ಆರೋಗ್ಯ / HEALTH

ರೈತರಿಗೆ ಮರಳು ಮಿಶ್ರಿತ ಗೊಬ್ಬರ ಮಾರಾಟ..ಎರಡು ಅಂಗಡಿಗಳ ಪರವಾನಿಗೆ ರದ್ದು

Published

on

ದೇವದುರ್ಗ(ರಾಯಚೂರು): ದೇವದುರ್ಗ ಪಟ್ಟಣದಲ್ಲಿ ಗೊಬ್ಬರದ ಅಂಗಡಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮರಳು ಮಿಶ್ರಿತ ಗೊಬ್ಬರ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಪರವಾನಿಗೆ ರದ್ದು ಪಡಿಸಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಎಸ್.ಪ್ರಿಯಾಂಕಾ ತಿಳಿಸಿದ್ದಾರೆ.
ರವಿ ಪಾಟೀಲ್ ಮಾಲೀಕತ್ವದ ಬಸವ ಕೃಷಿ ಕೇಂದ್ರ ಮತ್ತು ಎಸ್‌ಎಂ ಆಗ್ರೋ ಏಜೆನ್ಸಿಗಳಿಗೆ ನೀಡಲಾಗಿದ್ದ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.ತಾಲೂಕಿನಲ್ಲಿ ಇಂತಹ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್ ಹಾಗೂ ಮಾರಾಟಕ್ಕೆ ತಡೆಯಾಜ್ಞೆಗಳನ್ನು ಜಾರಿಗೊಳಿಸಲಾಗಿತ್ತು.ಜೊತೆಗೆ ಗೊಬ್ಬರ ದಾಸ್ತಾನು ಕುರಿತು ಮಾಹಿತಿ ಕೇಳಲಾಗಿತ್ತು ಆದಾಗ್ಯೂ ಬಸವ ಕೃಷಿ ಕೇಂದ್ರ ಮತ್ತು ಎಸ್‌ಎನ್ ಆಗ್ರೋ ಏಜೆನ್ಸಿ ಅಂಗಡಿಗಳಲ್ಲಿ ನಿರಂತರ ಮರಳು ಮತ್ತು ಕಲ್ಲು ಮಿಶ್ರಿತ ಗೊಬ್ಬರ ಮಾರಾಟ ಮಾಡುತ್ತಾ ರೈತರನ್ನು ವಂಚಿಸುತ್ತಾ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೆ,ಮುಂದೆ ಇಂಥ ಪ್ರಕರಣಗಳು ಕಂಡುಬAದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.ರೈತರು ಕೂಡ ಇಂಥ ಅಂಗಡಿಗಳ ಬಗ್ಗೆ ಜಾಗೃತರಾಗಬೇಕು ಮತ್ತು ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ಸಲಹೆ ನೀಡಿದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Click to comment

Trending

Exit mobile version