ಆರೋಗ್ಯ / HEALTH

ರೈತ ಮಹಿಳೆಗೆ ರ‍್ಯಾಸ್ಕಲ್ ಎಂದ ಕಾನೂನು ಸಚಿವ ಮಾಧುಸ್ವಾಮಿ..

Published

on

* ಏಕವಚನದಲ್ಲೇ ಬೈದು ದರ್ಪ,ದುರಂಹಕಾರ ಪ್ರದರ್ಶಿಸಿದ ಸಣ್ಣ ನೀರಾವರಿ ಸಚಿವ..
* ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷೆಗೆ ಎಳೆದುಕೊಂಡು ಹೋದ ಇನ್ಸ್ ಪೆಕ್ಟರ್..
* ನಾನು ಬಾರಿ ಕೆಟ್ಟ ಮನುಷ್ಯ ಇದ್ದೀನಿ ಎಂದ ಸಿಎಂ ಆಪ್ತ ಸಚಿವ..

ಕೋಲಾರ : ರೈತ ಸಂಘಟನೆ ಮಹಿಳಾ ಕಾರ್ಯಕರ್ತಯೊಬ್ಬರಿಗೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ರ‍್ಯಾಸ್ಕಲ್ ಎಂದು ಬೈದಿರುವ ಘಟನೆ ಬೆಳಕಿಗೆ ಬಂದಿದೆ.
ಅಲ್ಲದೆ,ಏಕವಚನದಲ್ಲೇ ದರ್ಪದಿಂದ ಮಾತನಾಡಿದ ಸಚಿವ ಮಾಧುಸ್ವಾಮಿ ಪೊಲೀಸರ ಮೂಲಕ ಆ ರೈತ ಮಹಿಳೆಯನ್ನು ಅಲ್ಲಿಂದ ದೂರ ದಬ್ಬಿಸಿದ್ದಾರೆ.
ಅಂದ ಹಾಗೇ ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಈ ಘಟನೆ ನಡೆದಿದ್ದು,ಸಚಿವರ ಈ ವರ್ತನೆಗೆ ರೈತರು ಕೆಂಡಾಮAಡಲರಾಗಿದ್ದಾರೆ.
ಸಚಿವ ಮಾಧುಸ್ವಾಮಿ ಕೆಸಿವ್ಯಾಲಿ ಹರಿಯುತ್ತಿರುವ ಕೆರೆಗಳ ವೀಕ್ಷಣೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಮತ್ತವರ ರೈತ ಮುಖಂಡರು ಕೆರೆಕಟ್ಟೆ ಹೊಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಮುಂದಾದರು.
ಈ ವೇಳೆ ಕೆರೆ ಕಟ್ಟೆ ಒತ್ತುವರಿ ಸಂಬAಧ ಸಚಿವ ಮಾಧುಸ್ವಾಮಿಗೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ,ಮಾಹಿತಿ ನೀಡುತ್ತಿದ್ದರು.ಆದರೆ ಇದಕ್ಕೆ ಸಿಡಿಮಿಡಿಗೊಂಡ ಕಾನೂನು ಸಚಿವ ಮಾಧುಸ್ವಾಮಿ, ನಾನು ಬಾರಿ ಕೆಟ್ಟ ಮನುಷ್ಯ ಇದ್ದೀನಿ ಬಾಯಿ ಮುಚ್ಚು ರ‍್ಯಾಸ್ಕಲ್ ಎಂದು ರೈತ ಮಹಿಳೆಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಅಲ್ಲೇ ಇದ್ದ ಎಂಎಲ್‌ಎ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ ಹಾಗೂ ಡಿಸಿ ಸತ್ಯಾಭಾಮ ಮೂಕ ಪೇಕ್ಷಕರಂತೆ ಇದನೆಲ್ಲಾ ನೋಡುತ್ತಾ ನಿಂತಿದ್ದಾರೆ.
ಇನ್ನು ಸಚಿವರಿಗೆ ಈ ರೀತಿ ಯಾಕೇ ಮಾತನಾಡುತ್ತೀರಾ ಎಂದು ಜಿಲ್ಲಾಧ್ಯಕ್ಷೆ ನಳಿನಿ ಕೇಳಿದ ವೇಳೆ ಮತ್ತೆ ಸಿಟ್ಟಾದ ಸಚಿವ ಮಾಧುಸ್ವಾಮಿ, ಅಲ್ಲೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಮೂಲಕ ಅವರನ್ನು ಎಳೆದ್ಯೂಯುವಂತೆ ಸೂಚನೆ ನೀಡಿದ್ದಾರೆ.ಹೀಗಾಗಿ ಸಚಿವರ ಸೂಚನೆ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ನಳಿನಿ ಅವರನ್ನು ಮಹಿಳಾ ಪೊಲೀಸರು ಬರುವುದನ್ನು ಕಾಯದೇ ತಾವೇ ದರದರನೇ ಎಳೆದ್ಯೂದಿದ್ದಾರೆ.
ಈ ಮೂಲಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಮೇಲೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ದುರಂಹಕಾರ ತೋರಿಸಿ ಅವಮಾನಿಸಿದ್ದಾರೆ.
ಒಟ್ಟಾರೆ ಕಾನೂನಿನ ಅರಿವು ಇಲ್ಲದಂತಹ ಮಾಧುಸ್ವಾಮಿ ಅವರನ್ನು ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ಕಾನೂನು ಖಾತೆಯಲ್ಲಿ ಕೂರಿಸಿರುವುದು ದೊಡ್ಡ ಎಡವಟ್ಟು ಎನ್ನಬಹುದು.ಜೊತೆಗೆ ಮಹಿಳೆಗೆ ಗೌರವ ಕೊಡುವುದನ್ನು ತಮ್ಮ ಸಚಿವ ಮಾಧುಸ್ವಾಮಿ ಸಿಎಂ ಯಡಿಯೂರಪ್ಪ ಕಲಿಸದಿರುವುದು ಇನ್ನೊಂದು ದುರಂತವಾಗಿದೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Click to comment

Trending

Exit mobile version