ಆರೋಗ್ಯ / HEALTH

ಎಕ್ಸ್ ಪ್ರೆಸ್ ಟಿವಿ ವರದಿ ಫಲಶೃತಿ, ಬೆಳೆ ಹಾನಿಗೆ ಪರಿಹಾರ

Published

on

ಇಂಡಿ (ವಿಜಯಪುರ):ಸತತ ಬರಗಾಲಕ್ಕೆ ಸೋತು ಸುಣ್ಣವಾಗಿರುವ ರೈತನಿಗೆ ಆಕಾಲಿಕ ಆಲಿಕಲ್ಲು ಮಳೆ ಮತ್ತೊಂದು ದುರಂತ ತಂದಿದ್ದರ ಬಗ್ಗೆ ಜನತಾ ಎಕ್ಸ್ ಪ್ರೆಸ್ ಟಿವಿ `ಆಲಿಕಲ್ಲು ಮಳೆಗೆ ಅನ್ನದಾತ ಕಂಗಾಲು’ ಎಂಬ ಶಿರೋನಾಮೆಯಡಿ ೯/೫/೨೦೨೦ ರಂದು ವಿಸ್ತೃತ ವರದಿ ಪ್ರಸಾರ ಪ್ರಕಟಿಸಿತ್ತು.
ಅಲ್ಲದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದಾಗಿ ರೈತ ಶ್ರೀಶೈಲ ಪೂಜಾರಿ ತೋಟದ ಸಂಪೂರ್ಣ ವಾಸ್ತವಿಕ ಚಿತ್ರಣದೊಂದಿಗೆ ವರದಿ ಪ್ರಸಾರ ಮಾಡಿತ್ತು.
ಇನ್ನು ಈ ವರದಿ ಗಮನಿಸಿದ ಸ್ಥಳಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ತಾಲೂಕು ತೋಟಗಾರಿಕೆ ಇಲಾಖೆಯ ಅಧೀಕಾರಿಗಳು, ತಡವಲಗಾ ಗ್ರಾಮದ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನೆಲಸಮಗೊಂಡ ಪಪ್ಪಾಯಿ ನಿಂಬೆ ಬೆಳೆಗಳ ಪರಿಸ್ಥಿತಿ ಗಮನಿಸಿ ರೈತರಿಗೆ ಸಾಂತ್ವನ ಹೇಳಿದರು.
ಜೊತೆಗೆ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.ಅಧಿಕಾರಿಗಳು ಕೂಡಲೇ ಸರ್ವೆ ಕಾರ್ಯ ನಡೆಸಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.ರೈತರಿಗೆ ಪರಿಹಾರ ಕೊಡಿಸುವಲ್ಲಿ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ,ತೋಟಗಾರಿಕೆ ಹಿರಿಯ ಸಹಾಯ ಅಧಿಕಾರಿ ಆರ್.ಟಿ.ಹಿರೇಮಠ,ಮಾಜಿ ಗ್ರಾ.ಪ.ಅಧ್ಯಕ್ಷ ತಮ್ಮಣ್ಣ ಪೂಜಾರಿ ಹಾಗೂ ಹಾನಿಗೊಳಾದ ರೈತರು ಹಾಜರಿದ್ದರು.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ (ವಿಜಯಪುರ)

Click to comment

Trending

Exit mobile version