ಆರೋಗ್ಯ / HEALTH

ಸತ್ತ ಹೆಣನಾ ಮುಂಬೈನಿ0ದ ಮಂಡ್ಯಕ್ಕೆ ಹೇಗೆ ತಂದ್ರು ಹೇಳಿ..?

Published

on

ಮುಳಬಾಗಿಲು(ಕೋಲಾರ): ಮಹಾಮಾರಿ ಕೊರೊನಾ ಪೀಡಿತರನ್ನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಸತ್ತ ವ್ಯಕ್ತಿಯನ್ನು ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಗೆ ತಂದರು ಎಂದು ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಮುಳಬಾಗಿಲು ಪಟ್ಟಣದಲ್ಲಿ ಜೆಡಿಎಸ್ ಮುಖಂಡನ ಜನತಾ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸತ್ತ ವ್ಯಕ್ತಿಯನ್ನು ಕೊರೊನಾ ತಪಾಸಣೆ ಮಾಡದೆ ಮಹಾರಾಷ್ಟ್ರದಿಂದ ಮಂಡ್ಯಕ್ಕೆ ತರಲು ಅವಕಾಶ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.
ಅಲ್ಲದೆ,ಮಂಡ್ಯ ಜಿಲ್ಲೆಯಲ್ಲಿ ೮ ಜನರಿಗೆ ಪಾಸಿಟಿವ್ ಬಂದಿದೆ. ಇವೆಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ಇರಲಿಲ್ವಾ, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು, ಇನ್ನು ಕೆಲ ಜನರು ಮುಂಬೈ ನಿಂದ ಬಂದಿದ್ದಾರೆ, ಅವರನ್ನು ಪತ್ತೆ ಹಚ್ಚಬೇಕು ಎಂದರು.
ಇನ್ನು ಮೇ.೩ರ ಬಳಿಕ ಲಾಕ್ ಡೌನ್ ಮುಂದುವರಿಸುವ ಕುರಿತು ಮಾತನಾಡಿ, ಲಾಕ್‌ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ. ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಸಡಿಲಿಕೆ ನೀಡಿದ್ರೆ ಡ್ಯಾಮೇಜ್ ಆಗುತ್ತೆ ಅಂತ ಹಲವಾರು ಜನರು ಹೇಳಿದ್ದಾರೆ. ಮೇ ೧೮ನೇ ತಾರೀಖಿನ ಒಳಗೆ ಇಡೀ ದೇಶದಲ್ಲಿ ೩೮ ಸಾವಿರ ಜನ ಸಾಯುತ್ತಾರೆ ಅನ್ನೋ ಮಾಹಿತಿ ಇದೆ. ಜನರ ಜೀವದ ಜೊತೆ ಚೆಲ್ಲಾಟವಾಡದೆ ಸರ್ಕಾರ ತೀರ್ಮಾನ ಮಾಡಬೇಕು. ಈಗಾಗಲೇ ಕೆಲ ಚಟುವಟಿಕೆಗಳಿಗೆ ರಿಲ್ಯಾಕ್ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಗೆ ನೀಡಿದರು.
ಇನ್ನೂ ನನ್ನ ಸರ್ಕಾರದಲ್ಲಿ ಮಾಡಿದ ಹಣದಲ್ಲಿ ಈಗ ಕೆಲಸ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ದುಂದು ವೆಚ್ಚ ಆಗುತ್ತಿದೆ. ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡಿದ ಹಣ ಇಡೀ ದೇಶಕ್ಕೆ ಹಂಚಬಹುದಾಗಿದೆ, ಬೇರೆ ರಾಜ್ಯಗಳಲ್ಲಿ ಕೊರೊನಾ ಪೀಡಿತರಿಗೆ ಸರ್ಕಾರ ನೀಡುತ್ತಿರುವ ಪ್ಯಾಕೇಜ್‌ಗಳ ಮಾಹಿತಿ ತರಸಿಕೊಳ್ಳಲಿ. ೯ಸಾವಿರ ಕೋಟಿ ಹಣವನ್ನು ಎಫ್‌ಡಿನಲ್ಲಿ ಸರ್ಕಾರ ಇಟ್ಟುಕೊಂಡಿದೆ,ಅದನ್ನು ಉಪಯೋಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕAಟ್ರಾಕ್ಟರ್‌ಗಳಿಗೆ ನೀಡುವ ಹಣದಲ್ಲಿ ೦.೫ ಪರ್ಸೆಂಟ್ ಹಣವನ್ನು ಸರ್ಕಾರ ಇಡಿಯುತ್ತಿರುವ ಹಣ ಎಲ್ಲಿ, ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಸಮಯ ಇದಲ್ಲ, ರಾಜಕಾರಣ ಮಾಡುವ ಸಮಯವಲ್ಲ. ನಾವೆಲ್ಲರೂ ಒಗ್ಗಟಾಗಿ ಕೊರೊನಾ ಓಡಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಮುಳಬಾಗಿಲು ಜೆಡಿಎಸ್ ಮುಖಂಡ ಸಂಮೃದ್ಧಿ ಮಂಜುನಾಥ್ ಆಯೊಜಿಸಿದ್ದ ಜನತಾ ದಾಸೋಹ ಕಾರ್ಯಕ್ರಮದಲ್ಲಿ ಬಡವರಿಗೆ ದಿನಸಿ ಹಾಗೂ ತರಕಾರಿ ಕಿಟ್‌ಗಳನ್ನು ಸಾಂಕೇತಿಕವಾಗಿ ಹೆಚ್‌ಡಿಕೆ ವಿತರಣೆ ಮಾಡಿದ್ರು.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Click to comment

Trending

Exit mobile version