ಆರೋಗ್ಯ / HEALTH

ಮೈಸೂರು ಡಿಸಿ ನೋಡಿ ಕಲಿರಿ..ಬರೀ ಸೂಟ್‌ಬೂಟ್ ಹಾಕ್ಕೊಂಡು ಓಡಾಡೋದಲ್ಲ..

Published

on

ನಾಗಮಂಗಲ(ಮ0ಡ್ಯ): ಸಕ್ಕರೆ ನಾಡು ಮಂಡ್ಯಕ್ಕೆ ಮುಂಬೈ ಕಂಟಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರು, ಜಿಲ್ಲೆಯ ಶಾಸಕರ ಸಭೆ ನಡೆಯಿತು.
ಅಂದ ಹಾಗೇ ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿರ್ಮಲಾ ನಂದ ಶ್ರೀಗಳ ಸಾನಿದ್ಯದಲ್ಲಿ ನಡೆದ ಸಭೆಯಲ್ಲಿ ಸಚಿವ ನಾರಾಯಣಗೌಡ, ಶಾಸಕ ಸುರೇಶ್ ಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇನ್ನು ಸಭೆಯಲ್ಲಿ ಕ್ವಾರೆಂಟೈನ್ ಕೇಂದ್ರಗಳ ಅವ್ಯವಸ್ಥೆ ಮತ್ತು ಕೊರೊನಾ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲಾಡಳಿತದ ವೈಫಲ್ಯ ಕುರಿತು ಶಾಸಕ ಸುರೇಶ್ ಗೌಡ ಹರಿಹಾಯ್ದರು.
ಅಲ್ಲದೆ, ಸೂಟು ಬೂಟು ಹಾಕೊಂಡು ಹರಿಕಥೆ ಹೇಳಿದರೆ ಆಗಲ್ಲ,ಮೈಸೂರು ಡಿಸಿ ಮಾದರಿಯಲ್ಲಿ ಕೆಲಸ ಮಾಡಲಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ವಿರುದ್ದ ಆರೋಪಗಳ ಸುರಿಮಳೆಗೈದರು.
ಮಂಡ್ಯದಲ್ಲಿ ಆಗಿರುವ ಅನಾಹುತಕ್ಕೆ ಯಾರು ಜವಾಬ್ದಾರಿ ವಹಿಸಿಕೊಳ್ಳಲು ತಯಾರಿಲ್ಲ.ಕೊರೊನಾ ಸಂಬAಧಿಸಿದAತೆ ಡಬ್ಯೂ÷್ಲಎಚ್‌ಓ ಮಾರ್ಗಸೂಚಿಗಳನ್ನು ಮಂಡ್ಯ ಜಿಲ್ಲಾಡಳಿತ ಗಾಳಿಗೆ ತೂರಿದ್ದು, ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ.
ಒಂದೇ ಕೊಠಡಿಯಲ್ಲಿ ೧೦-೨೦ ಜನರನ್ನು ಕೂಡಿಹಾಕಿ ಕ್ವಾರಂಟೈನ್ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ.ಇದು ಯಾವ ರೀತಿ ಕ್ವಾರಂಟೈನ್ ಎಂಬುದನ್ನು ಗೂಗಲ್‌ನಲ್ಲಿ ಹುಡುಕಿದರು ಸಿಗುತ್ತಿಲ್ಲ.ಹೊರಗಡೆಯಿಂದ ಬಂದವರಿಗೆ ಪರೀಕ್ಷೆ ಮಾಡದೆ ಕುರಿಗಳ ರೀತಿ ಕೂಡಿ ಹಾಕಿದ್ದಾರೆ. ಕ್ವಾರಂಟೈನ್ ಸ್ಥಳಕ್ಕೆ ನೇಮಿಸಿರುವ ಸಿಬ್ಬಂದಿಗಳು ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂದು ಸುರೇಶ್ ಗೌಡ ದೂರಿದರು.
ಜಿಲ್ಲಾಡಳಿತ ನಮ್ಮ ಸಲಹೆ ತೆಗೆದುಕೊಳ್ಳುತ್ತಿಲ್ಲ,ಜಿಲ್ಲಾಡಳಿತದ ತಪ್ಪುಗಳನ್ನು ನಾವು ತಿಳಿಸಿದರೂ ಅದನ್ನು ಕೇಳುವ ಜ್ಞಾನ ಜಿಲ್ಲಾಡಳಿತಕ್ಕಿಲ್ಲ.
