ಆರೋಗ್ಯ / HEALTH

ಇದು ರಸ್ತೆನಾ..?ಚರಂಡಿನಾ..? ಆ ಗ್ರಾಮ ಪಂಚಾಯತಿಯವರೇ ಹೇಳಬೇಕು..

Published

on

ಸಿರುಗುಪ್ಪ (ಬಳ್ಳಾರಿ): ಇದು ಆ ಗ್ರಾಮದ ಮಧ್ಯೆ ಇರುವ ಮುಖ್ಯ ರಸ್ತೆ.. ಆದರೆ ಮಳೆ ನೀರು, ಮನೆ ಬಳಕೆಯ ನೀರು, ಹೊಲಗದ್ದೆಗಳಿಂದ ಬರುವ ನೀರು..ಇದೇ ರಸ್ತೆಯ ಮೇಲೆ ಹರಿಯುತ್ತದೆ.ಜೊತೆಗೆ ದುರ್ವಾಸನೆ ಬೇರೆ ಮೂಗಿಗೆ ರಾಚುತ್ತದೆ..ಹಾಗಾಗಿ ಇದು ಇದು ರಸ್ತೆನಾ..?ಚರಂಡಿನಾ..? ಆ ಗ್ರಾಮ ಪಂಚಾಯತಿಯವರೇ ಹೇಳಬೇಕಾಗಿದೆ.
ಅಂದ ಹಾಗೇ ಇದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಂಡಿಗನೂರು ಎಂಬಗ್ರಾಮದಲ್ಲಿರುವ ಮುಖ್ಯ ರಸ್ತೆಯ ಕಥೆ-ವ್ಯಥೆ.
ಸದ್ಯ ಮುದ್ದಟನೂರು ಗ್ರಾಮ ಪಂಚಾಯತ್ ಸ್ವಚ್ಛ ಭಾರತ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎನ್ನುವುದಕ್ಕೆ ಈ ರಸ್ತೆಯೊಂದೇ ದೊಡ್ಡ ಉದಾಹರಣೆಯಾಗಿದೆ.
ಇನ್ನು ಈ ರಸ್ತೆಯಲ್ಲಿ ಎಲ್ಲಾ ಕೊಳಚೆ ನೀರು ಹರಿಯುವ ಪರಿಣಾಮ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹಾಗಾಗಿ ಗ್ರಾಮದಲ್ಲಿ ರೋಗಗಳ ಬಾಧೆಯಿಂದ ಜನ ಬಳಲುತ್ತಿದ್ದಾರೆ. ಅಲ್ಲದೆ, ಈ ಗ್ರಾಮದಲ್ಲಿ ಸುಮಾರು ೨೦೦ ಮನೆಗಳಿದ್ದು,ಇದೀಗ ಇಡೀ ಗ್ರಾಮವನ್ನೇ ಗ್ರಾಮಪಂಚಾಯಿತಿ ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತಿದೆ.
ವಿಪರ್ಯಾಸವೆಂದರೆ ಊರಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದು,ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಿಸಿರುವುದರ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ.ಹಾಗೇ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಲಿ, ಸದಸ್ಯರಾಗಲೀ ಇದರ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಳ್ಳಲು ಮುಂದಾಗದಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ
ಇದಲ್ಲದೆ, ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಗ್ರಾಮಗಳ ಸ್ವಚ್ಚತಾ ಕಾರ್ಯಕ್ಕೆ ಅನುದಾನವನ್ನು ನೀಡುತ್ತಿದ್ದರೂ ಅದರ ಸದ್ಬಳಕೆ ಮಾತ್ರ ಈ ಗ್ರಾಮದಲ್ಲಿ ಸರಿಯಾಗಿ ಆಗುತ್ತಿಲ್ಲ.
ಜೊತೆಗೆ ಈ ಊರಲ್ಲಿ ಜನರಿಗೆ ಸರಿಯಾದ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ,ಒಂದೆರಡು ಕೈ ಬೋರುಗಳಿದ್ದು,ಫ್ಲೋರೈಡ್ ಯುಕ್ತ ನೀರು ಬರುತ್ತಿದೆ.ಈ ನೀರನ್ನೇ ಕುಡಿಯುತ್ತಿರುವ ಜನ ಮೂಳೆ ಸವೆತ, ಎದೆಯುರಿಯಂತಹ ರೋಗಗಳಿಂದ ಬಳಲುತ್ತಿದ್ದಾರೆ.ಈಗ ಮುಖ್ಯರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ಇನ್ನಷ್ಟು ರೋಗಗಳು ಜನರನ್ನು ಆವರಿಸಿಕೊಳ್ಳುತ್ತಿವೆ.
ಇದಲ್ಲದೆ, ಓಡಾಡಲು ಜನರಿಗೆ ಬಸ್ಸಿನ ವ್ಯವಸ್ಥೆಯೇ ಇಲ್ಲ. ಸುಮಾರು ನಾಲ್ಕೈದು ಕಿ.ಮೀ ಗಳ ದೂರ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದ್ದು, ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಇದರಿಂದ ಎಷ್ಟೋ ಮಕ್ಕಳು ನಡೆದುಕೊಂಡು ಹೋಗಲಾಗದೇ ಶಾಲೆ ಯನ್ನೇ ತ್ಯಜಿಸಿದ್ದಾರೆ. ಇದರ ಬಗ್ಗೆಯೂ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯತನದಿಂದ ಸಬೂಬು ನೀಡುತ್ತಿದ್ದಾರೆ.
ಒಟ್ಟಾರೆ ಇದು ಹೀಗೆ ಮುಂದುವರಿದರೆ ಗ್ರಾಮದಲ್ಲಿ ಮಲೇರಿಯಾ, ಕಾಲರಾ ರೋಗಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತವೆಂಬುದರಲ್ಲಿ ಎರಡು ಮಾತಿಲ್ಲ. ಇನ್ನಾದರೂ ಸರ್ಕಾರ ಈ ಗ್ರಾಮದÀ ಕಡೆ ಗಮನ ಹರಿಸಬೇಕಾಗಿದೆ.

ಯು.ವೆಂಕಟೇಶ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Click to comment

Trending

Exit mobile version