ಆರೋಗ್ಯ / HEALTH

ಕೊರೊನಾ ವಾರಿಯರ್ಸ್ ಗಳ ಸೇವೆ ಶ್ಲಾಘನೀಯ..

Published

on

ಸಿಂಧನೂರು(ರಾಯಚೂರು):ಕೋರನ್ ವೈರಸ್ ಹರಡದಂತೆ ತಡೆಗಟ್ಟಲು ತಮ್ಮ ಜೀವವನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾದರ ವೈದ್ಯರು, ಕಿರಿಯ ಆರೋಗ್ಯ ಸಹಾಯಕರು,ಆಶಾ ಕಾರ್ಯಕರ್ತರು ಸೇವೆ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಮರೇಗೌಡ ವಿರುಪಾಪುರ ಹೇಳಿದ್ದಾರೆ.
ತಾಲೂಕಿನ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರ್‌ಹೆಚ್ ನಂ.-೨ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ಕೊರೊನಾ ವಾರಿಯರ್ಸ್ಗಳಾದ ವೈದ್ಯರಿಗೆ,ಕಿರಿಯ ಆರೋಗ್ಯ ಸಹಾಯಕರಿಗೆ ಸನ್ಮಾನ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು,ಕೊರೊನಾ ವೈರಸ್‌ಗೆ ಇಡೀ ದೇಶವೇ ತಲ್ಲಣ್ಣ ಗೊಂಡಿದೆ ಎಂದರು.
ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಪೊಲೀಸ್ ಇಲಾಖೆ,ಕಂದಾಯ ಇಲಾಖೆ,ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆ ಗಳು ಕರ್ತವ್ಯದಲ್ಲಿ ನಿರತರಾಗಿವೆ.ಅದರಲ್ಲೂ ತಮ್ಮ ಜೀವವನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾದರ ವೈದ್ಯರು,ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಸೇವೆ ಶ್ಲಾಘನೀಯ ಹೇಳಿದರು…
ಕಾರ್ಯಕ್ರಮದಲ್ಲಿ ರಾಜಶೇಖರ್ ನಾಡಗೌಡ, ಡಾ.ಶಿವಲಿಂಗ ಪ್ರಭು ಸುಂಕದ,ಜಡಿಯಪ್ಪ ಹೂಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Click to comment

Trending

Exit mobile version