ಆರೋಗ್ಯ / HEALTH

ಗ್ರಾಮ ಪಂಚಾಯಿತಿ ಹಾಲಿ ಸದಸ್ಯರನ್ನೇ ಮುಂದುವರೆಸಲು ಆಗ್ರಹ

Published

on

ಶಿರಾ(ತುಮಕೂರು):ಗ್ರಾಮ ಪಂಚಾಯಿತಿ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು,ಮುಂದಿನ ಚುನಾವಣೆ ನಡೆಯುವವರೆಗೂ ಹಾಲಿ ಸದಸ್ಯರ ಅಧಿಕಾರಾವಧಿಯನ್ನು ಮುಂದುವರೆಸುವAತೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಸುಮಾರು ೨೬೦೦ ಗ್ರಾಮ ಪಂಚಾಯಿತಿಗಳಿಗೆ ೬೨ ಸಾವಿರಕ್ಕೂ ಹೆಚ್ಚು ಸದಸ್ಯರು ಪಕ್ಷಾತೀತ, ಜಾತ್ಯಾತೀತವಾಗಿ ಆಯ್ಕೆಯಾಗಿದ್ದಾರೆ ಈಗ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು,ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದಕ್ಕೆ ಹಾಕಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿದೆ.
ಆಡಳಿತಾಧಿಕಾರಿಗಳಿAದ ನಿರಂಕುಶ ಪ್ರಭುತ್ವ ನೀಡಿದಂತಾಗುವುದು.ಇದರಿAದ ಜನತಂತ್ರ ವ್ಯವಸ್ಥೆಗೆ ಅರ್ಥವಿಲ್ಲದಂತಾಗುವುದು.ಮತ್ತೊAದು ಕಡೆ ನಾಮಿನಿ ಸದಸ್ಯರನ್ನು ನೇಮಕ ಮಾಡಿ ಪಂಚಾಯಿತಿಗಳ ಮೇಲೆ ಹಿಡಿತ ಸಾಧಿಸಲು ಸರ್ಕಾರ ಮುಂದಾಗಿರುವುದು ಸಹಸಮಂಜಸವಲ್ಲ.
ಜೊತೆಗೆ ನಾಮಿನಿ ಸದಸ್ಯರನ್ನು ಆಯ್ಕೆ ಮಾಡುವ ಸಮಯದಲ್ಲಿ ಅವರ ಪಕ್ಷದವರನ್ನೇ ನೇಮಕ ಮಾಡುವುದು ಸಹಜ.ಹಾಗಾಗಿ ಪ್ರಜಾ ಪ್ರಭುತ್ವ ವ್ಯವಸ್ಥೆ ಉಳಿಸಲು ಈಗಾಗಲೇ ಶಾಸನ ಬದ್ದವಾಗಿ ಆಯ್ಕೆಯಾಗಿರುವ ಸದಸ್ಯರನ್ನು ಮುಂದಿನ ಚುನಾವಣೆಯವರೆಗೂ ಮುಂದುವರಿಸಬೇಕು ಎಂದರು.
ಎಪಿಎAಸಿ ಕಾಯಿದೆಗೆ ತಿದ್ದಪಡಿ ಮಾಡಿರುವ ಸರ್ಕಾರದ ನಿರ್ಧಾರ ಸಮಂಜಸವಲ್ಲ.ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ಮನಸ್ಸಿಗೆ ಬಂದAತೆ ಕಾಯಿದೆಗಳಿಗೆ ತಿದ್ದುಪಡಿ ಮಾಡುತ್ತಿದೆ. ಸರ್ಕಾರದ ನಿರ್ಧಾರದಿಂದ ಎಪಿಎಂಸಿಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಎಪಿಎಂಸಿ ವ್ಯಾಪ್ತಿಗೆ ಖಾಸಗಿ ವರ್ತಕರು ಬರದೆ ರೈತರಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ.
ವಿಧಾನಸಭೆಯಲ್ಲಿ ಕಾಯಿದೆಯನ್ನು ಮಂಡಿಸಿ ಪೂರ್ವಾಪರಗಳನ್ನು ಚರ್ಚೆ ಮಾಡಿದ ನಂತರ ಕಾಯಿದೆಗೆ ಮಾರ್ಪಾಡುವುದು ಸೂಕ್ತವಾಗಿದೆ. ಅದೇ ರೀತಿ ಕಾರ್ಮಿಕ ಕಾಯಿದೆಗೆ ಸಹ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾರ್ಮಿಕ ವಿರೋಧಿ ಕಾಯಿದೆಯನ್ನು ಜಾರಿಗೆ ತರಲಾಗಿದೆ.
ಇದರಿಂದ ಬಹುತೇಕ ಮಂದಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ವಿಧಾನ ಸಭೆಯಲ್ಲಿ ಚರ್ಚೆಯಾಗದೆ ಯಾವುದೇ ಕಾನೂನು ಜಾರಿಗೊಳಿಸಬಾರದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜು, ಮುಖಂಡರಾದ ಎಸ್.ಎನ್.ಕೃಷ್ಣಯ್ಯ,ವಿನಯ್ ತ್ಯಾಗರಾಜು ಮತ್ತಿತರ ಹಾಜರಿದ್ದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version