆಲ್ಲಾ ಕಳೆದ ೪- ೫ ತಿಂಗಳುಗಳಿAದ ವೇತನ ಸಿಗದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಜೊತೆಗೆ ಫಲಾನುಭವಿಗಳು ದಿನನಿತ್ಯ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಅಂಚೆ ಕಚೇರಿಯ ಮುಂದೆ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ,ಅವರ ಅಕೌಂಟ್‌ನ್ಲಲಿ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದಾಗಿ ಕಂಪ್ಯೂಟರ್‌ಗಳಲ್ಲಿ ಪರಿಶೀಲಿಸಲು ಮುಂದಾದರೇ ಅವುಗಳು ಕೂಡ ಕಳೆದ ಒಂದು ತಿಂಗಳಿನಿAದ ದುರಸ್ತಿಯಲ್ಲಿರುವುದು ಕಂಡು ಬಂದಿದೆ.
ಅಲ್ಲದೆ,ಫಲಾನುಭವಿಗಳ ವೇತನ ಕೊಡಬೇಕಾದರೆ ಬ್ಯಾಂಕಿನಲ್ಲಿ ಹಣ ಕೊಡುತ್ತಿಲ್ಲ,ಹಾಗೆತೇ ರಾಯಚೂರು ಜಿಲ್ಲಾ ಅಂಚೆ ವಿಭಾಗ ಕಚೇರಿಯಿಂದ ಕೂಡ ಹಣ ಬರಬೇಕಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.ಹೀಗಾಗಿ ವಿಧವೆಯರು, ಅಂಗವಿಕಲರು, ವೃದ್ಧರು ತಮ್ಮ ಉಪಜೀವನ ನಡೆಸುವುದು ಕಷ್ಟಕರವಾಗಿದೆ.
ಇದನ್ನು ಇದರ ಬಗ್ಗೆ ಧ್ವನಿ ಎತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್. ಎ. ನಯೀಮ್ ಹಾಗೂ ಸದಸ್ಯರು
ಈ ಕೂಡಲೇ ಜಿಲ್ಲಾಧಿಕಾರಿ ಮತ್ತು ಅಂಚೆ ವಿಭಾಗ ಕಚೇರಿಯ ರಾಯಚೂರು ಅಧೀಕ್ಷಕರು ಈ ಬಡ ಫಲಾನುಭವಿಗಳಿಗೆ ವೇತನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಬAಧ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಮೂಲಕ ರಾಯಚೂರು ಅಂಚೆ ವಿಭಾಗ ಅಧೀಕ್ಷಕರಿಗೆ ಮುದಗಲ್‌ನ ಉಪ ಅಂಚೆ ಅಧೀಕ್ಷಕರಿಗೆ ಸಲ್ಲಿಸಲಾಯಿತು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Click to comment

Trending

Exit mobile version