ಆರೋಗ್ಯ / HEALTH

ತಿಪಟೂರಿನಲ್ಲಿ ಖಾಸಗಿ ಕಂಪನಿಯಿ0ದ ಕೆರೆ ನೀರಿಗೆ ಕನ್ನ

Published

on

ತಿಪಟೂರು(ತುಮಕೂರು): ತಿಪಟೂರು ನಗರಕ್ಕೆ ನೀರೊದಗಿಸುವ ಈಚನೂರು ಕೆರೆಯ ನೀರನ್ನು ಅಕ್ರಮವಾಗಿ ರಸ್ತೆ ಕಾಮಗಾರಿಗೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಸದ್ಯ ಈ ಬಗ್ಗೆ ಧ್ವನಿ ಎತ್ತಿರುವ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು,ತಕ್ಷಣವೇ ಕುಡಿಯುವ ನೀರಿಗೆ ಕನ್ನ ಹಾಕುತ್ತಿರುವುದು
ನಿಲ್ಲಬೇಕು ಮತ್ತು ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಬಿಎಂಆರ್ ಕಂಪನಿಯ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ತಾಲೂಕಿನ ಈಚನೂರು ಕೆರೆಯಿಂದ ತಿಪಟೂರು ನಗರಕ್ಕೆ ಕಳೆದ ೨೦ ವರ್ಷಗಳಿಂದ ಕುಡಿಯುವ ನೀರೊದಗಿಸುವ ಏಕೈಕ ಮೂಲವಾಗಿದೆ. ಆದರೆ ಬಿ.ಎಂ.ಆರ್ ಕಂಪನಿಯು ಇದರ ಮೇಲೆ ಕಣ್ಣು ಹಾಕಿದ್ದು ತನ್ನ ರಸ್ತೆ ಕಾಮಗಾರಿಗೆ ಬೇಕಾದ ನೀರನ್ನು ಈಚನೂರು ಕೆರೆಯಿಂದ ನೀರನ್ನು ಪೈಪ್ ಮೂಲಕ ಟ್ಯಾಂಕರ್ ಲಾರಿಗಳಿಗೆ ತುಂಬಿಸಿಕೊ0ಡು ಹೋಗುತ್ತಿದ್ದಾರೆ.
ಇನ್ನು ಈ ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಕೆಲಸಕ್ಕಾಗಿ ಹೊಲಗದ್ದೆಗಳಿಗೆ ನೀರನ್ನು ಬಳಸದೇ ಕುಡಿಯುವ ನೀರಿಗೋಸ್ಕರವೇ ಇರುವ ನೀರನ್ನು ರಸ್ತೆ ರಸ್ತೆ ಕಾಮಗಾರಿಗೆ ಬಳಸಿಕೊಂಡರೆ ನಗರದ ಜನತೆಯು ಕುಡಿಯುವ ನೀರಲ್ಲದೇ ಪರಿತಪಿಸುವಂತಾಗುತ್ತದೆ
ಹೀಗಾಗಿ ಕೂಡಲೇ ನೀರನ್ನು ಬಳಸಿದವರಿಗೆ ಸೂಕ್ತ ಕ್ರಮಜರುಗಿಸಿ ಮುಂದೆ ನೀರನ್ನು ತೆಗೆದುಕೊಂಡು ಹೋಗಲು ಬರುವವರಿಗೆ ಚುರುಕು ಮುಟ್ಟಿಸುವ ಪ್ರಯತ್ನವಾಗಬೇಕೆಂದು ಎಚ್ಚರಿಸಿದ ಕಾಂತರಾಜು ನೀರು ಒದೇ ರೀತಿ ದುರ್ಬಳಕೆಯಾದರೆ ಹೋರಾಟ ಅನಿವಾರ್ಯವೆಂದು ತಿಳಿಸಿದರು.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version