ಆರೋಗ್ಯ / HEALTH

ಬೆಚ್ಚಿ ಬಿದ್ದ ಕರ್ನಾಟಕ..

Published

on

ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ಏರುತ್ತಲಿದ್ದಾರೆ.
ಇಂದು ಹಾಸನ, ಧಾರವಾಡ, ಬಾಗಲಕೋಟೆ ,ಬೀದರ್ ,ದಕ್ಷಿಣ ಕನ್ನಡ, ಬೆಂಗಳೂರು ,ಮಂಡ್ಯ ,ಯಾದಗಿರಿ ,ಕಲಬುರಗಿ ,ಬಳ್ಳಾರಿ, ಬೀದರ್ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ  ೪೨ ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ ೯೦೪ಕ್ಕೇ ಏರಿಕೆಯಾಗಿದೆ.
ಅಂದ ಹಾಗೇ ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ ೧೫ , ಹಾಸನ ೫ , ದಕ್ಷಿಣ ಕನ್ನಡ ೨ , ಬೀದರ್ ೨, ಚಿಕ್ಕಬಳ್ಳಾಪುರ ೧, ಬಳ್ಳಾರಿ ೧ , ಯಾದಗಿರಿ ೨ ,ಕಲಬುರ್ಗಿ ೧, ಮಂಡ್ಯ ೧, ಬೆಂಗಳೂರು ನಗರ ೩ , ಧಾರವಾಡ ೯ ಸೋಂಕಿತರು ದೃಡಪಟ್ಟಿದ್ದಾರೆ.
ಇದೇ ವೇಳೆ ಹಾಸನ ಜಿಲ್ಲೆಗೆ ಕೊರೊನಾ ಮಹಾಮಾರಿ ಎಂಟ್ರಿ ಹೊಡೆದಿದೆ.ಇವತ್ತಿನ ಹೆಲ್ತ್ ಬುಲೆಟಿನ್ ಅಲ್ಲಿ ಹಾಸನ ಜಿಲ್ಲೆಯಲ್ಲಿ ಐವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ.ಜಿಲ್ಲಾ ಆರೋಗ್ಯಾಧಿಕಾರಿ ಕೆ ಟಿ ಸತೀಶ್ ಅವರು ದೃಡೀಕರಿಸಿದ್ದು, ಒಟ್ಟು ೫ ಮಂದಿಗೆ ಕೊರೊನಾ ವೈರಸ್ ತಗುಲಿರುವುದ ದೃಢಪಡಿಸಿದ್ದಾರೆ.
೫ ಜನ ಸೋಂಕಿತರಲ್ಲಿ ೨ಜನ ಮಕ್ಕಳು ಇರುವುದು ಆತಂಕಕ್ಕೆ ಕಾರಣವಾಗಿದೆ.ಇವರೆಲ್ಲರೂ ಚನ್ನರಾಯಪಟ್ಟಣದ ಹಳ್ಳಿಯವರಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರದಿಂದ ಹಿಂದಿರುಗಿ ಬಂದಿದ್ದರು, ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇಂದು ಅವರ ಗಂಟಲು ದ್ರವದ ವರದಿ ಬಂದಾಗ ಅವರಿಗೆಲ್ಲರಿಗೂ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ.
