ಆರೋಗ್ಯ / HEALTH

ಮಾಸ್ಕ್ ಧರಿಸದಿದ್ದವರಿಗೆ `ದಡಂ’ ದಶಗುಣಂ..

Published

on

ಮುಳಬಾಗಿಲು(ಕೋಲಾರ):ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದವರಿಗೆ ಮುಳಬಾಗಿಲು ನಗಸಭೆ ಆಯುಕ್ತ ಶ್ರೀನಿವಾಸ ಮೂರ್ತಿ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಮುಳಬಾಗಿಲು ನಗರದ ಸುಲ್ತಾನ್ ಬಜಾರ್,ಎಂ.ಸಿ ರಸ್ತೆ ಬಳಿ ಮಾಸ್ಕ್ ಹಾಕದೆ ಸಂಚರಸುತ್ತಿದ್ದವರಿಗೆ ೧೦೦ರೂ.ದಂಡ ವಿಧಿಸಿ ಮಾತನಾಡಿದ ಅವರು ತಕಾರಿ ದಿನಸಿ ಇನ್ನಿತರ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೋಂಡುಕೊಳ್ಳಲು ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ತುಕೊಳ್ಳಬೇಕು, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದೇವೆ ಎಂದರು..
ಜನರಲ್ಲಿ ವೈರಸ್ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಜಿಲ್ಲಾಡಳಿತ ಹಾಗು ನಗರಸಭೆ ಇಂದಿನಿAದ ದಂಡ ವಿಧಿಸಿ ಜನರಲ್ಲಿ ಜಾಗೃತಿ ಮೂಡಿಸಿಲಾಗುತ್ತಿದೆ ಎಂದು ತಿಳಿಸಿದರು.
ನಾಗರಿಕರು ರಸ್ತೆಯಲ್ಲಿ ಮಾಸ್ಕ್ ಹಾಕದೇ ಸುಖಾ ಸುಮ್ಮನೆ ಓಡಾಟ ಮಾಡುವ ಮುನ್ನ ಯೋಚಿಸಿ,ಇಲ್ಲದಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ನಗರಸಭೆಯಿಂದ ನೀಡಲಾಗಿದೆ.ಈ ದಂಡ ಆರಂಭಿಕವಾಗಿದ್ದು,ಮುAದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದೆ ಹೋದಲ್ಲಿ,ದಂಡದ ಪ್ರಮಾಣ ಹೆಚ್ಚಾಗಲಿದೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಮೇರೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಂಡ ಶುಲ್ಕವಾಗಿ ೧೨.೦೦೦ ರೂ.ಗಳನ್ನು ಸ್ವೀಕರಿಸಲಾಗಿದೆ.
ನಗರ ಆರಕ್ಷಕ ಕ್ರೈಮ್ ನಿರೀಕ್ಷಕರಾದ ಸೀತಪ್ಪ ,PSI ಶ್ರೀನಿವಾಸ್, ಕಛೇರಿಯ ವ್ಯವಸ್ಥಾಪಕರಾದ ಎಲ್.ಎನ್. ಶ್ರೀನಿವಾಸ್, ನೋಡಲ್ ಇಂಜಿನಿಯರ್‌ಡಾ.ಸುನೀಲ್ ಕುಮಾರ್ ಕಿರಿಯ ಆರೋಗ್ಯಾಧಿಕಾರಿ ಶಿವರೆಡ್ಡಿ,ಡಿ.ಸಿ.ಬಿ ಸುಬ್ರಮಣಿ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು..

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Click to comment

Trending

Exit mobile version