ಆರೋಗ್ಯ / HEALTH

ದೇಶಕ್ಕೆ ಕೊರೊನಾ ಚಿಂತೆ..ಗದಗದಲ್ಲಿ ಮಾತ್ರ ಕೆಲವರಿಗೆ ಇಸ್ಪೀಟ್ ಆಟ ಬೇಕಂತೆ..

Published

on

ಗದಗ: ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಕೆಲ ಯುವಕರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ..ಯಾಕಂದ್ರೆ ಲಾಕ್‌ಡೌನ್ ಇದ್ದರೂ ಮನೆಯಲ್ಲಿ ಇರದೇ ಪುಂಡಾಟ ಮೆರೆಯುತ್ತಿರುವ ಈ ಯುವಕರು ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಶುರುವಿಟ್ಟುಕೊಂಡಿದ್ದಾರೆ.
ಅ0ದ ಹಾಗೇ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಈ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊ0ಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ.
ಇನ್ನು ಯಾರಾದರೂ ಬಂದರೆ ಎಸ್ಕೇಪ್ ಆಗಲು ಸರಳ ಮಾರ್ಗಕ್ಕೊಸ್ಕರ ಬೆಟ್ಟದ ಮೇಲೆ ಜೂಜಾಟವಾಡಲು ಹೊಗುತ್ತಿದ್ದಾರೆನ್ನಲಾಗುತ್ತಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Click to comment

Trending

Exit mobile version