ಆರೋಗ್ಯ / HEALTH

ಕಾಂಗ್ರೆಸ್ ಇಂತಹ ವಿಷಯದಲ್ಲಿ ರಾಜಕೀಯ ಮಾಡಲ್ಲ..

Published

on

ಶಿರಾ(ತುಮಕೂರು): ಕೊರೊನಾ ಮಾರಿ ಅಬ್ಬರಕ್ಕೆ ರೈತರ ಬದುಕು ಕೊಚ್ಚಿ ಹೋಗಿದ್ದು,ಕೂಡಲೇ ಅನ್ನದಾತನ ಸಹಾಯಕ್ಕೆ ಧಾವಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದ್ದಾರೆ.
ಶಿರಾ ನಗರದಲ್ಲಿ ತಮ್ಮ ನಿವಾಸ ಪಡಿತರ ಚೀಟಿ ವಂಚಿತರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಚೈನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಅಬ್ಬರದಿಂದ ಅನ್ನದಾತ ಕಂಗಲಾಗಿದ್ದಾನೆ.ಬೆಳೆದ ಬೆಳೆಯನ್ನು ಸಾಗಾಟ ಮಾಡಲಾಗದೇ ಲಕ್ಷಾಂತರ ನಷ್ಟವನ್ನು ಎದುರಿಸಬೇಕಾಗಿದೆ.
ನಾಳೆ ಹೇಗೋ ಅನ್ನುವ ಆತಂಕ ರೈತರನ್ನು ಆವರಿಸಿದೆ.ಸರ್ಕಾರದ ಕಡೆಯಿಂದ ಸಿಗಬೇಕಾದ ಸ್ಪಂದನೆ ಸಿಕ್ಕಿಲ್ಲ.ಕೃಷಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಅನ್ನದಾತ ಆಕಾಶ ನೋಡುವಂತಾಗಿದೆ. ಈ ನಡುವೆ ಸಂಕಷ್ಟದಲ್ಲಿರುವ ರೈತರ ತನ್ನ ಬೆಳದ ಬೆಳೆಯನ್ನು ಸಾಗಾಟ ಮಾಡದೆ ಸಂಕಷ್ಟ ದಲ್ಲಿ ಇದು ಪರಿಹಾರವನ್ನು ನೀಡಬೇಕು. ತಾಲ್ಲೂಕಿನ ಹಲವಾರು ರೈತರು ಈರುಳ್ಳಿ ಬೆಳೆದು ಸಂಕಷದಲ್ಲಿ ಇದ್ದಾನೆ ಹಿಂದೆ ನಮ್ಮ ಅವದಿಯಲ್ಲಿ ಪರಿಹಾರವನ್ನು ನೀಡಿದ್ದೇವು.ಈಗ ರೈತರಲ್ಲಿ ಹೊಸ ಭರವಸೆ ಹುಟ್ಟು ಹಾಕಬೇಕು ಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಜೊತೆಗೆ ನಗರಕ್ಕೆ ವಾಪಸ್ ಬಂದವರು ಸದ್ಯ ಉದ್ಯೋಗ ಇಲ್ಲದಂತಾಗಿದೆ.ಸದ್ಯ ಕೊರೊನಾ ಪಿಡುಗು ನಾಡಿನ ಮುಂದಿರುವ ಅತಿ ದೊಡ್ಡ ಸವಾಲು.ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರವನ್ನು ಕಾಂಗ್ರೆಸ್ ನೀಡಲಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸೋಂಕು ನಿಯಂತ್ರಿಸುವುದು ಪ್ರಸ್ತುತ ಸರ್ಕಾರದ ಮುಂದಿರುವ ಅತಿ ದೊಡ್ಡ ಸವಾಲಾಗಿದ್ದು, ಸರ್ಕಾರಕ್ಕೆ ಜನರ ಆರೋಗ್ಯ ಕಾಪಾಡುವುದು ಮುಖ್ಯ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್ ಯಾವುದೇ ರಾಜಕೀಯ ಮಾಡದೇ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಇದಲ್ಲದೆ,ಸಾಂಕ್ರಾಮಿಕ ರೋಗ ನಿವಾರಣೆ ವಿಚಾರವನ್ನು ಜಾತಿ, ಧರ್ಮ ಮತ್ತು ಪಕ್ಷದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಕೂಲಿ ಮಾಡುವವರಿಂದ ಹಿಡಿದು ಕೂಲಿ ಕೊಡುವವರೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಎಲ್ಲರನ್ನು ರಕ್ಷಣೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದರು.
ಈ ದಿಸೆಯಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳುವುದೋ ಅದಕ್ಕೆಲ್ಲ ನಮ್ಮ ಸಹಕಾರ ಇರುತ್ತದೆ.ರಾಜ್ಯದಲ್ಲಿ ಹಲವಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಸರ್ಕಾರ ತಕ್ಷಣ ಬರಬೇಕಾಗಿದೆ. ಜನರು ತೊಂದರೆಗೆ ಸಿಲುಕಿದ್ದಾರೆ. ಇದಕ್ಕೆಲ್ಲಾ ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗಬೇಕು. ಮತ್ತು ರೈತರಿಗೆ ಅವಶ್ಯಕತೆ ಸಾಮಗ್ರಿಗಳನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version