ಆರೋಗ್ಯ / HEALTH

ರಂಗಭೂಮಿ ವೃತ್ತಿ ಕಲಾವಿದರಿಗೆ ಸಹಕಾರ ಅತ್ಯಗತ್ಯ

Published

on

ನಾಗಮಂಗಲ(ಮ0ಡ್ಯ): ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದ ೬೦ಕ್ಕೂ ಹೆಚ್ಚು ದಿನಗಳ ಕಾಲದ ಲಾಕ್‌ಡೌನ್ ಘೋಷಣೆಯಿಂದ ಬದುಕಿನ ಬವಣೆಯ ಸುಳಿಯಲ್ಲಿ ಸಿಲುಕಿರುವ ಪೌರಾಣಿಕ ರಂಗಭೂಮಿ ವೃತ್ತಿ ಕಲಾವಿದರಿಗೆ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಉಚಿತ ದಿನಸಿ ಕಿಟ್ ವಿತರಿಸುವ ಮೂಲಕ ವೈಯಕ್ತಿಕ ಸಹಾಯ ನೀಡಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ೬೦ಕ್ಕೂ ಹೆಚ್ಚಿನ ವೃತ್ತಿ ರಂಗಭೂಮಿ ಕಲಾವಿದರಿಗೆ ಆಹಾರ ಪದಾರ್ಥಗಳ ಬ್ಯಾಗ್ ವಿತರಿಸಿದ ಮಾತನಾಡಿದ ಶಾಸಕ ಅಪ್ಪಾಜಿಗೌಡ, ಪ್ರತಿ ವರ್ಷವೂ ಫೆಬ್ರವರಿಯಿಂದ ಏಪ್ರಿಲ್ ಅಥವ ಮೇ.ತಿಂಗಳವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಪೌರಾಣಿಕ ನಾಟಕ ಪ್ರದರ್ಶನ ಕಾಣುತ್ತಿದ್ದವು.ಇದರಿಂದ ಅದೆಷ್ಟೋ ಹಾರ್ಮೋನಿಯಂ ಮಾಸ್ಟರ್ ಸೇರಿದಂತೆ ಪಕ್ಕ ವಾದ್ಯ ನುಡಿಸುವವರ ಜೀವನ ನಡೆಯುತ್ತಿತ್ತು.
ಆದರೆ ಅನಿವಾರ್ಯವಾಗಿ ಇಡೀ ವಿಶ್ವವನ್ನೇ ಆವರಿಸಿದ ಕೊರೊನಾ ಎಂಬ ಹೆಮ್ಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ.ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಇಂತಹ ಕಲಾವಿದರ ಬದುಕು ದುಸ್ಥರವಾಗಿದೆ.ಇವರ ಸಹಾಯಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದರು.
ಈ ನಾಡಿನ ಕಲಾ ಸಂಸ್ಕೃತಿಯ ಉಳಿವಿಗೆ ಕಲಾವಿದರ ರಕ್ಷಣೆ ಅತ್ಯಗತ್ಯ.ಈ ನಿಟ್ಟಿನಲ್ಲಿ ಸಂಘ-ಸAಸ್ಥೆಗಳು ಸೇರಿದಂತೆ ಉಳ್ಳವರು ಗಮನ ಹರಿಸಬೇಕಿದೆ.ಇಂತಹ ಬೇಗುದಿ ಸನ್ನಿವೇಶದಲ್ಲಿ ವಿಚಲಿತರಾಗದೆ ಸಾಮಾಜಿಕ ಅಂತರದ ಜೊತೆಗೆ ಸ್ವಚ್ಚತೆ ಕಡೆ ನಿಮ್ಮ ಗಮನವಿರಲಿ. ಮುಂದಿನ ದಿನಗಳಲ್ಲಿ ನೆಮ್ಮದಿಯಯ ಬದುಕು ನಿಮ್ಮದಾಗುವ ಸನ್ನಿವೇಶ ಆಗಿಂದಾಗ್ಗೆ ದೊರಕಲಿ ಎಂದರು.
ಈ ವೇಳೆ ತಾಲ್ಲೂಕು ಪಂಚಾಯತ್ ಅಧ್ಯಕ್ಷ ದಾಸೇಗೌಡ್ರು, ಸರ್ಕಾರಿ ನೌಕರರ ಸಂಘದ ಆಧ್ಯಕ್ಷ ಸಿ.ಜೆ.ಕುಮಾರ್, ಉದ್ಯಮಿ ಕನ್ನಾಘಟ್ಟದ ವೆಂಕಟೇಶ್ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಹೇಮರಾಜ್ ಸೇರಿದಂತೆ ಹಾರ್ಮೋನಿಯಂ, ತಬಲ, ಕ್ಲಾರಿಯೋನೆಟ್, ಕ್ಯಾಷಿಯೋ ವಾದಕರು ಹಾಗೂ ಹರಿಕಥೆ ವಿದ್ವಾಂಸರAತಹ ವೃತ್ತಿ ಕಲಾವಿದರು ಹಾಜರಿದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version