ಆರೋಗ್ಯ / HEALTH

ಎಲ್ಲವೂ ಎಣ್ಣೆಗಾಗಿ.. ಬಳ್ಳೂರಿನಲ್ಲಿ ಕಳ್ಳ ಕಿಂಡಿ.. ಕರ್ನಾಟಕಕ್ಕೆ ಬಂದ ತಮಿಳರಿಗೆ ಲಾಠಿ ರುಚಿ…

Published

on

ಆನೇಕಲ್(ಬೆಂ.ನಗರ): ತಮಿಳುನಾಡಿನಲ್ಲಿ ಕೋವಿಡ್ ಸಂಖ್ಯೆ ಕೈಮೀರಿ ಹೋಗುತ್ತಿದೆ.. ಇದ್ರಿಂದ ಸಾಕಷ್ಟು ಜನ ತಮಿಳಿಗರು ಕರ್ನಾಟಕ್ಕೆ ಪ್ರಯಾಣ ಮಾಡುತ್ತಿದ್ದಾರೆ.ಹೀಗಾಗಿ ಇದಕ್ಕೆ ಕಡಿವಾಣ ಹಾಕೋದಕ್ಕೆ ಅಂತ ನಮ್ಮ ಗಡಿಯಲ್ಲಿ ಬಿಗಿ ಬಮದೋಬಸ್ಥ್ ಮಾಡಿದ್ದಾರೆ..ಆದ್ರು ಸಹ ಕಳ್ಳರು ಮಾತ್ರ ನುಸುಳುವುದನ್ನ ಮಾತ್ರ ಬಿಟ್ತಾಯಿಲ್ಲ..
ಹೌದು,ಕರೋನಾ ಮಾಹಾಮಾರಿ ಯಾವ ರಾಜ್ಯ, ಜಿಲ್ಲೆ ಅಂತಾನು ನೋಡ್ತಾಯಿಲ್ಲ..ಎಲ್ಲಾ ಕಡೆಯು ತನ್ನ ನರ್ತನ ಮಾಡ್ತಾಯಿದೆ..
ಅದ್ರಲ್ಲು ನಮ್ಮ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಪ್ರಕರಣದ ಸಂಖ್ಯೆ ಹೆಚ್ಚಾಗ್ತಾಯಿದಿಯೊ ಹೊರತು ಕಮ್ಮಿ ಆಗ್ತಾಯಿಲ್ಲ.. ಹೀಗಿರುವಾಗ ಕರ್ನಾಟಕ ಸರ್ಕಾರ ಕೂಡ ತಮಿಳುನಾಡಿನ ಜನರನ್ನು ಕರ್ನಾಟಕದ ಕಡೆಗೆ ಬರೋದಕ್ಕೆ ಸಂಪೂರ್ಣ ನಿಷೇಧ ಹೇರಿದೆ.. ಆದ್ರು ಸಹ ಕರ್ನಾಟಕಕ್ಕೆ ದಿನಕ್ಕೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಸಾವಿರಾರು ವಾಹನಗಳು ಲಗ್ಗೆ ಇಟ್ತಾಯಿವೆ ಅಂದ್ರೆ ನೀವು ನಂಬ್ಲೇ ಬೇಕು.. ಸದ್ಯ ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗ ವಾಗಿರುವ ಅತ್ತಿಬೆಲೆಯ ಸಮೀಪವಿರುವ ಬಳ್ಳೂರು ಎಂಬಾ ಹಳ್ಳಿಯ ತೋಪುಗಳಿಂದ ಮತ್ತು ಗದ್ದೆಗಳಿಂದ ಸಾಕಷ್ಟು ಜನರು ಕರ್ನಾಟಕದ ಕಡೆಗೆ ಎಂಟ್ರಿ ಕೊಡ್ತಾಯಿದ್ದಾರೆ.. ಬೈಕಿ ಗಳಲ್ಲಿ ಕಾಲ್ ನಡಿಗೆಯ ಮುಖಾಂತರ ಬರ್ತಾಯಿದ್ದಾರೆ..
