ಆರೋಗ್ಯ / HEALTH

ವಲಸೆ ಕಾರ್ಮಿಕರಿಗೆ ಕೊಟ್ಟ ಮಾತು ಉಳಿಸಿಕೊಂಡ ನಂಜನಗೂಡಿನ ತಹಶೀಲ್ದಾರ್..

Published

on

ನಂಜನಗೂಡು(ಮೈಸೂರು):ಕೊನೆಗೂ ವಲಸೆ ಕಾರ್ಮಿಕರಿಗೆ ಕೊಟ್ಟ ಮಾತನ್ನು ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಈಡೇರಿಸಿದ್ದಾರೆ.ಈ ಮೂಲಕ ವಲಸೆ ಕೂಲಿಕಾರ್ಮಿಕರಿಗೆ ಅವರು ಆಸರೆಯಾಗಿದ್ದಾರೆ.
ಹೌದು, ಹೊರರಾಜ್ಯ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಿಂದ ಕೂಲಿ ಅರಸಿ ವಲಸೆ ಬಂದಿದ್ದ ಕಾರ್ಮಿಕರು ತಾಲೂಕಿನ ಮಲ್ಲು ಪುರ ಗ್ರಾಮದ ಬಣ್ಣರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಆದರೆ ಮಹಾಮಾರಿ ಕೊರೊನಾ ಲಾಕ್ ಡೌನ್ ಇನ್ನೆಲೆ ಕೆಲಸವಿಲ್ಲದೆ ಇವರೆಲ್ಲ ಬರಿಗೈಯಲ್ಲೇ ದಿನ ದೂಡುತ್ತಿದ್ದರು.ಜೊತೆಗೆ ಗುತ್ತಿಗೆದಾರರು ಕೂಲಿಕಾರ್ಮಿಕರ ಕೈಗೆ ಸಿಗದೆ ನಾಪತ್ತೆಯಾಗಿದ್ದರು. ಅಲ್ಲದೆ ಕಾರ್ಖಾನೆಯೂ ಕೂಡ ಕಾರ್ಮಿಕರಿಗೆ ಆಸರೆಯಾಗದೆ ಕೈಚೆಲ್ಲಿತ್ತು.ಇದಾದ ಬಳಿಕ ಕಾರ್ಮಿಕರು ಹದಿನೈದು ದಿನಗಳ ಹಿಂದೆ ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಅವರ ಮೊರೆ ಹೋಗಿದ್ದರು.
ಈ ವೇಳೆ ತಹಶೀಲ್ದಾರ್ ಮಹೇಶ್ ಕುಮಾರ್ ಮತ್ತು ಸಿಬ್ಬಂದಿಗಳು ವಲಸೆ ಕೂಲಿಕಾರ್ಮಿಕರಿಗೆ ನಿಮ್ಮ ಊರು ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದ್ರು
ಅದರಂತೆ ಹೊರರಾಜ್ಯ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ೧೫೩ ವಲಸೆ ಕೂಲಿಕಾರ್ಮಿಕರನ್ನು ಸರ್ಕಾರಿ ಬಸ್ಸುಗಳ ಮುಖಾಂತರ ತಮ್ಮ ಗ್ರಾಮಗಳಿಗೆ ತಲುಪಲು ತಹಶೀಲ್ದಾರ್ ಮಹೇಶ್ ಕುಮಾರ್ ಅನುವು ಮಾಡಿಕೊಟ್ಟಿದ್ದಾರೆ
ಇದಲ್ಲದೆ, ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಈ ವಲಸೆ ಕೂಲಿಕಾರ್ಮಿಕರಿಗೆ ಊಟ ತಿಂಡಿಯನ್ನು ಕೂಡ ನೀಡಿ ಗೌರವಿಸಿ ತಮ್ಮ ಗ್ರಾಮಗಳಿಗೆ ತಲುಪಲು ಯಶಸ್ವಿಯಾಗಿ ಮಾನವೀಯತೆ ಮೆರೆದಿದ್ದಾರೆ.
ಇದೇ ವೇಳೆ ತಹಶೀಲ್ದಾರ್ ಮಹೇಶ್ ಕುಮಾರ್‌ರ ಕಾರ್ಯವೈಖರಿಗೆ ಹೊg Àರಾಜ್ಯದ ವಲಸೆ ಕೂಲಿ ಕಾರ್ಮಿಕರು ಅಭಿನಂದನೆ ಸಲ್ಲಿಸಿ ನಮಸ್ಕರಿಸಿ ತಮ್ಮ ಗ್ರಾಮಗಳತ್ತ ತೆರಳಿದರು.ಜೊತೆಗೆ ನಂಜನಗೂಡು ತಾಲ್ಲೂಕಿನಲ್ಲಿ ಮಹೇಶ್ ಕುಮಾರ್‌ರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ

ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version