ಆರೋಗ್ಯ / HEALTH

‘ನ್ಯಾಯ’ ಯೋಜನೆಯಡಿ ಕಾರ್ಮಿಕರಿಗೆ ಧನಸಹಾಯ

Published

on

ಸಿಂಧನೂರು(ರಾಯಚೂರು):ನಗರದ ಯುವ ಕಾಂಗ್ರೆಸ್‌ನಿAದ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಪುಣ್ಯತಿಥಿ ಅಂಗವಾಗಿ ನ್ಯಾಯ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಧನ ಸಹಾಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ನ್ಯಾಯ’ ಯೋಜನೆ ರೂಪಿಸಿತ್ತು. ಬಡವರಿಗೆ ತಿಂಗಳಿಗೆ ೬ಸಾವಿರ ಅಂದರೆ ದಿನಕ್ಕೆ ೨೦೦ ರೂ. ನೀಡುವ ಯೋಜನೆ ಇದಾಗಿತ್ತು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿಯವರ ಆದೇಶದ ಮೇರೆಗೆ ಒಂದು ದಿನದ ನ್ಯಾಯ ಯೋಜನೆಯನ್ನು ಮಾಡಲಾಗಿದೆ.ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರನ್ನು ಗುರುತಿಸಿ ಪ್ರತಿ ಒಬ್ಬ ಕೂಲಿ ಕಾರ್ಮಿಕರಿಗೆ ೨೦೦ರೂ.ಗಳಂತೆ ಧನ ೨೯ಜನ ಕೂಲಿ ಕಾರ್ಮಿಕರಿಗೆ ಧನ ಮಾಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ಸಾಕಷ್ಟು ರೈತರು,ಬಡ ಮತ್ತು ಕೂಲಿ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.ಪ್ರಧಾನಿ ಮೋದಿ ಕಾಂಗ್ರೆಸ್ ರೂಪಿಸಿದ ನ್ಯಾಯ ಯೋಜನೆಯನ್ನು ಜಾರಿ ಮಾಡಬೇಕು. ಕೇಂದ್ರ ಸರ್ಕಾರವು ೬ ತಿಂಗಳವರೆಗೆ ಕೂಲಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶರಣಪ್ಪ ಉಪ್ಪಲದೊಡ್ಡಿ, ಮುಖಂಡರಾದ ಸೋಮನಗೌಡ ಬಾದರ್ಲಿ,ಜಹಿರುಲ್ ಹಸನ್, ವೆಂಕಟೇಶ ರಾಗಲಪರ್ವಿ, ಶರಣಯ್ಯ ಸ್ವಾಮಿ ಕೋಟೆ, ಶಿವುಕುಮಾರ್ ಜವಳಿ, ನನ್ನುಸಾಬ್ ಮೇಸ್ತ್ರಿ, ವೀರರಾಜು, ಇಲಿಯಾಸ್ ಪಟೇಲ್, ಅಮರೇಶ ಬಾಗೋಡಿ, ನಾಗರಾಜ ಕವಿತಾಳ, ಮುದಿಯಪ್ಪ, ಅಮೀನ್, ಜಾವೀದ್, ರಫೀ, ಖಾಜಾ ಬಡಿಬೇಸ್, ರಾಜಾಸಾಬ್ ಕಿಡದೂರು ಸೇರಿದಂತೆ ಅನೇಕರು ಹಾಜರಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Click to comment

Trending

Exit mobile version