ಆರೋಗ್ಯ / HEALTH

ಹೊರ ರಾಜ್ಯದ ಕಾರ್ಮಿಕರಿಗೆ ಬಸ್ ನಿಲ್ದಾಣದಲ್ಲಿ ಆಹಾರ ಕಿಟ್ ವಿತರಣೆ..

Published

on

ಹುಬ್ಬಳ್ಳಿ:ಹುಬ್ಬಳ್ಳಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಹರಸಾಹಸ ಪಡುತ್ತಿರುವ ಬೇರೆ ಬೇರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಇಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ಆಹಾರದ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಎರಡು ತಿಂಗಳುಗಳಿAದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಈ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಬಸ್ ಸೇವೆಗಾಗಿ ಪ್ರತಿಯೊಬ್ಬರಿಗೆ ಅಂದಾಜು ೬ ರಿಂದ ೧೨ ಸಾವಿರ ರೂಪಾಯಿಗಳವರೆಗೂ ರಾಜ್ಯ ಸರಕಾರಕ್ಕೆ ಪಾವತಿಸಬೇಕಾಗಿರುವುದು ಖಂಡನೀಯ ಎಂದು ತಿಳಿಸಿದರು.
ಇನ್ನು ರಾಜ್ಯದ ವಲಸೆ ಕಾರ್ಮಿಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೋರಾಟವನ್ನು ಶ್ಲಾಘಿಸಿದರು.ರಾಜ್ಯ ಸರಕಾರ ಕೂಡಲೇ ಆಯಾ ರಾಜ್ಯಗಳ ಸರಕಾರಗಳೊಂದಿಗೆ ಮಾತನಾಡಿ ಈ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಉಚಿತವಾಗಿ ಅವರವರ ರಾಜ್ಯಗಳಿಗೆ ಕಳುಹಿಸಿ ಮಾನವೀಯತೆ ಮೆರೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಂದ್ರ ಸಿಂಘಿ ಹಾಗೂ ಶಫಿ ಯಾದಗಿರಿ ಮುಂತಾದವರು ಹಾಜರಿದ್ದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version