ಆರೋಗ್ಯ / HEALTH

ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೇರಿಕೆ

Published

on

ಬೆಂಗಳೂರು:ಇಂದು 8 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ.
ಮತ್ತೊಂದು ಕಡೆ ದಾವಣಗೆರೆಯ 55 ವರ್ಷದ ಮಹಿಳೆ (ರೋಗಿ 694) ಕೊರೊನಾಗೆ ಸಾವನ್ನಪ್ಪಿದ್ದು,ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೇರಿಕೆಯಾಗಿದೆ. ದಾವಣಗೆರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ 4ಕ್ಕೇರಿಕೆಯಾಗಿದೆ.
ಇನ್ನುಳಿದಂತೆ ದಾವಣಗೆರೆ ಮತ್ತು ಕಲಬುರಗಿಯಲ್ಲಿ ತಲಾ ಮೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ.
ಕಲಬುರಗಿಯ ಮೂರು ಮತ್ತು ಬೆಳಗಾವಿಯ ಒಬ್ಬರಿಗೆ ಕೊರೋನಾ ಸೋಂಕಿತರ ಸಂಪರ್ಕದಿಂದ ಸೋಂಕು ಅಂಟಿಕೊಂಡಿದೆ. ದಾವಣಗೆರೆ ಮೂರು ಮತ್ತು ಬೆಂಗಳೂರು ಒಬ್ಬರಲ್ಲಿ ಹೇಗೆ ಸೋಂಕು ಕಾಣಿಸಿಕೊಂಡಿದೆ ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version