ಆರೋಗ್ಯ / HEALTH

ರಾಜ್ಯಪಾಲರ ಮೊರೆ ಹೋದ ಕಾರ್ಮಿಕ ಮುಖಂಡರು..

Published

on

ಸಿಂಧನೂರು(ರಾಯಚೂರು):ಕೇ0ದ್ರ ಹಾಗೂ ರಾಜ್ಯ ಸರ್ಕಾರವು ಬಂಡವಾಳ ಹೂಡಿಕೆ ಆಕರ್ಷಣೆ ನೆಪದಲ್ಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಮುಂದಾಗಿದೆ.ಕೂಡಲೇ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವ0ತೆ ಕಾರ್ಮಿಕ ಮುಖಂಡ ಶೇಕ್ಷಾಖಾದ್ರಿ ಆಗ್ರಹಿಸಿದ್ದಾರೆ.
ನಗರದ ಎಪಿಎಂಸಿ ಕಾರ್ಮಿಕ ನೀರಿಕ್ಷಕರ ಕಾರ್ಯಾಲಯದ ಎದುರು ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಕೇಂದ್ರ ಸರಕಾರದ ಕಾರ್ಮಿಕ ಕಾನೂಗಳ ಅಮಾನತ್ತು ತಿದ್ದುಪಡಿ ವಿರೋಧಿಸಿ ಕಾರ್ಮಿಕ ನೀರಿಕ್ಷಕರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಕೆಲಸ ಅವಧಿಯಲ್ಲಿ ೮ ರಿಂದ ೧೨ ಗಂಟೆಗೆ ಹೆಚ್ಚಿಸುವ ಖಾಯಂ ಕೆಲಸಗಳನ್ನು ನಾಶಮಾಡಲಾಗಿದೆ ಎಂದರು.
ಅಲ್ಲದೆ, ಗುತ್ತಿಗೇಕರಣ ಸೇರಿದಂತೆ ಇನ್ನೂ ಅನೇಕ ರೀತಿಯ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಯತ್ನಿಸಿದ್ದು,ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಕಾರ್ಮಿಕ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Click to comment

Trending

Exit mobile version