ಆರೋಗ್ಯ / HEALTH

ದೇಶದಲ್ಲಿ ಲಾಕ್‌ಡೌನ್ 3.0 ಜಾರಿ, ಮೇ 17ರವರೆಗೂ ವಿಸ್ತರಣೆ

Published

on

ನವದೆಹಲಿ: ಇದೇ ಮೇ.೪ರವರೆಗೆ ಇದ್ದ ಕೊರೋನಾ ಲಾಕ್‌ಡೌನ್‌ನ್ನು ಮೇ ೧೭ರವರೆಗೂ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ಇಂದು ಸಂಜೆ ಕೇಂದ್ರ ಗೃಹ ಇಲಾಖೆ ತನ್ನ ಆದೇಶ ಪ್ರತಿ ಬಿಡುಗಡೆ ಮಾಡಿ ದೇಶಾದ್ಯಂತ ಲಾಕ್ ಡೌನ್‌ನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಣೆ ಮಾಡಿರುವುದಾಗಿ ಸ್ಪಷ್ಟಪಡಿಸಿದೆ.
ಅಂದ ಹಾಗೇ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಬಾರಿ ಲಾಕ್ ಡೌನ್ ಘೋಷಿಸಿತ್ತು. ಇದೀಗ ಮೂರನೇ ಬಾರಿಗೆ ೨ ವಾರಗಳವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯ ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು ಮೂರು ಜೋನ್ ಗಳಾಗಿ ವಿಂಗಡಿಸಿದೆ. ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲ ಸಡಿಲಿಕೆಗಳನ್ನು ನೀಡಿದ್ದು ರೆಡ್ ಜೋನ್ ನಲ್ಲಿ ಎಂದಿನAತೆ ಲಾಕ್ ಡೌನ್ ಮಾರ್ಗಸೂಚಿ ಆದೇಶ ಮುಂದುವರೆಯಲಿದೆ.
ಇನ್ನು ಮೇ ೪ರ ಬಳಿಕ ಲಾಕ್ ಡೌನ್ ತೆರವಾಗಬಹುದು ಎಂದು ಅಂದಾಜಿಸಲಾಗಿತ್ತು.ಆದರೆ ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದವು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುವಾಗ ಲಾಕ್ ಡೌನ್ ವಿಸ್ತರಣೆಯಾಗುವ ಸುಳಿವು ಕೊಟ್ಟಿದ್ದರು. ೨ನೇ ಹಂತದ ಲಾಕ್ ಡೌನ್ ಮೇ ೩ರ ತನಕ ಜಾರಿಯಲ್ಲಿರುತ್ತದೆ. ಮೇ ೪ ರಿಂದ ೩ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದೆ.
ಇದೇ ವೇಳೆ ೩ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಕೆಂಪು, ಹಸಿರು ಮತ್ತು ಹಳದಿ ವಲಯಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗುತ್ತದೆ. ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿವೆ.ಕೆಂಪು ವಲಯದಲ್ಲಿ ಕೈಗಾರಿಕೆಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಶೇ ೩೩ರಷ್ಟು ಉದ್ಯೋಗಿಗಳು ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಸರ್ಕಾರಿ ಕಚೇರಿಗಳು ಸಹ ಶೇ ೩೩ರಷ್ಟು ಸಿಬ್ಬಂದಿ ಜೊತೆ ಕಾರ್ಯ ನಿರ್ವಹಣೆ ಮಾಡಬಹುದು.ಕಿತ್ತಲೆ ವಲಯದಲ್ಲಿ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಒಂದು ವಾಹನದಲ್ಲಿ ಇಬ್ಬರು ಮಾತ್ರ ಓಡಾಡಬೇಕು. ಅಂತರ್ ಜಿಲ್ಲಾ ಸಂಚಾರ ನಡೆಸುವವರು ಅನುಮತಿ ಪಡೆಯಬೇಕು.ಹಸಿರು ವಲಯದಲ್ಲಿ ಈಗಾಗಲೇ ಘೋಷಣೆ ಮಾಡಿರುವ ಎಲ್ಲಾ ರಿಯಾಯಿತಿ ಸಿಗಲಿದೆ. ಬಸ್‌ಗಳು ಸಂಚಾರ ನಡೆಸಬಹುದಾಗಿದ್ದು, ಶೇ ೫೦ರಷ್ಟು ಪ್ರಯಾಣಿಕರು ಮಾತ್ರ ಇರಬೇಕು.
ಇದೇ ವೇಳೆ ಲಾಕ್ ಡೌನ್ ವಿಸ್ತರಣೆ ಮಾಡಿರುವ ಕುರಿತು ಗೃಹ ಸಚಿವಾಲಯ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ನವದೆಹಲಿ

Click to comment

Trending

Exit mobile version