ಆರೋಗ್ಯ / HEALTH

ವೀಳ್ಯದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಿ..

Published

on

ಮಳವಳ್ಳಿ(ಮಂಡ್ಯ): ವೀಳ್ಯದೆಲೆ ಬೆಳೆಗಾರರಿಗೆ ಕೊರೊನಾ ವಿಶೇಷ ಪ್ಯಾಕೇಜ್ ಅಡಿ ಸೂಕ್ತ ಪರಿಹಾರ ಹಾಗೂ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ನಿಗದಿ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಒತ್ತಾಯಿಸಿದ್ದಾರೆ.
ಮಳವಳ್ಳಿಯ ತಹಸೀಲ್ದಾರ್ ಕಛೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವೀಳ್ಯದೆಲೆ ಬೆಳೆಗಾರರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಹೋರಾಟವನ್ನು ಉದ್ದೇಶಿಸಿ ಮಾತನಾಡುತ್ತಿದ ಅವರು, ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ, ಡಿ.ಕೆ.ಹಳ್ಳಿ, ನಿಟ್ಟೂರು, ಹುಸ್ಕೂರು, ಗೊಲ್ಲರಹಳ್ಳಿ, ದಾಸನ ದೊಡ್ಡಿ, ಮಳವಳ್ಳಿ ಪಟ್ಟಣ ಮುಂತಾದ ಕಡೆಗಳಲ್ಲಿ ವೀಳ್ಯದೆಲೆ ಬೆಳೆದು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದೇವೆ.ವೀಳ್ಯದೆಲೆ ಬೆಳೆಯುವುದು ಒಂದು ರೀತಿಯಲ್ಲಿ ಹಿಂದುಳಿದ ಗಂಗಾಮತ (ಬೆಸ್ತರು)ಜನಾಂಗದವರು ಕುಲಕಸುಬಾಗಿ ತಲತಲಾಂತರಗಳಿAದ ಬಂದಿದೆ. ಇದೊಂದು ಬಹಳ ಕೌಶಲ್ಯ ಪೂರಿತವಾದ ಕಸುಬಾಗಿದೆ.
ಆದರೆ ಕೋವಿಡ್ -೧೯ರ ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ್ದರಿಂದ ನಾವುಗಳು ಬೆಳೆದ ವೀಳ್ಯದೆಲೆ ಬೆಳೆ ಬೆಲೆ ಇಲ್ಲದೆ ಮಾರುಕಟ್ಟೆಯ ಸಮಸ್ಯೆಯಿಂದಾಗಿ ಬಹಳ ನಷ್ಟಕ್ಕೆ ಒಳಗಾಗಿ ಜೀವನ ನಡೆಸುವುದು ಬಹಳ ದುಸ್ತರವಾಗಿದೆ.
ಜೊತೆಗೆ ವೀಳ್ಯದೆಲೆ ಬೆಳೆಗಾರರಾದ ಬಹುತೇಕ ಮಂದಿ ಗುತ್ತಿಗೆ ಆಧಾರದ ಮೇಲೆ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದಾರೆ.ಒಂದು ಪಿಂಡಿ ಎಲೆಗೆ ೪೦೦೦-೫೦೦೦ರೂ.ಗಳಿದ್ದ ಬೆಲೆಯು ಕೇವಲ ೩೦೦-೪೦೦ ರೂ.ಗಳಿಗೆ ಕುಸಿದಿದೆ.ಒಂದು ಪಿಂಡಿ ಎಲೆ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸುಮಾರು ೧,೫೦೦ ರೂ.ಖರ್ಚಾಗುತ್ತದೆ.ಇಂತಹ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಸರ್ಕಾರ ಕೊರೊನಾ ಪ್ಯಾಕೇಜಿನಡಿ ಸೂಕ್ತ ಪರಿಹಾರವನ್ನು ಎಲ್ಲಾ ಬೆಳೆಗಾರರಿಗೆ ನೀಡಬೇಕೆಂದು ಒತ್ತಾಯಿಸಿದರು.
ಇದಲ್ಲದೆ,ಬೆಂಬಲ ಬೆಲೆ ನಿಗದಿಪಡಿಸುವುದು,ಮಳವಳ್ಳಿಯ ಎಪಿಎಂಸಿಯಲ್ಲಿ ವೀಳ್ಯದೆಲೆ ಮಾರುಕಟ್ಟೆ ತೆರೆಯುವುದು,ಮಳೆ ಗಾಳಿಯಿಂದ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವುದು, ಬೆಳೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡುವುದು.ವೀಳ್ಯದೆಲೆ ಬೆಳೆಗೆ ಸಂಬAಧಿಸಿದ ಪರಿಕರಗಳು ಮತ್ತು ಗೊಬ್ಬರ, ಔಷಧಿ ಇತ್ಯಾದಿಗಳನ್ನು ನೀಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಇದೇ ವೇಳೆ ತಮ್ಮ ಬೇಡಿಕೆಗಳ ಮನವಿಯನ್ನು ಸಿಎಂಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಹೇಶ್ ಕುಮಾರ್ ಬಿ.ಎಸ್.ಶಂಕರ್ ಶಾಂತರಾಜ್,ಸ್ವಾಮಿ ನಾಗರಾಜ್,ವೆಂಕಟೇಶ್ ಕೃಷ್ಣ,ನಾಗರಾಜ್,ಸಿದ್ದರಾಜ್ ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version