ಆರೋಗ್ಯ / HEALTH

ರಾಜ್ಯದಲ್ಲಿ ಉಪಯೋಗವಾಗದ ಮಂತ್ರಿಗಳು ಏಕೆ ಬೇಕು..?

Published

on

ತಿಪಟೂರು(ತುಮಕೂರು): ಭಾರತದ ಬೆನ್ನೆಲುಬು ರೈತರ ನಡುವನ್ನೇ ಮುರಿಯಲು ಹೊರಟಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯದೇ ಹೋದರೆ ಲಾಕ್‌ಡೌನ್ ಮರೆತು ಉಗ್ರ ಹೋರಾಟ ಮಾಡುವುದಾಗಿ ಎಪಿಎಂಸಿ ಅಧ್ಯಕ್ಷ ಮಡೇನೂರು ಲಿಂಗರಾಜು ಎಚ್ಚರಿಸಿದ್ದಾರೆ.
ನಗರದ ಎಪಿಎಂಸಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಇಷ್ಟುದಿನ ಎಪಿಎಂಸಿಯು ರೈತರಿಗೆ ಜೀವಾಳವಾಗಿದ್ದು,ಈಗ ಅದನ್ನೇ ಕಿತ್ತುಕೊಳ್ಳಲು ಹೊರಟಿದೆ.ಕೇಂದ್ರದ ಸುಗ್ರೀವಾಜ್ಞೆಯ ಪ್ರಕಾರ ರಾಜ್ಯಸರ್ಕಾರವು ಮಂಡಿಸಿರುವ ಎಪಿಎಂಸಿ ಕಾಯ್ದೆಯನ್ನು ತಕ್ಷಣವೇ ವಾಪಸ್ ಪಡೆದು ರೈತರ ಹಿತವನ್ನು ಕಾಯಬೇಕು.ಇಲ್ಲಿದ್ದರೆ ರೈತಪರ ಸಂಘಟನೆಗಳ ಮುಖಾಂತರ ಉಗ್ರ ಹೋರಾಟ ಮಾಡಲಾಗುವದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ,ಈಗಿರುವ ವ್ಯವಸ್ಥೆ ಯಲ್ಲಿ ಯೇ ರೈತರಿಗೆ ಅನ್ಯಾಯವಾಗುತ್ತಿತ್ತು.
ಇನ್ನೂ ಕಾರ್ಪೊರೇಟ್ ಕಂಪನಿಗಳ ಕೈಗೆ ರೈತರನ್ನು ನೀಡಿರುವುದನ್ನು ನೋಡಿದರೆ ಮತ್ತೆ ರೈತರು ನಮ್ಮೊಳಗಿನ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡಬೇಕಾಗಿ ಬರಬಹುದು ಎಂದು ತಿಳಿಸಿದರು
ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಖಾಸಗಿ ವಹಿಸುವುದಾದರೆ ಸರಕಾರ,ಪ್ರಜಾಪ್ರಭುತ್ವ ಏಕೆ ಬೇಕು,ಸಾರ್ವಜನಿಕರಿಗೆ ಉಪಯೋಗ ವಾಗದ ಮಂತ್ರಿಗಳು ಏಕೆ ಬೇಕು?,ಸರಕಾರವನ್ನು ಖಾಸಗಿಗೆ ವಹಿಸಿ ರಾಜಣ್ಣ ತಿಳಿಸಿದರು.
ರೈತರನ್ನು ಬಲಿ ಕೊಟ್ಟು ಕಾರ್ಪೊರೇಟ್ ಕಂಪನಿ ಗಳನ್ನು ಉದ್ದಾರ ಮಾಡುವ ಉನ್ನಾರ, ಮುಕ್ತ ವ್ಯಾಪಾರ ನೀತಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಕೂಡ ಬೀದಿಗೆ ಬರಬೇಕಾಗುತ್ತದೆ, ಯಾವುದೇ ತೊಂದರೆಯಾದರು ಎಪಿಎಂಸಿ ವ್ಯಾಪ್ತಿಗೆ ಒಳಪಡುವುದಿಲ್ಲ,ಕಾರ್ಪೊರೇಟ್ ಕಂಪನಿಗಳಿಗೆ ಮೊದಲಿಗೆ ರೈತರಿಗೆ ಒಳ್ಳೆಯ ಬೆಲೆ ನೀಡುತ್ತಾರೆ.ನಂತರ ಇವರ ಹಿಡಿತಕ್ಕೆ ಬಂದ ಮೇಲೆ ಎಲ್ಲವೂ ತಮ್ಮ ಬೆಲೆಗಳ ಮೇಲೆ ನಿಗದಿ ಮಾಡಲಾಗುವುದು,ಲಕ್ಷಾಂತರ ಕೋಟಿ ಬಂಡವಾಳ ಹಾಕುವವರಿಗೆ ಮಣೆ ಹಾಕಿ ಎಲ್ಲರನ್ನೂ ನಾಶ ಮಾಡಲಾಗುತ್ತದೆ ಎಂದು ಆರ್.ಕೆ.ಎಸ್ ಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಬೆಲೆಕಾವಲು ಸಮಿತಿ ಶ್ರೀಕಾಂತ್, ಮನೋಹರ್ ಪಟೇಲ್, ತಾ.ಪಂ ಸದಸ್ಯ ನ್ಯಾಕೇನಹಳ್ಳಿ ಸುರೇಶ್ ಮತ್ತಿತರ ಸಂಘಟನೆಗಳ ಸದಸ್ಯರುಗಳು ಮತ್ತಿತರರಿದ್ದರು.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version