ಆರೋಗ್ಯ / HEALTH

ತಿ.ನರಸೀಪುರದಲ್ಲಿ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿದ ಜನಪ್ರತಿನಿಧಿಗಳು..

Published

on

ತಿ.ನರಸೀಪುರ(ಮೈಸೂರು): ಇಂದು ಬೆಳಿಗ್ಗೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ದೊಡ್ಡಾಪುರ ಗ್ರಾಮಪಂಚಾಯತಿಯಲ್ಲಿ ನಡೆಯುತ್ತಿರುವ ಮನ್ರೇಗಾ ವಿವಿಧ ಯೊಜನೆಗಳನ್ನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಅಶ್ವಿನ್ ಕುಮಾರ್ ಪರಿಶೀಲನೆ ನಡೆಸಿದರು.
ಆದರೆ ವಿವಿಧ ಯೊಜನೆಗಳ ಪರಿಶೀಲನೆ ವೇಳೆ ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿದ್ದು, ಸಚಿವರು, ಶಾಸಕರು ಭೇಟಿ ನೀಡಿದ್ದ ಸಮಯದಲ್ಲಿ ಜನರು ಒಟ್ಟಾಗಿ ಸೇರಿದರಲ್ಲದೇ ಸಾಮಾಜಿಕ ಅಂತರ ಮರೆತಿದ್ದು ಕಂಡುಬAದಿದೆ.
ಅAದ ಹಾಗೇ ಮೈಸೂರು ಸದ್ಯ ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. ಆದರೂ ಲಾಕ್‌ಡೌನ್ ಹಾಗೂ ಕೆಲವು ನಿಯಮಾವಳಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಜನತೆಗೆ ಸೂಚಿಸಲಾಗಿದೆ. ಜೊತೆಗೆ ಕೊರೊನಾ ತಡೆಗಟ್ಟುವ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ ಬಂದಿದೆ.ಆದರೆ, ಜಿಲ್ಲೆಯ ತಿ.ನರಸೀಪುರದಲ್ಲಿಂದು ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತಂತೆ ಕಂಡುಬAತು.
ಇನ್ನು ದೊಡ್ಡನಹುಂಡಿ ಹಾಗೂ ಮಾವಿನಹಳ್ಳಿ ಕೆರೆ ಕಾಮಗಾರಿ ವೀಕ್ಷಣೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಅಶ್ವಿನ್ ಕುಮಾರ್, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಗಮಿಸಿದಾಗ ಸಾಲು ಸಾಲಾಗಿ ವಾಹನಗಳು ಬಂದವು.ಅಲ್ಲದೇ ಜನಪ್ರತಿನಿಧಿಗಳಿಗೆ ಹಾರ ಹಾಕುವ ವೇಳೆ ಜನರು ಗುಂಪು ಗುಂಪಾಗಿ ಸೇರಿದ್ದರು.
ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೈಮರೆತಿದ್ದರು.
ವಿಪರ್ಯಾಸವೆಂದರೆ ಕೆಲ ಅಧಿಕಾರಿಗಳು ಮಾಸ್ಕ್ ಧರಿಸದೇ ಆಗಮಿಸಿದ್ದರು. ಸಭೆ ಸಮಾರಂಭಗಳಿಗೆ ಕಡಿಮೆ ಜನಸಂಖ್ಯೆ ಇರಬೇಕೆಂದು ರಾಜ್ಯ ಸರ್ಕಾರವೇ ನಿರ್ಬಂಧ ಹೇರಿದೆ. ಹೀಗಿರುವಾಗ ಇಲ್ಲಿ ೫೦೦ಕ್ಕೂ ಹೆಚ್ಚು ಜನರು ಒಂದೆಡೆ ಸೇರಿದ್ದು ಮಾತ್ರ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿದಕ್ಕೆ ಸಾಕ್ಷಿಯಾಗಿತ್ತು.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಧಾನಿ ಮಂತ್ರಿಗಳು ನೀಡಿರುವ ೨೦ಲಕ್ಷ ಕೋಟಿ ಅನುದಾನದಲ್ಲಿ ೪೦ಸಾವಿರ ಕೋಟಿ ನರೇಗಾ ಯೋಜನೆಗೆ ನೀಡಿದ್ದಾರೆ. ಈ ಯೋಜನೆಯಿಂದ ರೈತರು ಮತ್ತು ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತಿದೆ.ರಾಜ್ಯದಲ್ಲಿ ಒಂದೇ ದಿನ ೯೦ಸಾವಿರಕ್ಕೂ ಹೆಚ್ಚು ಜನ ಕೂಲಿಯನ್ನು ಅರಸಿ ಬಂದಿದ್ದಾರೆ. ಹಾಗೆಯೇ ಕೆರೆ ಅಭಿವೃದ್ಧಿ ಪಡಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ.ಜೊತೆಗೆ ಖುದ್ದಾಗಿ ನಾನೇ ಕಾಮಗಾರಿಯನ್ನು ಪರಿಶೀಲಿಸುತ್ತಿದ್ದೇನೆ ಎಂದು ಹೇಳಿದರು.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ(ಮೈಸೂರು)

Click to comment

Trending

Exit mobile version