ಜಿಲ್ಲಾಧಿಕಾರಿ ಎಲ್ಲಾ ಸಭೆಗಳಿಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ.ಇದರಿಂದ ಮುಂದೊAದು ದಿನ ಜಿಲ್ಲೆ ಅನಾಹುತಕ್ಕೆ ತುತ್ತಾಗಲಿದೆ.ಜೊತೆಗೆ ಜಿಲ್ಲಾಧಿಕಾರಿಯ ಬೇಜವಬ್ದಾರಿಯಿಂದ ಈ ಅವ್ಯವಸ್ಥೆ ಕಾಡುತ್ತಿದೆ ಎಂದು ಕಿಡಿಕಾರಿದರು.
ಡಿಸಿ ವಿರುದ್ದ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ.ಆದರೆ ಜಿಲ್ಲೆಯ ರಕ್ಷಣೆ ಮುಖ್ಯ.ನಮ್ಮ ತಾಲೂಕಿಗೆ ಕೊಟ್ಟಿದ್ದ ಸಂಚಾರಿ ಬಸ್‌ನ್ನು ಕೆ.ಆರ್.ಪೇಟೆಗೆ ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, ಮಾತು ತೆಗೆದರೆ ಕೊರೊನಾ ವಿಚಾರದಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್, ದುಡ್ಡು ಅಂತ ಹೇಳುತ್ತೆ. ಅದು ಏನು ದುಡ್ಡು ದುಡ್ಡು ಅಂತ ನಿಂತಿದೆಯೋ ಸರ್ಕಾರ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ವಿಚಾರವಾಗಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಆಯೋಜಿಸಿದ್ದ ಈ ಸಭೆ ಸರ್ಕಾರಿ ಸಭೆಯೋ, ಖಾಸಗಿ ಸಭೆಯೋ ಏನು ಅಂತ ನನಗೆ ತಿಳಿಯುತ್ತಿಲ್ಲ.ಆದರೆ ಸ್ವಾಮೀಜಿಯವರನ್ನು ಸಭೆಗೆ ಕೂರಿಸಿ ನಮ್ಮನ್ನು ಕಟ್ಟಿಹಾಕಿದ್ದಾರೆ ಎಂದು ಸಚಿವ ನಾರಾಯಣಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಡಿಸಿ ಡಾ.ವೆಂಕಟೇಶ್ ಕೊರೊನಾ ಸಂಬ0ಧಿತ ಮಾಹಿತಿ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತೆ ಬಗ್ಗೆ ಮಾಃಇತಿ ನೀಡಿದರು.ಬಳಿಕ
ಸಚಿವ ನಾರಯಣಗೌಡ ಮಾತನಾಡಿ, ಜಿಲ್ಲೆಯ ಜನ ಯಾವುದೇ ರೀತಿಯಿಂದಲೂ ಆತಂಕಪಡಬಾರದು. ಕೊರೆನಾ ನಿಯಂತ್ರಣ ಮಾಡಲು ಸರ್ಕಾರ ಸನ್ನದ್ದಾಗಿದೆ.ಈ ವಿಷಯದಲ್ಲಿ ರಾಜಕೀಯ ಬೇಡ,ಸಹಕಾರವಿರಲಿ ಎಂದರು.
ಈ ವೇಳೆ ಚುಂಚಶ್ರೀಗಳು ಮಾತನಾಡಿ, ಲಾಕ್ ಡೌನ್ ಸಡಿಲಿಕೆಯಿಂದ ಉದಾಸೀನ ಬೇಡ.ಈ ವಿಷಯದಲ್ಲಿ ನಮಗೆ ನಾವೇ ವೈದ್ಯರಾಗಬೇಕು. ಒಳ್ಳೆಯ ದಿನಗಳು ಮರಳುವವರೆಗೆ ಸಾಮಾಜಿಕ ಅಂತರ ಮತ್ತು ಶುಚಿತ್ವ ನಮ್ಮ ಧ್ಯೇಯವಾಗಲಿ ಎಂದರು.
ನAತರ ಶಾಸಕರಾದ ಪುಟ್ಟರಾಜು, ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ ಹಾಗೂ ಅಪ್ಪಾಜಿಗೌಡರು ಅಭಿಪ್ರಾಯ ಮಂಡಿಸಿದರು.
ಪಾಂಡವಪುರ ಉಪವಿಭಾಗಾಧಿಕಾರಿ, ಜಿಲ್ಲೆಯ ತಹಸೀಲ್ದಾರ್‌ಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version