ಆರೋಗ್ಯ / HEALTH

ದಿನಬಳಕೆ ವಸ್ತುಗಳ ಕಿಟ್ ಹಂಚಿಕೆ ಹಗರಣ ಬಯಲು..ಬಿಜೆಪಿ ಶಾಸಕನಿಂದ ಭಾರೀ ಗೋಲ್‌ಮಾಲ್..

Published

on

ಹುಬ್ಬಳ್ಳಿ:ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ನೀಡುವ ದಿನಬಳಕೆ ವಸ್ತುಗಳ ಕಿಟ್ ಹಂಚಿಕೆ ಹಗರಣವೊಂದು ಬೆಳಕಿಗೆ ಬಂದಿದ್ದು,ಬಿಜೆಪಿ ಶಾಸಕ ಕಾರ್ಮಿಕರಿಗೆ ನೀಡುವ ಕಿಟ್‌ನ್ನು ದುರ್ಬಳಕೆ ಮಾಡಿಕೊಂಡಿದ್ದಾರೆAಬ ಆರೋಪ ಕೇಳಿ ಬಂದಿದೆ.
ಅ0ದ ಹಾಗೇ ಕಲಘಟಗಿ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ಮೇಲೆಯೇ ಈ ಆರೋಪ ಕೇಳಿ ಬಂದಿದ್ದು,ಸದ್ಯ ಅವರ ಕ್ಷೇತ್ರದಲ್ಲೇ ಕಿಟ್ ಹಂಚಿಕೆ ಹಗರಣ ಬಯಲಾಗಿದೆ.
ಸದ್ಯ ಈ ಸಂಬ0ಧ ಕಲಘಟಗಿ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ವಿರುದ್ದ ಕಾಂಗ್ರೆಸ್ ಮುಖಂಡರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇನ್ನು ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ಅವರ ಕಚೇರಿಯಲ್ಲಿ ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೀಡುವ ದಿನಬಳಕೆ ವಸ್ತುಗಳ ಕಿಟ್ ಇಡಲಾಗಿದೆ.ಆದರೆ ಈ ಕಿಟ್‌ಗಳು ಕಾರ್ಮಿಕ ಇಲಾಖೆಗೆ ಸೇರಿದ್ದು,ಇದು ಶಾಸಕರ ಕಛೇರಿ ಸೇರಿದ್ದೇಗೆ?ಅಲ್ಲೆಕೇ ಇವುಗಳನ್ನು ಇಡಲಾಗಿದೆ ಎಂಬುದು ಇದುವರೆಗೂ ನಿಗೂಢವಾಗಿದ್ದು,ಇದರಿಂದ ಕಿಟ್‌ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎನ್ನಲಾಗುತ್ತಿದೆ.
ಇದಲ್ಲದೆ, ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ನೀಡಿದ್ದ ಕಿಟ್‌ಗಳನ್ನ ದುರ್ಬಳಕೆ ಮಾಡಿಕೊಂಡ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ಕಾರ್ಮಿಕರಿಗೆ ಬಿಟ್ಟು, ಬಿಜೆಪಿ ಕಾರ್ಯಕರ್ತರಿಗೆ ಕಿಟ್ ಕೊಡುತ್ತಿದ್ದಾರೆ.ಈ ಮೂಲಕ ಸಾವಿರಾರು ಕಿಟ್‌ಗಳನ್ನ ದುರುಪಯೋಗ ಮಾಡಿಕೊಂಡಿದ್ದಾರೋದು ಬಯಲಾಗಿದೆ. ಈ ಮೂಲಕ ಬಿಜೆಪಿ ಶಾಸಕನಿಂದ ಭಾರೀ ಗೋಲ್‌ಮಾಲ್ ಆಗಿರುವುದು ಸಾಭೀತಾದಂತಾಗಿದ್ದು,ಕಾAಗ್ರೆಸ್ ಇದನ್ನು ಹೊಸ ಅಸ್ತçವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version