ಇನ್ನು ಈ ಬಗ್ಗೆ ಗಮನ ಹರಿಸಿ ಅಕ್ರಮವಾಗಿ ನುಸುಳುತ್ತಿದ್ದ ಬೈಕ್ ಸವಾರರು ಬರುತ್ತಿದ್ದ ದಾರಿಯಲ್ಲಿ ಎರಡರಿಂದ ಮೂರು ಅಡಿ ಗುಂಡಿ ತೋಡಿಸಿದ್ದಾದ್ರು ಸಹ ಬೈಕ್ ಸವಾರರು ಮಾತ್ರ ಒರ್ವ ವ್ಯಕ್ತಿ ಮುಂದೆಯಿAದ ಮತ್ತು ಇನ್ನೋರ್ವ ವ್ಯಕ್ತಿ ಹಿಂದಿನಿAದ ನೂಕ್ಕುತ್ತ ಅದೇ ಗುಂಡಿಯನ್ನು ದಾರಿಯನ್ನಾಗಿ ಮಾಡಿಕೊಂಡಿದ್ರು..
ಹೀಗಾಗಿ ಇದರ ಬಗ್ಗೆ ಮಾದ್ಯಮಗಳು ಸಹ ವರದಿ ಮಾಡಿದ್ವು..ಇದ್ರಿಂದ ಇಂದು ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.. ನಂತರ ಜೆಸಿಬಿ ತರೆಸಿ ಯಾರು ಕೂಡ ಇನ್ನು ಮುಂದೆ ಬಾರದ ಹಾಗೆ ಅಲ್ಲಿ ಕೆಲಸ ಮಾಡಿಸಿದ್ರು..
ಇನ್ನು ಈ ಎಲ್ಲಾ ಬೆಳವಣಿಗೆಗಳನ್ನು ಅರಿತ ಗ್ರಾಮಾಂತರ ಎಸ್ಪಿ ರವಿ.ಡಿ.ಚನ್ನಣ್ಣನವರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು..
ಈ ನಡುವೆ ಕೆಲ ಬೈಕ್ ಸವಾರರಿಗೆ ಪೊಲೀಸರು ಲಾಟಿ ರುಚಿ ತೋರಿಸಿದ್ರು..ಇನ್ನು ಎಣ್ಣೆ ಬೆಲೆ ತಮಿಳುನಾಡಿನಲ್ಲಿ ಜಾಸ್ತಿಯಾಗಿದೆ ಇದ್ರಿಂದ ಅಲ್ಲಿನ ಜನರು ಇಲ್ಲಿಗೆ ಬರ್ತಾಯಿದ್ದಾರೆ ಅಂತ ಹೇಳ್ತಾಲಾಗ್ತಾಯಿದೆ.. ಇದ್ರಿಂದ ಎಚ್ಚೆತ್ತುಕೊಂಡ ತಮಿಳುನಾಡು ಬಾಗದ ಕೃಷ್ಣಗಿರಿ ಜಿಲ್ಲೆಯ ಎಸ್ಪಿ ಗಂಗಾಧರ್ ಕೂಡ ಭೇಟಿ ನೀಡಿದ್ರು..
ಬೆಂಗಳೂರು ಗ್ರಾಮಾಂತರ ಎಸ್ಪಿ ಮತ್ತು ಕೃಷ್ಣಗಿರಿ ಎಸ್ಪಿ ಇಬ್ಬರು ಸಹ ಸ್ಥಳಕ್ಕೆ ಭೇಟಿ ಮಾಡಿ ಇದಕ್ಕೆ ಶಾಶ್ವತ ಪರಿಹಾರ ನೀಡೋದಾಗಿ ಭರವಸೆ ನೀಡಿದ್ರು..
ಒಟ್ಟಿನಲ್ಲಿ ಕರೋನಾ ಮಾತ್ರ ಯಾವ ಜನ, ಜಾತಿ, ಜಿಲ್ಲೆ, ರಾಜ್ಯ ಅಂತಾನು ನೋಡದೆ ಜನರನ್ನು ಬಲಿ ಪಡಿತಿರೋದು ಮಾತ್ರ ಸತ್ಯ..

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version