ಆರೋಗ್ಯ / HEALTH

ಶ್ರಮಿಕ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಕ್ಷಣ ಗಣನೆ

Published

on

ಹುಬ್ಬಳ್ಳಿ : ಹುಬ್ಬಳ್ಳಿ-ಜೋಧಪುರ ಶ್ರಮಿಕ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಕ್ಷಣ ಗಣನೆ ಆರಂಭವಾಗಿದೆ.ಧಾರವಾಡ ಜಿಲ್ಲೆಯಿಂದ ೧,೪೫೨ ವಲಸೆ ಕಾರ್ಮಿಕರು ರಾಜಸ್ಥಾನಕ್ಕೆ ತೆರಳಲು ಸರ್ಕಾರ ರೈಲು ವ್ಯವಸ್ಥ ಕಲ್ಪಿಸಿದೆ.
ಅಂದ ಹಾಗೇ ವಲಸೆ ಕಾರ್ಮಿಕರು,ವಿದ್ಯಾರ್ಥಿಗಳನ್ನು ತವರೂರಿಗೆ ಕಳುಹಿಸುವುದಕ್ಕಾಗಿ ಹುಬ್ಬಳ್ಳಿ-ಜೋಧಪುರ-ಹುಬ್ಬಳ್ಳಿ ಮಧ್ಯೆ ೨ ಟ್ರಿಪ್ ಶ್ರಮಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಮಾಡಲಿದೆ.
ಇಂದು ಮತ್ತು ನಾಳೆ ಮಧ್ಯಾಹ್ನ ೧೨ ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ.ಇಲ್ಲಿಂದ ಹೊರಟ ರೈಲು ಮಾರನೇ ದಿನ ಮಧ್ಯಾಹ್ನ ೨.೩೦ಕ್ಕೆ ಜೋಧಪುರ ತಲುಪಲಿದೆ. ಮೇ ೧೪ ಮತ್ತು ೧೫ರಂದು ಸಂಜೆ ೬ ಗಂಟೆಗೆ ಜೋಧಪುರದಿಂದ ಹೊರಡುವ ಈ ರೈಲು, ಮಾರನೇ ದಿನ ರಾತ್ರಿ ೧೧.೫೫ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಮಿರಜ್, ಪುಣೆ, ವಾಸಾಯಿ ರೋಡ, ವಡೋದರಾ, ಪಾಲಂಪುರ ಮಾರ್ಗ ಮೂಲಕ ಸಂಚರಿಸಲಿದೆ. ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಲು ಜಿಲ್ಲಾಡಳಿತದ ಬಳಿ ಈಗಾಗಲೇ ೧,೪೫೨ ಜನ ಹೆಸರು ನೋಂದಾಯಿಸಿದ್ದಾರೆ.
ಇನ್ನು ಬೆಳಗ್ಗೆ ೬ ಗಂಟೆಯಿAದ ಎಲ್ಲ ಶ್ರಮಿಕ ವರ್ಗದವರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆದಿದೆ.ಇದಕ್ಕಾಗಿ ಪಾರ್ಕಿಂಗ್ ಪ್ರದೇಶದಲ್ಲಿ ೧೫ ಕೌಂಟರ್ ತೆರೆಯಲಾಗಿದೆ.ಆರೋಗ್ಯದ ವರದಿಯನ್ನು ನೋಂದಾಯಿತ ಗುರುತಿನ ಸಂಖ್ಯೆಯಡಿ ದಾಖಲಿಸಲಾಗುತ್ತದೆ.
ವಲಸೆ ಕಾರ್ಮಿಕ ರಾಜಸ್ಥಾನಕ್ಕೆ ತೆರಳಿದ ನಂತರ ಯಾರಿಗಾದ್ರು ಕೊರೊನಾ ಸೋಂಕು ಪಾಸಿಟಿವ್ ಕಂಡುಬAದಲ್ಲಿ ಈ ಗುರುತಿನ ಸಂಖ್ಯೆಯ ಸಹಾಯದಿಂದ ಆತನ ಹಿಸ್ಟರಿ ಕಂಡುಹಿಡಿಯಲು ಸರಳವಾಗಲಿದೆ.ಆರೋಗ್ಯ ತಪಾಸಣೆ ವೇಳೆ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬರುವ ಕಾರ್ಮಿಕರ ಪ್ರವಾಸ ರದ್ದು ಮಾಡಲಾಗುತ್ತದೆ.೨೪ ಬೋಗಿ ಹೊಂದಿರುವ ಶ್ರಮಿಕ ಎಕ್ಸ್ಪ್ರೆಸ್ ರೈಲು ಇದಾಗಿದ್ದು,೧೮ ಬೋಗಿಗಳಲ್ಲಿ ತಲಾ ೭೨ ಜನರು ಪ್ರಯಾಣಿಸಲಿದ್ದಾರೆ.೪ ಬೋಗಿಗಳಲ್ಲಿ ತಲಾ ೩೮ ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ.ಇನ್ನುಳಿದ ೨ ಬೋಗಿಗಳನ್ನು ಮೀಸಲು ಸ್ಥಿತಿಯಲ್ಲಿ ಇಡಲಾಗಿದೆ.
ಒಂದು ವೇಳೆ ಇನ್ನೂ ಹೆಚ್ಚಿನ ಪ್ರಯಾಣಿಕರು ಕೊನೇ ಕ್ಷಣದಲ್ಲಿ ಬಂದಲ್ಲಿ, ಮೀಸಲಿಟ್ಟಿರುವ ಈ ಬೋಗಿಗಳಲ್ಲಿ ಅವಕಾಶ ನೀಡಲಾಗುತ್ತದೆ. ಅದರ ಜೊತೆಗೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಊಟೋಪಚಾರದ ವ್ಯವಸ್ಥೆಯನ್ನಯ ಜಿಲ್ಲಾಡಳಿತ ಮಾಡಿಕೊಂಡಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version