ಆರೋಗ್ಯ / HEALTH

ಕೊರೊನಾ ಮುಕ್ತವಾಗುತ್ತ ದಾಪುಗಾಲಿಟ್ಟ ಮಳವಳ್ಳಿ

Published

on

ಮಳವಳ್ಳಿ(ಮಂಡ್ಯ):ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿ ಪಟ್ಟಣ ಕೊರೊನಾ ಹಾಟ್ ಸ್ಪಾಟ್ ಆಗಿತ್ತು.ಆದರೆ ಜಿಲ್ಲಾಡಳಿತ ಮಾತ್ರ ತನ್ನ ವಾರಿಯರ್ಸ್ಗಳ ಮೂಲಕ ಕೊರೊನಾ ವಿರುದ್ದ ಸೆಣಸಾಟ ನಡೆಸಿ ಕಡೆಗೂ ಮಳವಳ್ಳಿ ಪಟ್ಟಣವನ್ನು ಕೊರೊನಾ ಮುಕ್ತ ಮಾಡಲು ಹೊರಟಿದೆ.
ಅಂದ ಹಾಗೇ ಹಿಂದೆ ಮಳವಳ್ಳಿ ಪಟ್ಟಣದಲ್ಲಿ ಬರೋಬ್ಬರಿ ೧೯ ಸೋಂಕಿತ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು.ಅಲ್ಲದೆ, ಏಪ್ರಿಲ್ ೭ ರಂದು ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ನೋಡ ನೋಡ ನೋಡುತ್ತಿದ್ದಂತೆ ೫,೧೦,೧೫,ರಿಂದ ೨೦ವರೆಗೆ ಕೂಡ ಬಂದು ತಲುಪಿತು.
ದೆಹಲಿಯ ತಬ್ಲಿಘಿ ಜಮಾತ್ ಗೆ ಹೋಗಿ ಬಂದಿದ್ದ ಧರ್ಮ ಗುರುಗಳ ಸಂಪರ್ಕದಿAದ ಮಳವಳ್ಳಿಗೆ ಕೊರೊನಾ ಸೊಂಕು ಹರಡಿತ್ತು. ಬರೋಬ್ಬರಿ ೧೯ ಜನರಿಗೆ ಹರಡಿದ ಈ ಸೋಂಕಿನಿAದ ಜಿಲ್ಲಾಡಳಿತ ಕಂಗಾಲಾಗಿತ್ತು.ಏಪ್ರಿಲ್ ೭ ರವರೆಗೂ ಒಂದು ಪ್ರಕರಣಗಳಿಲ್ಲದೆ ಬೀಗುತ್ತಿದ್ದ ಜಿಲ್ಲಾಡಳಿಕ್ಕೆ ತಬ್ಲಿಘಿ ಸೋಂಕು ಬರಸಿಡಿಲಿನಂತೆ ಬಂದೆರಗಿತು.
ಇಷ್ಟಾದ್ರು ಮಾತ್ರ ಜಿಲ್ಲಾಡಳಿತ ಮಾತ್ರ ಎದೆಗುಂದದೆ ತನ್ನ ವಾರಿಯರ್ಸ್ಗಳ ಮೂಲಕ ಕೊರೊನಾ ವಿರುದ್ದ ಸೆಣಸಾಟ ನಡೆಸಿ ಕಡೆಗೂ ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ವಿರುದ್ದ ಜಯ ಸಾಧಿಸುವ ಹಂತಕ್ಕೆ ಬಂದು ತಲುಪಿದೆ.
ಬರೋಬ್ಬರಿ ಪ್ರಕರಣಗಳಿದ್ದ ಮಳವಳ್ಳಿಯಲ್ಲಿ ಇದೀಗ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ೧೭ ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಅಲ್ದೆ ಉಳಿದು ಇಬ್ಬರು ಸಹ ಈ ವಾರದಲ್ಲಿ ಗುಣಮುಖರಾಗಲಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.
ಈ ಮೂಲಕ ಮಳವಳ್ಳಿ ಪಟ್ಟಣ ಕೊರೊನಾ ಮುಕ್ತ ವಾಗುತ್ತಾ ದಾಪುಗಾಲಿಟ್ಟಿದೆ. ಮೊದಲ ಪ್ರಕರಣ ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಕೈಗೊಂಡ ಕಠಿಣ ಕ್ರಮಗಳೇ ಸಾಧನೆಗೆ ಕಾರಣವಾಗಿದೆ. ಮೊದಲ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಆ ಪ್ರದೇಶವನ್ನು ಕಂಟೋನ್ಮೆAಟ್ ವಲಯವಾಗಿ ಘೋಷಣಡ ಮಾಡಿ ಕಡೆಗೆ ಆ ಪ್ರದೇಶವನ್ನು ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಂಡಿತ್ತು
ಜೊತೆಗೆ ಸೋಂಕಿತರ ಸಂಪರ್ಕದಲ್ಲಿದ್ದರ ಪ್ರೈಮರಿ & ಸೆಂಕಡರಿ ಕಾಂಟ್ಯಾಕ್ಟ್ಗಳನ್ನು ಗುರ್ತಿಸಿ ಎಲ್ಲರನ್ನು ಪರೀಕ್ಷೆ ಮಾಡಿ ಹೋಂ ಕ್ವಾರೆಂಟೈನ್ ಜೊತೆ ಪಟ್ಟಣದ ವಸತಿ ಶಾಲೆ ಸೇರಿದಂತೆ ಕ್ವಾರೆಂಟೈನ್‌ಗೆ ಒಳಪಡಿಸುವ ಮೂಲಕ ಸೋಂಕು ಬೇರೆಡೆ ಹರಡದಂತೆ ಕ್ರಮ ಕೈಗೊಂಡಿತ್ತು.ಸೋAಕಿತರಾದವರಿಗೆಲ್ಲ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯ ಮೂಲಕ ಬೇಗನೆ ಗುಣಪಡಿಸಿ ಕೊರೊನಾ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಿದೆ.
ಈ ಮೂಲಕ ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ಸೋಂಕಿಗೆ ಜಿಲ್ಲಾಡಳಿತ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದು,ಈ ವಾರದಲ್ಲಿ ಚಿಕಿತ್ಸೆ ಪಡೆಯತ್ತಿರುವ ಆ ಇಬ್ಬರು ಗುಣಮುಖರನ್ನಾಗಿಸಿ ಕೊರೊನಾ ಮುಕ್ತ ಪಟ್ಟಣ ವನ್ನಾಗಿಸುವ ಪ್ರಯತ್ನದಲ್ಲಿದೆ.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version