ಆರೋಗ್ಯ / HEALTH

ಹೊಂಗಸ0ದ್ರ ಬಿಹಾರಿ ಬಾಬು ಗ್ಯಾಂಗ್‌ಗೆ ಕ್ವಾರೆಂಟೈನ್‌ನಿ0ದ ಬಿಡುಗಡೆ ಭಾಗ್ಯ

Published

on

ಬೆಂಗಳೂರು: ಹೊಂಗಸ0ದ್ರ ಬಿಹಾರಿ ಬಾಬು ಗ್ಯಾಂಗ್‌ಗೆ ಕ್ವಾರೆಂಟೈನ್‌ನಿ0ದ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್ ಹೆಚ್ಚಳದಲ್ಲಿ ಬಿಹಾರಿ ಬಾಬು ಸಾಕಷ್ಟು ಪಾತ್ರವಹಿಸಿದ್ದ. ಸದ್ಯ ಈತ ವಾಸ ಮಾಡಿದ್ದ ಏರಿಯಾವನ್ನೇ ಲಾಕ್‌ಡೌನ್ ಮಾಡಲಾಗಿತ್ತು.ಅಲ್ಲದೆ, ಹೊಂಗಸ0ದ್ರ ಅಂದ್ರೆ ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಜನ್ರನ್ನ ಬೆಚ್ಚಿಬೀಳಿಸಿದ್ದ ಕ್ಷೇತ್ರವಾಗಿತ್ತು.

ಆದ್ರೆ ಅಲ್ಲಿ ಇದೀಗ ೪೯ ಜನ ಕ್ವಾರೆಂಟೈನ್ ನಲ್ಲಿದ್ದವರನ್ನು ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಅಲ್ಲಿನ ಜನ ತುಸು ಉಸಿರಾಡುವ ಮಟ್ಟಕ್ಕೆ ಹೊಂಗಸ0ದ್ರದ ಜನ ತಲುಪಿದಿದ್ದಾರೆ.

ಕಳೆದ ತಿಂಗಳು ಹೊಂಗಸ0ದ್ರದ ನಿವಾಸಿ ಬಿಹಾರ ಮೂಲದ ಬಾಬುಗೆ ಸೋಂಕು ಕಾಣಿಸಿಕೊಂಡು ಬೆನ್ನಲ್ಲೇ ಆತನ ಸಂಪರ್ಕದಲ್ಲಿದ್ದ ೩೦ ಮಂದಿಗೆ ಪಾಸಿಟೀವ್ ಖಚಿತವಾಗಿತ್ತು.ಅಲ್ಲದೆ, ಸಂಪರ್ಕದಲ್ಲಿದ್ದ ೧೩೫ ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿತ್ತು.
ಇದೀಗ ಸಿಂಗಸ0ದ್ರದ ಮಣಿಪಾಲ್ ಕೌಂಟಿ ಬಳಿ ಇದ್ದಂತಹ ಹೊಂಗಸ0ದ್ರದ ನಿವಾಸಿಗಳು ಕ್ವಾರೆಂಟೈನ್ ನಿಂದ ಇಂದು ಸ್ವತಂತ್ರ ಪಡೆದು ಫುಲ್ ಖುಷಿಯಾಗಿ ಮರಳಿದ್ದಾರೆ. ಬಿಹಾರ ಮೂಲದ ಜನರಿಂದ ಇಡೀ ಪ್ರದೇಶ ಎಲ್ಲಿ ಕೊರೋನಾ ಹರಡುವಿಕೆಗೆ ತೆರೆದುಕೊಳ್ಳುತ್ತದೆಯೋ ಎಂಬ ಭೀತಿ ತುಂಬಿತ್ತು.ಇದೀಗ ಅವರೆಲ್ಲಾ ವೈದ್ಯಕೀಯ ತಪಾಸಣೆ ಮುಗಿಸಿ ಮನೆಗೆ ಮರಳಿದ್ದಾರೆ.
ಅಂದ ಹಾಗೇ ಇಂದು ಶಾಸಕ ಸತೀಶ್ ರೆಡ್ಡಿ ಉಪಸ್ಥಿತಿಯಲ್ಲಿ ಅಷ್ಟು ಮಂದಿಯ ಬಿಡುಗಡೆ ಮಾಡಲಾಗಿದೆ.ಜೊತೆಗೆ ಶಾಸಕರ ಹಾಗೂ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣಯ್ಯ ನೇತೃತ್ವದಲ್ಲಿ ಕ್ವಾರೆಂಟೈನ್‌ಗೆ ಒಳಪಟ್ಟಿದ್ದ ೪೯ ಜನರಿಗೆ ದೇಹದ ಉಷ್ಣಾಂಶ ಪರೀಕ್ಷೆ ಮಾಡಿ ಬಳಿಕ ಆಹಾರಧಾನ್ಯ, ಸ್ಯಾನಿಟೈಸರ್, ಮಾಸ್ಕ್ ನೀಡಿ ಬಿಳ್ಕೊಡುಗೆ ಕೊಡಲಾಗಿದೆ.

ಸಿ.ಕಾರ್ತಿಕ್‌ಗೌಡ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version