ಬಳ್ಳಾರಿಯಲ್ಲಿ ೩೦ ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ೪೬ ವರ್ಷದ ವ್ಯಕ್ತಿಗೆ ೭೯೦ರ ಸೋಂಕಿತ ವ್ಯಕ್ತಿಯಿಂದ ರೋಗ ಅಂಟಿದ್ದು, ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆಯ ೫೫ ವರ್ಷದ ವ್ಯಕ್ತಿಗೆ ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ೧೪ ವರ್ಷದ ಬಾಲಕನಿಗೆ ರೋಗಿ ನಂ.೫೨೯ರ ವ್ಯಕ್ತಿಯಿಂದ ರೋಗ ತಗುಲಿದೆ. ಯಾದಗಿರಿಯಲ್ಲಿ ೩೩ ವರ್ಷದ ಮಹಿಳೆ, ೩೮ ವರ್ಷದ ವ್ಯಕ್ತಿಗೆ ಗುಜರಾತ್‌ನ ಅಹಮದಾಬಾದ್‌ನಿಂದ ಹಿಂದಿರುಗಿದ ಪರಿಣಾಮ ರೋಗ ಹರಡಿದೆ.
ಮಂಡ್ಯದಲ್ಲಿ ೨೮ ವರ್ಷದ ವ್ಯಕ್ತಿ ಮುಂಬೈನಿAದ ಸೋಂಕು ತಗುಲಿಸಿಕೊಂಡು ಬಂದಿದ್ದು, ಆತನನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆಯ ೧೪ ವರ್ಷದ ಬಾಲಕ, ೩೩ ವರ್ಷದ ವ್ಯಕ್ತಿ, ೨೩, ೧೯ ವರ್ಷದ ಇಬ್ಬರು, ೩೪ ವರ್ಷದ ಪುರುಷ, ೧೭,೧೮ ವರ್ಷದ ಯುವಕ, ೩೨, ೨೦ ವರ್ಷದ ವ್ಯಕ್ತಿಗಳು, ೮೦ ವರ್ಷದ ವೃದ್ಧ, ೨೯ ವರ್ಷದ ವ್ಯಕ್ತಿ ಗುಜರಾತ್‌ನಿಂದ ಬಂದ ಹಿನ್ನೆಲೆಯಲ್ಲಿ ಸೋಂಕು ತಗುಲಿದ್ದು, ಈ ಎಲ್ಲರನ್ನೂ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡದ ೧೮ ಹಾಗೂ ೧೯ ವರ್ಷದ ಯುವಕರು, ೨೬,೨೦,೨೭ ವರ್ಷದ ಪುರುಷರು, ೭೦ ವರ್ಷದ ವೃದ್ಧ, ೫೦ ವರ್ಷದ ವ್ಯಕ್ತಿ, ೩೧ ಹಾಗೂ ೨೫ ವರ್ಷದ ವ್ಯಕ್ತಿ ಸೇರಿದಂತೆ ೯ ಜನರು ಗುಜರಾತ್ ನ ಅಹಮದಾಬಾದ್‌ನಿಂದ ಹಿಂದಿರುಗಿದ ಹಿನ್ನೆಲೆಯಲ್ಲಿ ಈ ಸೋಂಕು ಅಂಟಿದೆ.
ಬೆAಗಳೂರು ನಗರದ ೩೩ ಹಾಗೂ ೩೮ ವರ್ಷದ ಮಹಿಳೆಯರಿಗೆ ರೋಗಿ ನಂ.೪೫೪ರ ಸಂಪರ್ಕದಿAದ ಸೋಂಕು ತಗುಲಿದೆ. ಬೀದರ್‍ನಲ್ಲಿ ೨೩ ವರ್ಷದ ಹಾಗೂ ೩೦ ವರ್ಷದ ವ್ಯಕ್ತಿಗಳಿಗೆ ಬೀದರ್‌ನ ಕಂಟೈನ್ಮೆAಟ್ ಝೋನ್‌ನ ಸಂಪರ್ಕದಿAದ ಕೊರೊನಾ ಅಂಟಿಕೊAಡಿದೆ.ರೋಗಿ ನಂ.೫೦೭ರ ಸಂಪರ್ಕದಿAದ ದಕ್ಷಿಣ ಕನ್ನಡದಲ್ಲಿ ೨೬ ವರ್ಷದ ವ್ಯಕ್ತಿ ಮತ್ತು ೫೦ ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಚಿಕ್ಕಬಳ್ಳಾಪುರದ ೪೬ ವರ್ಷದ ವ್ಯಕ್ತಿಗೆ ರೋಗಿ ನಂ.೭೯೬ರ ಸಂಪರ್ಕದಿAದ ರೋಗ ತಗುಲಿದ್ದು,ಇಲ್ಲಿನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಸೋಂಕಿನಿAದ ೩೧ ಮಂದಿ ಮೃತಪಟ್ಟಿದ್ದು, ೪೨೬ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version