ಆರೋಗ್ಯ / HEALTH

ಆಹಾರ ಇಲಾಖೆ ವಿತರಿಸಿರುವ ಆಹಾರ ಪದಾರ್ಥ ತೀರಾ ಕಳಪೆ

Published

on

ಮಳವಳ್ಳಿ(ಮಂಡ್ಯ): ದೇಶ ವ್ಯಾಪ್ತಿ ಲಾಕ್ ಡೌನ್‌ಯಾದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ೧೫೦ ಕುಟುಂಬಗಳಿಗೆ ಬಿಎಸ್‌ಪಿ ಪಕ್ಷದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಅಂದ ಹಾಗೇ ಪಟ್ಟಣದ ಸಿದ್ದಾರ್ಥನಗರ, ಮುಸ್ಲಿಂ ಬ್ಲಾಕ್, ಕೀರ್ತಿನಗರ ವಾಸಿಗಳಿಗೆ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ನೇತೃತ್ವದಲ್ಲಿ ಸುಮಾರು ೧೫೦ ಕುಟುಂಬಗಳಿಗೆ ಅಕ್ಕಿ,ಬೇಳೆ, ಎಣ್ಣೆ, ಸೋಪು, ಸಕ್ಕರೆ , ಈರುಳ್ಳಿ, ಗೋದಿ ಹಿಟ್ಟು, ನೀರಿನ ಬಾಟಲ್ ಸೇರಿದಂತೆ ಹಲವು ಪದಾರ್ಥಗಳನ್ನು ವಿತರಿಸಲಾಯಿತು.
ಇನ್ನೂ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ವಾಹಿನಿಯೊಂದಿಗೆ ಮಾತನಾಡಿ ಹೊರ ರಾಜ್ಯ ಹಾಗೂ ಸೀಲ್ ಡೌನ್ ಏರಿಯಾದಿಂದ ಬರುತ್ತಿದ್ದು,ಅವರನ್ನು ಪತ್ತೆ ಹಚ್ಚಿ ಅವರಿಗೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಆಹಾರ ಇಲಾಖೆ ವಿತರಿಸಿರುವ ಬೇಳೆ ತೀರಾ ಕಳಪೆ ಮಟ್ಟದಿಂದು ಕೂಡಿದ್ದು,ಇದು ಪ್ರಾಣಿಗಳ ಬಳಕೆಗೂ ಯೋಗ್ಯವಿಲ್ಲ ಇದರ ಬಗ್ಗೆ ತನಿಖೆಯಾಗಬೇಕು, ಇದಲ್ಲದೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ವೀರಭದ್ರಯ್ಯ,ತಾಲ್ಲೂಕು ಅಧ್ಯಕ್ಷ ನಂಜಪ್ಪ, ಅಂಬೇಡ್ಕರ್ ವಿವಿದ್ಧೋದೇಶ ಸಹಕಾರ ಸಂಘದ ಕಾರ್ಯದರ್ಶಿ ವಿ.ನಂಜುAಡಸ್ವಾಮಿ,ಸುದಾಕರ್,ಕಿಸನ್,ಉಮೇಶ್ ಮೌರ್ಯ ಸೇರಿದಂತೆ ಮತ್ತಿತ್ತರರು ಇದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version